ಹೊಸ ಯಮಹಾ FZ-X ಕ್ರೋಮ್ ಎಡಿಷನ್ ಬಿಡುಗಡೆ: ಮೊದಲ 100 ಗ್ರಾಹಕರಿಗೆ ಗಿಫ್ಟ್ ಘೋಷಣೆ
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಯಮಹಾ ಇಂಡಿಯಾ, ಇಂದು FZ-X ಅನ್ನು ಆಕರ್ಷಕ ಕ್ರೋಮ್ ಹಾಗೂ ಮೆಟಾಲಿಕ್ ಬ್ಲ್ಯಾಕ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಕ್ರೋಮ್ ಆವೃತ್ತಿಯು 1.40 ಲಕ್ಷ ರೂ. (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆಯಾಗಿದೆ.
ಈ ಮಾದರಿಯನ್ನು ಇತ್ತೀಚೆಗೆ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಶೋ 2024 ರಲ್ಲಿ ಪ್ರದರ್ಶಿಸಲಾಯಿತು. ಇನ್ನು ಹೊಸ FZ-X ಮೆಟಾಲಿಕ್ ಬ್ಲ್ಯಾಕ್ ಬಣ್ಣದ ರೂಪಾಂತರವು ಇಂದಿನಿಂದ ರೂ. 1,36,200 (ಎಕ್ಸ್ ಶೋರೂಮ್, ದೆಹಲಿ) ಬೆಲೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಯಮಹಾ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಯಮಹಾ FZ-X ಕ್ರೋಮ್ ರೂಪಾಂತರವನ್ನು ಬುಕ್ ಮಾಡುವ ಆರಂಭಿಕ ನೂರು ಗ್ರಾಹಕರು ಕ್ಯಾಸಿಯೊ ಜಿ-ಶಾಕ್ ವಾಚ್ ಅನ್ನು ಪಡೆಯಬಹುದು. ಅಂದರೆ ಕಂಪನಿಯು ಆರಂಭಿಕವಾಗಿ ಬುಕ್ ಮಾಡುವ ಗ್ರಾಹಕರಿಗೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಿದೆ. ಕ್ರೋಮ್ ರೂಪಾಂತರಕ್ಕಾಗಿ ಮೊದಲ 100 ಆನ್‌ಲೈನ್ ಬುಕಿಂಗ್‌ಗಳು ವಾಹನ ವಿತರಣೆಯ ನಂತರ ಕ್ಯಾಸಿಯೊ ಜಿ-ಶಾಕ್ ವಾಚ್ ಅನ್ನು ಗಿಫ್ಟ್ ಆಗಿ ಸ್ವೀಕರಿಸಬಹದಾಗಿದೆ.
ವಾಹನ ವಿಶೇಷತೆಗಳಿಗೆ ಬಂದರೆ, ಸ್ಟ್ಯಾಂಡರ್ಡ್ ಯಮಹಾ FZ-X ನಲ್ಲಿ ನೀಡಲಾಗುವ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಎಬಿಎಸ್, ಎಲ್ಇಡಿ ಹೆಡ್ಲೈಟ್ ಮತ್ತು ಬ್ಲೂಟೂತ್-ಸಕ್ರಿಯಗೊಳಿಸಿದ ವೈ-ಕನೆಕ್ಟ್ ಅಪ್ಲಿಕೇಶನ್ ಹಾಗೂ ಮೋಟಾರ್ಸೈಕಲ್ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಆಯಾಮಗಳನ್ನು ಹಾಗೆಯೇ ಉಳಿಸಿಕೊಂಡಿದ್ದು, ಕೇವಲ ಬಣ್ಣ ಮಾತ್ರ ಬದಲಾಗಿದೆ.

ಹೊಸ ಯಮಹಾ FZ-X ಕ್ರೋಮ್ ಎಡಿಷನ್ ಮಾದರಿಯು ಅದೇ 149 cc, ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, 12.4 hp ಪವರ್ ಮತ್ತು 13.3 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ. ಪರ್ಫಾಮೆನ್ಸ್ ವಿಷಯದಲ್ಲೂ ಅದೇ ಸ್ಟ್ಯಾಂಡರ್ಡ್ ಆವೃತ್ತಿಯಂತೆ ಇರಲಿದ್ದು, ಪವರ್ ಔಟ್‌ಪುಟ್ ಒಂದೇ ಆಗಿರುವುದರಿಂದ ಯಾವುದೇ ಹೆಚ್ಚಿನ ಪರ್ಫಾಮೆನ್ಸ್ ಇರುವುದಿಲ್ಲ.
ಇದಲ್ಲದೆ, FZ-X ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಹಿಂದಿನ ಡಿಸ್ಕ್ ಬ್ರೇಕ್‌ನೊಂದಿಗೆ ಮುಂಭಾಗದಲ್ಲಿ ಸಿಂಗಲ್-ಚಾನೆಲ್ ABS, ಮಲ್ಟಿ-ಫಂಕ್ಷನ್ ಫುಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೌಂಡ್ LED ಹೆಡ್‌ಲೈಟ್, ಹಿಂಭಾಗದ ಮಡ್‌ಗಾರ್ಡ್ ಸೇರಿದಂತೆ ಅದರ ಪ್ರಸ್ತುತ ವೈಶಿಷ್ಟ್ಯಗಳನ್ನು ಮುಂದುವರೆಸಿದೆ. ಕಡಿಮೆ ಎಂಜಿನ್ ಗಾರ್ಡ್ ಮತ್ತು ಬ್ಲೂಟೂತ್-ಸಕ್ರಿಯಗೊಳಿಸಿದ ವೈ-ಕನೆಕ್ಟ್ ಅಪ್ಲಿಕೇಶನ್ ಇತರ ವೈಶಿಷ್ಟ್ಯಗಳನ್ನು ಹಾಗೇ ಉಳಿಸಲಾಗಿದೆ.

ಸಸ್ಪೆನ್ಷನ್ ವಿಷಯಕ್ಕೆ ಬಂದರೆ, ಹೊಸ ಯಮಹಾ FZ-X ಕ್ರೋಮ್ ಎಡಿಷನ್ ಮುಂಭಾಗ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ 7-ಸ್ಟೆಪ್ ಅಡ್ಜಸ್ಟಬಲ್ ಮೊನೊಕ್ರಾಸ್ ಘಟಕವನ್ನು ಪಡೆದಿದೆ. ಬ್ರೇಕಿಂಗ್ ವಿಷಯಕ್ಕೆ ಬಂದರೆ ಇದು ABS ಜೊತೆಗೆ 282 mm ಮುಂಭಾಗದ ಡಿಸ್ಕ್ ಮತ್ತು ಹಿಂದಿನ ಚಕ್ರದಲ್ಲಿ 220 mm ಡಿಸ್ಕ್ ಅನ್ನು ಹೊಂದಿದೆ.
ಹೊಸ ವಿಶೇಷತೆಗಳೇನು?: ಹೊಸ ಯಮಹಾ FZ-X ಕ್ರೋಮ್ ಎಡಿಷನ್ ಮಾದರಿಯು ಈಗ E20 ಇಂಧನದೊಂದಿಗೆ ಸಹ ಹೊಂದಿಕೊಳ್ಳುತ್ತದೆ. ಅಂದರೆ ಇದು ಶೇ 80 ರಷ್ಟು ಪೆಟ್ರೋಲ್ ಹಾಗೂ ಶೇ 20 ಎಥೆನಾಲ್ ಮಿಶ್ರಣದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ E20 ಇಂಧನವು ಪರಿಸರ ಮಾಲೀನ್ಯವನ್ನು ತಡೆಯುವ ಗುಣವನ್ನು ಹೊಂದಿರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








