ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಸ್ಕೂಟರ್ ಭಾರತದಲ್ಲಿ ಪರೀಕ್ಷೆ: ಬಿಡುಗಡೆ, ಬೆಲೆ ವಿಶೇಷತೆಗಳು!
ಪುಣೆ ಮೂಲದ ಕರ್ಗೋಸ್ (Qargos) ಎಂಬ ಸ್ಟಾರ್ಟ್‌ಅಪ್ ಕಂಪನಿಯು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ 2-ವೀಲರ್‌ನೊಂದಿಗೆ ಬಂದಿದೆ. ಕಳೆದ 6 ವರ್ಷಗಳಿಂದ ಕಾರ್ಗೋ 2-ವೀಲರ್‌ನ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿರುವ ಕಂಪನಿಯು ಇದೀಗ ಅಂತಿಮ ಹಂತದಲ್ಲಿದೆ. ಈ ಸ್ಕೂಟರ್‌ನ ವಿಶೇಷತೆಗಳನ್ನು ಇಲ್ಲಿ ತಿಳಿಯೋಣ.
ಫ್ರೆಂಚ್ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಾರ್ಪೊರೇಶನ್ ಡಸಾಲ್ಟ್ ಸಿಸ್ಟಮ್ಸ್ ವಿನ್ಯಾಸಗೊಳಿಸಿದ 6.1 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಈ EV ಅನ್ನು ಅಭಿವೃದ್ಧಿಪಡಿಸಲಾಗಿದೆ. ಬ್ಯಾಟರಿಯು 3.4 kW ಮೋಟಾರ್ ಜೊತೆಗೆ 6 kW ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಕಾರ್ಗೋ ಸ್ಕೂಟರ್ 150 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ತಿಳಿಸಿದೆ.

ಇದರ ಗರಿಷ್ಠ ವೇಗವು ಗಂಟೆಗೆ 80 ಕಿ.ಮೀಗೆ ಸೀಮಿತವಾಗಿದೆ. 145 ಕೆ.ಜಿ ತೂಕವಿರುವ ಈ ಸ್ಕೂಟರ್ 225-ಲೀಟರ್ ಕಾರ್ಗೋ ಕಂಪಾರ್ಟ್‌ಮೆಂಟ್‌ನೊಂದಿಗೆ ಬರುತ್ತದೆ. ಇದು ಸುಮಾರು 120 ಕೆ.ಜಿ ಸರಕುಗಳನ್ನು ಸಾಗಿಸಬಲ್ಲದು. ಸ್ಟ್ಯಾಂಡರ್ಡ್ ಎಸಿ ಪವರ್ ಸಾಕೆಟ್‌ನೊಂದಿಗೆ ಸುಮಾರು 5 ಗಂಟೆ 15 ನಿಮಿಷಗಳಲ್ಲಿ ವಾಹನವನ್ನು ಪೂರ್ಣ ಚಾರ್ಜ್ ಮಾಡಬಹುದು.
DC ಚಾರ್ಜಿಂಗ್ (ವೇಗದ ಚಾರ್ಜರ್) ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳಿದ್ದು, ಇದು ಸುಮಾರು 3 ಗಂಟೆಗಳಲ್ಲಿ ವಾಹನವನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. Qargos EV ಪರೀಕ್ಷೆಯು ಪ್ರಸ್ತುತ ನಡೆಯುತ್ತಿರುವ ಕಾರಣ ಅಗತ್ಯವಿರುವಂತೆ ಮಾರ್ಪಾಡುಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಡಸಾಲ್ಟ್ ಸಿಸ್ಟಮ್ಸ್ ಸಹಾಯ ಮಾಡುತ್ತಿದೆ.

ಬಿಡುಗಡೆ ಯಾವಾಗ, ಬೆಲೆಯೆಷ್ಟು?: ಪರೀಕ್ಷೆ ಮತ್ತು ಮೌಲ್ಯೀಕರಣ ಪ್ರಕ್ರಿಯೆಯು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಕರ್ಗೋಸ್ ಹೇಳಿದೆ. ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಹೋಮೋಲೋಜೇಶನ್ ನಿರೀಕ್ಷಿಸಲಾಗಿದೆ. ಮುಂದಿನ ತಿಂಗಳುಗಳಲ್ಲಿ ಬುಕಿಂಗ್‌ಗಳನ್ನು ಘೋಷಿಸಬಹುದು. ಕಾರ್ಗೋ 2-ವೀಲರ್ ಅನ್ನು ರೂ. 2 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಈ ವರ್ಷದ ಅಂತ್ಯದ ವೇಳೆಗೆ ಸುಮಾರು 250 ಘಟಕಗಳನ್ನು ಉತ್ಪಾದಿಸಲಾಗುವುದು. ಬೇಡಿಕೆ ಹೆಚ್ಚಾದಂತೆ, ಉತ್ಪಾದನೆಯನ್ನು 2025 ರಲ್ಲಿ ಸುಮಾರು 12,000 ಘಟಕಗಳಿಗೆ ಹೆಚ್ಚಿಸಲಾಗುವುದು. ಪುಣೆಯಲ್ಲಿರುವ ಕಂಪನಿಯ ಸೌಲಭ್ಯದಲ್ಲಿ ವಾಹನಗಳನ್ನು ತಯಾರಿಸಲಾಗುವುದು. ಇಲ್ಲಿಯವರೆಗೆ, USD 1 ಮಿಲಿಯನ್ ಹಣವನ್ನು ಯೋಜನೆಯಲ್ಲಿ ಹೂಡಿಕೆ ಮಾಡಲಾಗಿದೆ.

ಇದರ ಪ್ರಯೋಜನಗಳು: ಸಾಮಾನ್ಯ ದ್ವಿಚಕ್ರ ವಾಹನದೊಂದಿಗೆ ಹೋಲಿಸಿದರೆ, ಕಾರ್ಗೋಸ್ ಕಾರ್ಗೋ 2-ವೀಲರ್ ಸುಮಾರು 70 ಪಾರ್ಸೆಲ್‌ಗಳ ವಿತರಣೆಯನ್ನು ಅನುಮತಿಸುತ್ತದೆ. ದೊಡ್ಡದಾದ 120 ಕೆ.ಜಿ ಕಾರ್ಗೋ ಜಾಗದಲ್ಲಿ ಹೆಚ್ಚಿನ ಲೋಡ್ ಕೆಪಾಸಿಟಿ ಹೊಂದಿದೆ. ಪ್ರಮಾಣಿತ ದ್ವಿಚಕ್ರ ವಾಹನದೊಂದಿಗೆ ಪ್ರಸ್ತುತ ಸಾಧ್ಯವಿರುವ ಸುಮಾರು 36 ಕೆ.ಜಿಗೆ ಹೋಲಿಸಿದರೆ, ದಿನಸಿ ಸಾಗಿಸುವ ಸಾಮರ್ಥ್ಯವನ್ನು 3 ಪಟ್ಟು ಹೆಚ್ಚಿಸಬಹುದು.
ಸ್ಕುಟರ್‌ಗೆ ಮೀಸಲಾದ ಕಾರ್ಗೋ ಕಂಪಾರ್ಟ್‌ಮೆಂಟ್‌ನೊಂದಿಗೆ ಪಾರ್ಸೆಲ್‌ಗಳನ್ನು ಹುಡುಕುವುದು ತುಂಬಾ ಸುಲಭವಾಗಿರುತ್ತದೆ. ಕಾರ್ಗೋ ವಿಭಾಗವನ್ನು ಲಾಕ್ ಕೂಡ ಮಾಡಬಹುದಾಗಿದೆ, ಆದ್ದರಿಂದ ಪಾರ್ಸೆಲ್‌ಗಳು ಕಳ್ಳತನವಾಗುವುದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಈ ಹೊಸ ಸ್ಕೂಟರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








