4 ಲಕ್ಷಕ್ಕೆ ಇಲ್ಲಿದೆ ಪರ್ಫೆಕ್ಟ್‌ ಸ್ಪೋರ್ಟ್ಸ್‌ ಬೈಕ್‌: 40hp ಪವರ್‌ಗೆ ನೀವು ಫಿಧಾ ಆಗುವುದು ಖಂಡಿತಾ!

ಪ್ರತಿಯೊಬ್ಬ ಯುವಕರಿಗೂ ಸಹ ತಾವೊಂದು ಸ್ಪೋರ್ಟ್ಸ್‌ ಬೈಕ್‌ ತೆಗೆದುಕೊಳ್ಳಬೇಕು ಎಂಬ ಆಗ್ರಹ ಇರುತ್ತದೆ. ಇದಕ್ಕಾಗಿ ಹಲವರು ರಾತ್ರಿ ಹಗಲೆನ್ನದೆ ಕಷ್ಟ ಪಟ್ಟು ಕೆಲಸ ಮಾಡಿ ಹಣವನ್ನು ಕೂಡಿಟ್ಟು ಬೈಕ್‌ ಕೊಳ್ಳುವ ಯೋಜನೆ ಮಾಡುತ್ತಾರೆ. ಇವರಲ್ಲಿ ಹಲವರು ಸಹ ಬೈಕ್‌ ಕೊಳ್ಳುವಾಗ ತಪ್ಪಾದ ಆಯ್ಕೆಯನ್ನು ಮಾಡುವವರೇ ಹೆಚ್ಚು.

ನಿಮ್ಮ ಬಜೆಟ್‌ ಏನಾದರೂ ಕೊಂಚ ಹೆಚ್ಚಿಸಬಹುದು ಎಂದಾದರೆ ನಾವು ನಿಮಗೊಂದು ಬೈಕ್ನ ಬಗ್ಗೆ ಹೇಳುತ್ತೇವೆ. ಪಕ್ಕಾ ಇಟಾಲಿಯನ್‌ ಡಿಸೈನ್ ಮತ್ತು ಪರ್ಫಾಮೆನ್ಸ್‌ ಹೊಂದಿರುವ ಈ ಬೈಕ್‌ ನಿಮ್ಮ ಅಗತ್ಯಕ್ಕೂ ಮೀರಿದ ಪರ್ಫಾಮೆನ್ಸ್‌ ಅನ್ನು ನೀಡುತ್ತದೆ. ನಾವಿಲ್ಲಿ ಅರ್ಪಿಸುತ್ತಿದ್ದೇವೆ ಇಟಾಲಿಯನ್‌ ಕಂಪನಿಯಾದ ಎಪ್ರಿಲಿಯಾ ಸಿದ್ದಪಡಿಸಿದ ಹೊಸ RS 457.

Why Aprilia RS 457 Is Perfect Sports Bike For Beginners

ನೋಡಲು ಸಖತ್‌ ಸ್ಟೈಲಿಶ್‌ ಆಗಿಯೂ, ಜೊತೆಗೆ ಟ್ವಿನ್ ಸಿಲಿಂಡರ್‌ ಎಂಜಿನ್‌ನ ಅದ್ಭುತ ಪರ್ಫಾಮೆನ್ಸ್‌ ಸಹ ನೀಡುತ್ತದೆ. ಈ ಬೈಕ್‌ನ ಡಿಸೈನ್ ಅನ್ನು ನೋಡುವುದಾದರೆ, ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕ್ ಮಾದರಿಯು ಎಪ್ರಿಲಿಯಾ RSV4 ಬೈಕಿನ ವಿನ್ಯಾಸ ಶೈಲಿಯನ್ನು ಪಡೆದುಕೊಂಡಿದೆ. ಹೊಸ ಎಪ್ರಿಲಿಯಾ RS 457 (Aprilia RS 457) ಹೆಚ್ಚು ಶಕ್ತಿಶಾಲಿ RS 660 ಸ್ಪೋರ್ಟ್ಸ್ ಬೈಕ್‌ನ ಚಿಕ್ಕ ಆವೃತ್ತಿಯಂತೆ ಕಾಣುತ್ತದೆ.

ಹೊಸ RS 457 ಬೈಕಿನಲ್ಲಿ ಅಲ್ಯೂಮಿನಿಯಂ ಫ್ರೇಮ್‌ನ ಸುತ್ತಲೂ ಡಬಲ್ ಫೇರಿಂಗ್ ಸೆಟಪ್ ಸಹಾಯವನ್ನು ಹೊಂದಿದೆ. ಇನ್ನು ಈ ಹೊಸ ಬೈಕ್ ಶಾರ್ಪ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದ್ದು, ಒಟ್ಟಾರೆ ಹೊಸ ಎಪ್ರಿಲಿಯಾ RS 457 ನ ತೀಕ್ಷ್ಣವಾದ ಏರೋಡೈನಾಮಿಕ್ ಲುಕ್ ಅನ್ನು ಹೊಂದಿದೆ. ಹೊಸ ಸ್ಪೋರ್ಟ್ಸ್ ಬೈಕ್‌ನ ಬೆಲ್ಲಿ ಪ್ಯಾನ್‌ನೊಂದಿಗೆ ಸಂಯೋಜಿಸಲ್ಪಟ್ಟಿರುವ ಅಂಡರ್‌ಬೆಲ್ಲಿ ಸೈಲೆನ್ಸರ್ ಮಾಡುತ್ತದೆ.

Why Aprilia RS 457 Is Perfect Sports Bike For Beginners

ಇನ್ನು ಶಾರ್ಪ್ ಚಿಕ್ಕದಾದ ಟೈಲ್ ವಿಭಾಗವು LED ಟೈಲ್‌ಲೈಟ್‌ನಿಂದ ಮತ್ತಷ್ಟು ಎದ್ದುಕಾಣುತ್ತದೆ. ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕ್ ಪ್ರಿಸ್ಮಾಟಿಕ್ ಡಾರ್ಕ್, ಓಪಲೆಸೆಂಟ್ ವೈಟ್ ಮತ್ತು ರೇಸಿಂಗ್ ಸ್ಟ್ರೈಪ್ಸ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇನ್ನು ಎಪ್ರಿಲಿಯಾ RS 457 ಬೈಕ್ ಹಲವು ತಂತ್ರಜ್ಞಾನದೊಂದಿಗೆ ಲೋಡ್ ಆದ ಸ್ಪೋರ್ಟ್ಸ್ ಬೈಕ್ ಆಗಿದೆ. ಈ ಬೈಕ್‌ ಸುಮಾರು 4.1 ಲಕ್ಷ ರೂಪಾಯಿ ಎಕ್ಸ್ ಶೋ ರೂಮ್‌ನಲ್ಲಿ ಆರಂಭವಾಗುತ್ತದೆ.

ಹೊಸ ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕ್ ಹೊಸ 457cc ಪ್ಯಾರಲಲ್ ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿದೆ. ಲಿಕ್ವಿಡ್-ಕೂಲ್ಡ್, ನಾಲ್ಕು-ವಾಲ್ವ್ ಎಂಜಿನ್ ಡ್ಯುಯಲ್-ಓವರ್‌ಹೆಡ್ ಕ್ಯಾಮ್‌ಶಾಫ್ಟ್‌ಗಳು ಮತ್ತು ಫಾರ್ವರ್ಡ್-ಫೇಸಿಂಗ್ ಸಿಲಿಂಡರ್‌ಗಳನ್ನು ಒಳಗೊಂಡಿದೆ. ಈ ಎಪ್ರಿಲಿಯಾ RS 457 ಬೈಕಿನಲ್ಲಿ ಪ್ಯಾರಲಲ್ ಟ್ವಿನ್ ಎಂಜಿನ್ 9,400rpm ನಲ್ಲಿ 46.93bhp ಮತ್ತು 6,700rpm ನಲ್ಲಿ 43.5Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Why Aprilia RS 457 Is Perfect Sports Bike For Beginners

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ, ಇದನ್ನು ಆಯ್ಕೆಯ ಕ್ವಿಕ್‌ಶಿಫ್ಟರ್‌ನೊಂದಿಗೆ ನಿರ್ದಿಷ್ಟಪಡಿಸಬಹುದು. ಎಪ್ರಿಲಿಯಾ RS 457 ಅನ್ನು ರೈಡ್-ಬೈ-ವೈರ್ ಸಿಸ್ಟಮ್‌ನೊಂದಿಗೆ ನೀಡಲಾಗಿದ್ದು ಅದು ಮೂರು ರೈಡಿಂಗ್ ಮೋಡ್‌ಗಳಿಗೆ ಅವಕಾಶ ನೀಡುತ್ತದೆ. ಇನ್ನು ಈ ಬೈಕಿನಲ್ಲಿ 4-ವೇ ಟ್ರಾಕ್ಷನ್ ಕಂಟ್ರೋಲ್ ಕೂಡ ಇದೆ.

ಹೊಸ ಎಪ್ರಿಲಿಯಾ RS 457 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ KTM RC390, ಯಮಹಾ R3 ಮತ್ತು ಕವಾಸಕಿ ನಿಂಜಾ 400 ಬೈಕುಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ. ಈ ಹೊಸ ಬೈಕ್ ಅಗ್ರೇಸಿವ್ ಲುಕ್, ಪವರ್ ಫುಲ್ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿದೆ. ಸ್ಪೋರ್ಟ್ಸ್ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಹೊಸ ಎಪ್ರಿಲಿಯಾ RS 457 ಬೈಕ್ ಉತ್ತಮ ಆಯ್ಕೆಯಾಗಿದೆ.

More from DriveSpark

Article Published On: Monday, May 27, 2024, 13:08 [IST]
English summary
Why aprilia rs 457 is perfect sports bike for beginners
Read more on aprilia india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+