ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಯಮಹಾ ಸಿದ್ಧತೆ: ಬಿಡುಗಡೆ ಯಾವಾಗ?

ಓಲಾ, ಎಥರ್, ಟಿವಿಎಸ್ ಐಕ್ಯೂಬ್ ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರಸ್ತುತ ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿವೆ. ಆದರೆ ಯಮಹಾ ಕಂಪನಿ ಮಾತ್ರ ಭಾರತದಲ್ಲಿ ಇನ್ನೂ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿಲ್ಲ. ಆದ್ರೆ ಯಮಹಾ ಕಂಪನಿ ಪ್ರಸ್ತುತ ಜಾಗತಿಕವಾಗಿ ಕೆಲವೇ ಕೆಲವು ದೇಶಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಯಮಹಾ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಪರಿಚಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ವರದಿಯಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

ಯಮಹಾ ಬ್ರಾಂಡ್ ಭಾರತ ಮತ್ತು ಜಪಾನ್‌ಗಾಗಿ ವಿಶಿಷ್ಟವಾದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಕೆಲ ಮೂಲಗಳ ಪ್ರಕಾರ ಈಗಾಗಲೇ ಯುಕೆಯಂತಹ ದೇಶಗಳಲ್ಲಿ ಮಾರಾಟ ಕಾಣುತ್ತಿರುವ ನಿಯೋ ಎಲೆಕ್ಟ್ರಿಕ್ ಸ್ಕೂಟರ್ ಯಮಹಾ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಇದು ತೆಗೆದುಹಾಕಬಹುದಾದ ಬ್ಯಾಟರಿ ಪ್ಯಾಕ್ ಹೊಂದಿರುವ ಇವಿ ಸ್ಕೂಟರ್ ಆಗಿದೆ.

yamaha-to-launch-new-electric-scooter-in-india-soon

ಇನ್ನೂ ಕೆಲ ಮೂಲಗಳ ಪ್ರಕಾರ, ಯಮಹಾದಿಂದ ಮುಂಬರುವ ಎಲೆಕ್ಟ್ರಿಕ್ ವಾಹನವು ಹೆಚ್ಚಿನ ಪರ್ಫಾಮೆನ್ಸ್, ಪ್ರೀಮಿಯಂ ವೈಶಿಷ್ಟ್ಯಗಳು, ವಿಶಿಷ್ಟ ಯಮಹಾ ಸ್ಟೈಲಿಂಗ್ ಹೊಂದಿರಲಿದೆ. ಹಾಗಾಗಿ ಈ ಯಮಹಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೇರೆ ಯಾವುದೇ ಮಾರುಕಟ್ಟೆಯಲ್ಲಿ ಮಾರಾಟವಾಗದ ಸಂಪೂರ್ಣವಾಗಿ ಹೊಸ ಡಿಸೈನ್‌ನಲ್ಲಿ ಪರಿಚಯಿಸುವ ಸಾಧ್ಯತೆಗಳು ಕೂಡ ಇವೆ.

ಹೊಸ ಯಮಹಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಆತುರದಲ್ಲಿಲ್ಲ ಎಂದು ವರದಿಯಾಗಿದೆ. ಇದು ಭಾರತೀಯ ರಸ್ತೆಗಳನ್ನು ತಲುಪಲು ಇನ್ನೂ ಒಂದೆರಡು ವರ್ಷಗಳು ಬೇಕಾಗಬಹುದು ಅಥವಾ 2030ರ ವೇಳೆಗೆ ಯಮಹಾ ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.

yamaha-to-launch-new-electric-scooter-in-india-soon

ಕಂಪನಿಯ ಪ್ರಸ್ತುತ ಗಮನವು ಪ್ರೀಮಿಯಂ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳ ಮೇಲೆ ಇದೆ. ಐಸಿಇ (ಪೆಟ್ರೋಲ್) ಚಾಲಿತ ವಾಹನಗಳು ಭಾರತದಲ್ಲಿ ಶೇಕಡಾ 70-80 ರಷ್ಟು ಪಾಲನ್ನು ಹೊಂದಿರುವ ಕಾರಣ ಇಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಲು ಯಮಹಾ ಮತ್ತು ಹೋಂಡಾದಂತಹ ಕಂಪನಿಗಳು ಇಲ್ಲಿಯವರೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಆಸಕ್ತಿಯನ್ನು ತೋರಿಸಿಲ್ಲ.

ಯಮಹಾ ತನ್ನ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ. ಅಂತಹ ಒಂದು ಯೋಜನೆ ತನ್ನ ಐಕಾನಿಕ್ ಆರ್ಎಕ್ಸ್ 100 ಮೋಟಾರ್‌ಸೈಕಲ್ ಅನ್ನು ಮರಳಿ ಮಾರುಕಟ್ಟೆಗೆ ತರುವುದು, ಹಳೆಯ 2-ಸ್ಟ್ರೋಕ್ ಘಟಕದ ಬದಲು ಆಧುನಿಕ 4-ಸ್ಟ್ರೋಕ್ ಎಂಜಿನ್ ಜೊತೆಗೆ ಹೊಸ ಆರ್ಎಕ್ಸ್ ಬರುವ ನಿರೀಕ್ಷೆಯಿದೆ.

yamaha-to-launch-new-electric-scooter-in-india-soon

ಯಮಹಾ ಆರ್‌ಎಕ್ಸ್ 100 ಬೈಕ್‌ಗೆ ಭಾರತದಲ್ಲಿ ಅಪಾರ ಅಭಿಮಾನಿಗಳು ಇರುವುದರಿಂದ ಅದರ ಬಿಡುಗಡೆಯು ಹೆಚ್ಚಿನ ಪ್ರತಿಕ್ರಿಯೆಯನ್ನು ಪಡೆಯುವ ಸಾಧ್ಯತೆಯಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಭಾರತದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದು, ಜಾಗತಿಕ ತಯಾರಕರು ತಮ್ಮ ಉತ್ಪನ್ನಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲು ಪ್ರೇರೇಪಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, June 15, 2024, 8:30 [IST]
English summary
Yamaha to launch new electric scooter in india soon
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+