'ಹೀರೋ XPulse' ಭಾರತೀಯ ಯುವಕರ ಹಾಟ್ ಫೇವರೀಟ್ ಆಗಲು ಕಾರಣವೇನು ಗೊತ್ತೇ?
ಭಾರತದಲ್ಲಿ ಹೀರೋ ಕಂಪನಿಯ ಕಥೆಗಳನ್ನು ಹೇಳ ಹೊರಟರೆ ಅದು ಪದಗಳಲ್ಲಿ ಮುಗಿಯುವುದಿಲ್ಲ. ಹೀರೋ ಹೋಂಡಾ ಜೊತೆಯಾಗಿ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದ ಕಾಲವಂತೂ, ಭಾರತೀಯ ದ್ವಿಚಕ್ರ ವಾಹನ ನಿರ್ಮಾಣ ಕ್ಷೇತ್ರದಲ್ಲಿ ಸುವರ್ಣ ಯುಗ ಎಂದೇ ಹೇಳಬಹುದು. ಅಷ್ಟರ ಮಟ್ಟಿಗೆ ಈ ಕಂಪನಿ ಬೈಕ್‌ಗಳು ನಮ್ಮೆಲ್ಲರಲ್ಲೂ ಹಾಸು ಹೊಕ್ಕಾಗಿತ್ತು.
ಸದ್ಯಕ್ಕೆ ಭಾರತೀಯ ಯುವಕರಿಗೆ ಕಡಿಮೆ ಬೆಲೆಗೆ ಹೊಸ ಅಡ್ವೆಂಚರ್ ಆಫ್‌ರೋಡ್ ಬೈಕ್ ಬೇಕೆಂದರೆ ಇರುವ ಒಂದೇ ಒಂದು ಆಯ್ಕೆ ಹೀರೋ ಎಕ್ಸ್‌ಪಲ್ಸ್ (Hero Xpulse). ಈ ಬೈಕ್‌ನ ಕುರಿತಾಗಿ ನಾವೇನು ಹೆಚ್ಚಾಗಿ ಹೇಳಬೇಕೆಂದಿಲ್ಲ. ಈ ಬೈಕ್ ಅನ್ನು ಯುವಕರು ಕೊಳ್ಳಲು ಹಲವಾರು ಕಾರಣಗಳಿದ್ದು ಇಂದು ಒಂದೊಂದಾಗಿ ಅದನ್ನು ನೊಡೋಣ.

ಎಂಜಿನ್: ಇದು ಆಫ್-ರೋಡ್ ರೈಡ್ ಗೆ ಹೇಳಿಮಾಡಿಸಿರುವ ಬೈಕ್ ಆಗಿರುವುದರಿಂದ 200 ಸಿಸಿ 4 ವಾಲ್ವ್ ಆಯಿಲ್ ಕೂಲ್ಡ್ BS-VI ಎಂಜಿನ್ ಹೊಂದಿದ್ದು, 8,000 rpmನಲ್ಲಿ 19 hp ಗರಿಷ್ಠ ಪವರ್ ಹಾಗೂ 6,500 rpmನಲ್ಲಿ 17.35 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ OBD2 ಸಾಧನವು ಎಂಜಿನ್ ನಲ್ಲಿ ಎಮಿಷನ್ ಸಂಬಂಧ ದೋಷ ಕಂಡುಬಂದಾಗ ಆ ಕುರಿತ ಮಾಹಿತಿಯನ್ನು ರೈಡರ್ ಗೆ ಒದಗಿಸುತ್ತದೆ.
ವಿನ್ಯಾಸ: ನೂತನ ಹೀರೋ XPulse 200 4ವಿ ಬೈಕ್ ವಿನ್ಯಾಸ ಬಗ್ಗೆ ಮಾತನಾಡುವುದಾದರೆ, ಇದು ರ್ಯಾಲಿ ಸ್ಟೈಲ್ ವಿಂಡ್‌ಶೀಲ್ಡ್, ಎಲ್ಇಡಿ DRLs, ಹೊಸದಾದ ಕ್ಲಾಸ್-D LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ನವೀಕರಿಸಿರುವ ರೈಡರ್ ಫೂಟ್ ಪೆಗ್, ಲಗೇಜ್ ಪ್ಲೇಟ್, USB ಚಾರ್ಜಿಂಗ್ ಪೋರ್ಟ್ ಸೇರಿದಂತೆ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಸಸ್ಪೆನ್ಷನ್: ಈ ಬೈಕಿನ ಟಾಪ್ ಎಂಡ್ ರೂಪಾಂತರ 'ಪ್ರೊ' ಫುಲ್ಲಿ ಅಡ್ಜಸ್ಟ್ಏಬಲ್ 250 ಎಂಎಂ ಫ್ರಂಟ್ ಸಸ್ಪೆನ್ಷನ್, 220 ಎಂಎಂ ರೇರ್ ಸಸ್ಪೆನ್ಷನ್ ಅನ್ನು ಹೊಂದಿದೆ. ಸೀಟ್ ಹೈಟ್ 850 ಎಂಎಂ ಇದ್ದು, ಗ್ರೌಂಡ್ ಕ್ಲಿಯರೆನ್ಸ್ 270 ಎಂಎಂ ಹಾಗೂ ಆಫ್-ರೋಡ್ ರೈಡ್ ಗೆ ಹೊಂದಿಕೆಯಾಗುವಂತಹ ಹ್ಯಾಂಡಲ್‌ಬಾರ್ ರೈಸರ್ ಅನ್ನು ಪಡೆದಿರುವುದು ವಿಶೇಷವಾಗಿದೆ.
ಬಣ್ಣಗಳು: ನೂತನ ಹೀರೋ XPulse 200 4ವಿ ಬೈಕ್ ಬಣ್ಣಗಳ ಆಯ್ಕೆ ಬಗ್ಗೆ ಹೇಳುವುದಾದರೆ, ಇದು ಬೋಲ್ಡ್ ಗ್ರಾಫಿಕ್ಸ್ ಮತ್ತು ಸ್ಟ್ರೈಕಿಂಗ್ ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಬೇಸ್ ವೇರಿಯೆಂಟ್ ಮ್ಯಾಟ್ ನೆಕ್ಸಸ್ ಬ್ಲೂ, ಟೆಕ್ನೋ ಬ್ಲೂ ಮತ್ತು ಬ್ಲ್ಯಾಕ್ ಸ್ಪೋರ್ಟ್ಸ್ ರೆಡ್ ಕಲರ್ ಆಯ್ಕೆಯನ್ನು ಪಡೆದಿದೆ. ಟಾಪ್ ಎಂಡ್ ಪ್ರೊ ರೂಪಾಂತರ ರ‍್ಯಾಲಿ ಎಡಿಷನ್ ಗ್ರಾಫಿಕ್ಸ್ ಅನ್ನು ಹೊಂದಿದೆ.

ಇನ್ನು ಹೀರೋ ಕಂಪನಿ ಇದರ ಎಂಜಿನ್ ಅನ್ನು ದೇಶಾದ್ಯಂತ ಜಾರಿಗೆ ಬಂದಿರುವ OBD2 ಎಮಿಷನ್ ಮಾನದಂಡಗಳು ಹಾಗೂ E20 (ಶೇಕಡ 80% ಪೆಟ್ರೋಲ್ ಹಾಗೂ 20% ಎಥನಾಲ್) ಫ್ಯುಯೆಲ್ ಗೆ ಬೆಂಬಲಿಸುವಂತೆ ಮೇಲ್ದರ್ಜೆಗೇರಿಸಿದೆ. ಇದರಿಂದ ಖರೀದಿದಾರರಿಗೆ ತುಂಬಾ ಅನುಕೂಲವಾಗಲಿದ್ದು, ಇವರೆಡು ಇಂಧನಗಳ ಬಳಕೆಯಿಂದ ಬೈಕ್ ನಿರ್ವಹಣಾ ವೆಚ್ಚ ತುಂಬಾ ಕಡಿಮೆಯಾಗಲಿದ್ದು, ಒಂದಷ್ಟು ಹಣ ಉಳಿತಾಯವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








