ಪಾಕೆಟ್ ರಾಕೆಟ್: ಯುವಕರ ಹೃದಯ ಕದಿಯಲು ಬಂದ 2024ರ ಕೆಟಿಎಂ 200 ಡ್ಯೂಕ್ ಬೈಕ್ ಬಿಡುಗಡೆ

ಭಾರತದಲ್ಲಿ ಕೆಟಿಎಂ ಡ್ಯೂಕ್ ಸರಣಿಯ ಫೈನ್‌ ಬೇಸ್‌ ಏನು ಎನ್ನುವುದು ಎಲ್ಲರಿಗೂ ಗೊತ್ತು. ಡ್ಯೂಕ್‌ನ ಸ್ಟೈಲಿಶ್‌ ಡಿಸೈನ್ ಮತ್ತು ಇದರ ಅದ್ಭುತ ಪರ್ಫಾಮೆನ್ಸ್‌ಗೆ ಬೆರಗಾಗದವರೇ ಇಲ್ಲ. ಅದರಲ್ಲೂ ಹದಿ ಹರೆಯದ ಯುವಕರ ಮೊದಲ ಗುರಿಯೇ ಕೆಟಿಎಂ ಡ್ಯೂಕ್‌ ಸರಣಿಯ ಯಾವುದಾದರೂ ಒಂದು ಬೈಕ್‌ ಕೊಳ್ಳಬೇಕು ಎಂಬುದು ಆಗಿರುತ್ತೆ. ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕೆಟಿಎಂ ಇಂಡಿಯಾ ತನ್ನ ನವೀಕರಿಸಿದ ಕೆಟಿಎಂ 200 ಡ್ಯೂಕ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಕೆಟಿಎಂ 200 ಡ್ಯೂಕ್ ಬೈಕ್ 5-ಇಂಚಿನ TFT ಡಿಸ್ ಪ್ಲೇಯ ರೂಪದಲ್ಲಿ ವೈಶಿಷ್ಟ್ಯದ ನವೀಕರಣಗಳನ್ನು ಸ್ವೀಕರಿಸಿದೆ.

ಕೆಟಿಎಂ 390 ಡ್ಯೂಕ್‌ನ ಮೂರನೇ ಜನರೇಷನ್ ಮಾದರಿಯಿಂದ ಎರವಲು ಪಡೆಯಲಾಗಿದೆ. ಹೊಸ ಕನ್ಸೋಲ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯನ್ನು ಪಡೆಯುತ್ತದೆ. ಇದನ್ನು ಕೆಟಿಎಂ ಕನೆಕ್ಟ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಬ್ಲೂಟೂತ್ ಮೂಲಕ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಸಂಪೂರ್ಟ್ ಅನ್ನು ಸಂಪೂರ್ಟ್ ಮಾಡುತ್ತದೆ. ಈ 200 ಡ್ಯೂಕ್ ಬೈಕ್ Supermoto ABS, ಶಿಫ್ಟ್ rpm ಗಾಗಿ ಗ್ರಾಹಕೀಯಗೊಳಿಸಬಹುದಾದ ಬಣ್ಣದ ಥೀಮ್ ಮತ್ತು ಹೆಚ್ಚಿನದನ್ನು ಪಡೆಯುತ್ತದೆ.

KTM 200 Duke

ಕೆಟಿಎಂ ಕನೆಕ್ಟ್ ಅಪ್ಲಿಕೇಶನ್ ನ್ಯಾವಿಗೇಷನ್, ಪ್ರಯಾಣ ಡೇಟಾ ಮತ್ತು ನಿರ್ಣಾಯಕ ಬೈಕ್ ಮಾಹಿತಿ ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳೊಂದಿಗೆ ಅಮೂಲ್ಯವಾದ ಒಡನಾಡಿಯಾಗಿ ಕಾರ್ಯನಿರ್ವಹಿಸುತ್ತದೆ. ಬ್ಲೂಟೂತ್ ಕನೆಕ್ಟಿವಿಟಿಯು ಮತ್ತು BCCU ಮೂಲಕ, ಸವಾರರು ನೇರವಾಗಿ TFT ಡಿಸ್ಪ್ಲೇಯಲ್ಲಿ ಒಳಬರುವ ಕರೆ ಮಾಹಿತಿಯನ್ನು ವೀಕ್ಷಿಸಬಹುದು. ಕರೆ ಸ್ವೀಕರಿಸಲು ಅಥವಾ ನಿರಾಕರಿಸಲು ಮೋಡ್ ಸ್ವಿಚ್ ಅನ್ನು ಬಳಸಬಹುದು.

2024ರ ಕೆಟಿಎಂ ಡ್ಯೂಕ್ (KTM 200 Duke) ಬೈಕ್ ಬೆಲೆಯು ರೂ.2,03,412 ಆಗಿದೆ. ಹಳೆಯ ಮಾದರಿಗೆ ಹೋಲಿಸಿದರೆ ರೂ.5,000 ಹೆಚ್ಚು ಆಗಿದೆ. ಈ ಹೊಸ TFT ಡಿಸ್ ಪ್ಲೇಯ ಹೊರತಾಗಿ ಕೆಟಿಎಂ 200 ಡ್ಯೂಕ್ ಮೊದಲಿನಂತೆಯೇ ಇದೆ. ಇದು ಲಂಬವಾಗಿ ಜೋಡಿಸಲಾದ ಎಲ್‌ಇಡಿ ಹೆಡ್‌ಲೈಟ್, ಅಗ್ರೇಸಿವ್ ಬಾಡಿವರ್ಕ್ ಮತ್ತು ಒಟ್ಟಾರೆ ತಾರುಣ್ಯದ ವಿನ್ಯಾಸವನ್ನು ಉಳಿಸಿಕೊಂಡಿದೆ.

KTM 200 Duke

ನೀವು ನವೀಕರಿಸಿದ ಕೆಟಿಎಂ 200 ಡ್ಯೂಕ್ ಬೈಕ್ ಡಾರ್ಕ್ ಗಾಲ್ವನೊ, ಎಲೆಕ್ಟ್ರಾನಿಕ್ ಆರೆಂಜ್ ಮತ್ತು ಮೆಟಾಲಿಕ್ ಸಿಲ್ವರ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. 2024ರ ಕೆಟಿಎಂ ಡ್ಯೂಕ್ ಬೈಕಿನಲ್ಲಿ ತಾಂತ್ರಕವಾಗಿ ಯಾವುದೇ ಬದಲಾವಣೆಗಳಿಲ್ಲ. ಈ ಬೈಕಿನಲ್ಲಿ ಅದೇ 199.5cc ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 25 bhp ಮತ್ತು 19.3 Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಕ್ಲಚ್‌ನಿಂದ ಬೈಕು ಪ್ರಯೋಜನ ಪಡೆಯುತ್ತದೆ. ಹೊಸ ನವೀಕರಣವನ್ನು ಪಡೆದುಕೊಂಡ 2024ರ ಕೆಟಿಎಂ ಡ್ಯೂಕ್ ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದೆ.

KTM 200 Duke

ಈ ಹೊಸ ಬೈಕಿನಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ. ಇನ್ನು ಸುರಕ್ಷತೆ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. 2024ರ ಕೆಟಿಎಂ ಡ್ಯೂಕ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ RTR 200 4V ಮತ್ತು ಸುಜುಕಿ Gixxer 250 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, October 4, 2024, 16:21 [IST]
English summary
Updated ktm 200 duke launched in india price details
Read more on ktm india new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+