ಮ್ಯಾಕ್ಸಿ ಸ್ಕೂಟರ್‌ ಅಖಾಡದಲ್ಲಿ ಹೊಸ ಹುಲಿ: ಕಾರಿನಂತೆ ವಿಶಾಲ ಜಾಗ, 155cc ಪವರ್‌ ಡೆಡ್ಲಿ ಕಾಂಬೋ!

ಭಾರತದಲ್ಲಿ ಮ್ಯಾಕ್ಸೀ ಸ್ಕೂಟರ್‌ಗಳ ಸೆಗ್ಮೆಂಟ್ ಇತ್ತೀಚೆಗೆ ಪ್ರಸಿದ್ದಿಗೆ ಬರುತ್ತಿದೆ ಅಷ್ಟೇ. ಈಗಾಗಲೇ ಈ ಸೆಗ್ಮೆಂಟ್‌ನಲ್ಲಿ ಹಲವಾರು ಬೈಕ್‌ ಕಂಪನಿಗಳು ತಮ್ಮ ಕೈಚಳಕ ತೋರಿಸಿದ್ದು, ಹಲವಾರು ಬೆಲೆಗಳಲ್ಲಿ ಈ ಸೆಗ್ಮೆಂಟ್‌ ಸ್ಕೂಟರ್‌ಗಳು ಲಭ್ಯವಿದೆ. ಇದೀಗ ಈ ಸಾಲುಗೆ ಯಮಹಾ ಸಹ ಸೇರಿದ್ದು, ತನ್ನ ಹೊಸ ಮ್ಯಾಕ್ಸಿ ಸ್ಕೂಟರ್‌ ಅನ್ನು ಜನರ ಮುಂದೆ ಇಟ್ಟಿದೆ.

ಇತ್ತೀಚೆಗಷ್ಟೇ ಭಾರತದಲ್ಲಿ ನಡೆದ ಭಾರತ್‌ ಮೊಬಿಲಿಟಿ ಶೋ ನಲ್ಲಿ ಯಮಹಾ ತನ್ನ ಹೊಸ ಮ್ಯಾಕ್ಸಿ ಸ್ಕೂಟರ್ NMax 155 ಅನ್ನು ಅನಾವರಣಗೊಳಿಸಿತ್ತು. NMax 155 ಮ್ಯಾಕ್ಸಿ ಸ್ಕೂಟರ್‌ನ ಡಿಸೈನ್ ಮತ್ತು ಫೀಚರ್‌ಗಳನ್ನು ಕಂಡ ಗ್ರಾಹಕರು ಈಗಾಗಲೇ ಇದಕ್ಕೆ ಫಿಧಾ ಆಗಿದ್ದು, ಮಾರುಕಟ್ಟೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಯಮಹಾದ ಏರೋಕ್ಸ್‌ 155 ಮ್ಯಾಕ್ಸಿ ಸ್ಕೂಟರ್‌ನಿಂದ ಸ್ಪೂರ್ತಿಗೊಂಡು ಈ ಸ್ಕೂಟರ್‌ ಅನ್ನು ತಯಾರಿಸಿದೆ.

Yamaha Launched Maxi Scooter NMax 155 Bharat Mobility Show

ಅಗ್ರೆಸಿವ್‌ ಸ್ಟೈಲಿಶ್‌ ಡಿಸೈನ್‌ ಮತ್ತು ಫೀಚರ್‌ನೊಂದಿಗೆ ಬಂದಿರುವ ಈ NMax 155 ಭಾರತದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆಯುವುದರಲ್ಲಿ ಎರಡು ಮಾತಿಲ್ಲ ಎಂದು ಕಂಪನಿ ಈಗಾಗಲೆ ಭವಿಷ್ಯ ನುಡಿದಿದೆ. ಹೆಚ್ಚಿನ ಸ್ಥಳಾವಕಾಶ ಮತ್ತು ಉತ್ತಮ ಆಕಾರ ಹೊಂದಿರುವ ಈ ಸ್ಕೂಟರ್‌, ರೈಡ್‌ ಮಾಡುವಾಗ ಹೆಚ್ಚು ಕಂಫರ್ಟ್‌ ಒದಗಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

NMax 155 ಸ್ಜೂಟರ್‌ನಲ್ಲಿ 155 ಸಿಸಿ ಸಿಂಗಲ್‌ ಸಿಲಿಂಡರ್‌ ಇಂಜಿನ್‌ ದೊರೆಯಲಿದ್ದು, ಇದರ ಸಹಾಯದಿಂದ ಈ ಸ್ಕೂಟರ್‌ ಸುಮಾರು 15 ಬಿಹೆಚ್‌ಪಿ ಮತ್ತು 14 ಎನ್‌ಎಮ್‌ ಟಾರ್ಕ್‌ ಅನ್ನು ಉತ್ಪಾದಿಸಲಿದೆ. ಇದರ ಜೊತೆಗೆ ಇದರ ಎಂಜಿನ್‌ ಕಾರ್ಯಗಳನ್ನು ಮತ್ತಷ್ಟು ಸುಗಮಗೊಳಿಸಲು ಐಡಲ್‌ ಸ್ಟಾರ್ಟ್‌ ಆ್ಯಂಡ್‌ ಸ್ಟಾಪ್‌ ಫಂಕ್ಷನ್‌ ಅನ್ನು ಸಹ ಈ ಸ್ಕೂಟರ್‌ನಲ್ಲಿ ಯಮಾಹ ಅಳವಡಿಸಿದೆ.

ವಿ ಬೆಲ್ಟ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಈ ಹೊಸ NMax 155 ಮ್ಯಾಕ್ಸಿ ಸ್ಕೂಟರ್‌ನ ಪ್ರಯಾಣವನ್ನು ಮತ್ತಷ್ಟು ಆಹ್ಲಾದಗೊಳಿಸಲಿದೆ. ಸ್ಮೂತ್‌ ರೆಸ್ಪಾನ್ಸ್‌ ರೈಡ್‌ ಪೀಲ್‌ ನೀಡುವ ಮೂಲಕ ಈ ಸ್ಕೂಟರ್ ಸಿಟಿ ಮತ್ತು ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವವರ ಪಾಲಿಗೆ ಒಂದು ರೀತಿಯ ವರದಾನವಾಗಲಿದೆ. ಯಮಹಾ ಕಂಪನಿಯ ಮೈ ರೈಡ್‌ ಆ್ಯಪ್‌ ಸಹ ಇದರಲ್ಲಿ ಸಿಗಲಿದ್ದು, ಕನೆಕ್ಟಿವಿಟಿ ಪೀಚರ್‌ಗಳು ನಿಮ್ಮ ಪ್ರಯಾಣಕ್ಕೆ ಹೆಚ್ಚಿನ ಇಂಬನ್ನು ನೀಡುತ್ತದೆ.

ಇನ್ನು ಯಮಹಾ ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಎಂಬ ಮ್ಯಾಕ್ಸಿ ಸ್ಕೂಟರ್‌ ಅನ್ನು ಸಹ ಬಿಡುಗಡೆ ಗೊಳಿಸಿದ್ದರು. ಬಹುಬೇಗ ಬಹಳಷ್ಟು ಪ್ರಸಿದ್ದಿಯನ್ನು ಪಡೆದ ಈ ಸ್ಕೂಟರ್‌ 15೦ ಸಿಸಿಯ ಸ್ಕೂಟರ್‌ ಸೆಗ್ಮೆಂಟ್‌ನಲ್ಲಿ ಯಮಹಾ ಏರೋಕ್ಸ್‌ ತನ್ನದೇ ಆದ ದೊಡ್ಡ ಛಾಪನ್ನು ಮೂಡಿಸಿದೆ.

ಯಮಹಾ AEROX 155 ರ 2023 ಆವೃತ್ತಿಯು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS) ನೊಂದಿಗೆ ಸುಸಜ್ಜಿತವಾಗಿದ್ದು, ಯಾವುದೇ ಸವಾರಿ ಸ್ಥಿತಿಯಲ್ಲಿ ವೀಲ್‌ಸ್ಪಿನ್ ಮತ್ತು ಉತ್ತಮ ನಿಯಂತ್ರಣವನ್ನು ಕಡಿಮೆ ಮಾಡುವ ಮೂಲಕ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, AEROX 155 ನ ಇತ್ತೀಚಿನ ಆವೃತ್ತಿಯು E20 ಇಂಧನ ಕಂಪ್ಲೈಂಟ್ ಆಗಿದೆ.

ಹೊಸ ತಲೆಮಾರಿನ 155cc ಬ್ಲೂ ಕೋರ್ ಎಂಜಿನ್‌ನಿಂದ ವೇರಿಯೇಬಲ್ ವಾಲ್ವ್ ಆಕ್ಚುಯೇಶನ್ (VVA) ಅನ್ನು ಹೊಂದಿದೆ. CVT ಟ್ರಾನ್ಸ್‌ಮಿಷನ್‌ಗೆ ಸಂಯೋಜಿತವಾಗಿದ್ದು, ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, SOHC, 4-ವಾಲ್ವ್ ಮೋಟಾರ್ 8,000rpm ನಲ್ಲಿ 15 PS ನ ಗರಿಷ್ಠ ಪವರ್ ಉತ್ಪಾದಿಸುತ್ತದೆ. ಹಾಗೆಯೇ 6,500rpm ನಲ್ಲಿ 13.9 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೆಚ್ಚುವರಿಯಾಗಿ, Aerox 155 ಈಗ ಹಜಾರ್ಡ್ ವ್ಯವಸ್ಥೆಯನ್ನು ಪ್ರಮಾಣಿತ ವೈಶಿಷ್ಟ್ಯವಾಗಿ ಮತ್ತು ಹೊಚ್ಚಹೊಸ ಬೆಳ್ಳಿಯ ಬಣ್ಣವನ್ನು ಪಡೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, February 7, 2024, 13:07 [IST]
English summary
Yamaha launched maxi scooter nmax 155 at bharat mobility show
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+