ಯುವಕರಿಗಾಗಿ R15, FZ ಶ್ರೇಣಿಗಳಿಗೆ ಆಕರ್ಷಕ ಅಪ್‌ಡೇಟ್‌ಗಳನ್ನು ಘೋಷಿಸಿದ ಯಮಹಾ
ಯಮಹಾ ತನ್ನ ಮೋಟಾರ್‌ಸೈಕಲ್ ಲೈನ್-ಅಪ್‌ಗೆ ಪ್ರಮುಖ ಅಪ್‌ಡೇಟ್‌ಗಳನ್ನು ಘೋಷಿಸಿದೆ. R15 V4 ಮತ್ತು FZ-S FI 4.0 DLX, FZ-S FI 3.0, FZ FI 3.0, ಮತ್ತು FZ-X ಸೇರಿದಂತೆ FZ ಸರಣಿಯ ಮಾದರಿಗಳು ಹೊಸ ಬಣ್ಣದ ಆಯ್ಕೆಗಳು ಮತ್ತು ಸ್ಟೈಲಿಂಗ್ ನವೀಕರಣಗಳಿಗೆ ಒಳಗಾಗಿವೆಯೆಂದು ಯಮಹಾ ಹೇಳಿದೆ.
ಹೊಸ ವರ್ಷಕ್ಕೆ ರೋಮಾಂಚಕ ಬಣ್ಣಗಳು ಮತ್ತು ಗ್ರಾಫಿಕಲ್ ವರ್ಧನೆಯ ಪರಿಚಯದೊಂದಿಗೆ ಮಾರಾಟವನ್ನು ಹೆಚ್ಚಿಸಲು ಮತ್ತು ದೇಶಾದ್ಯಂತ ಯುವ ಗ್ರಾಹಕರನ್ನು ಆಕರ್ಷಿಸಲು ಕಂಪನಿ ಈ ಅಪ್‌ಡೇಟ್‌ಗಳನ್ನು ಘೋಷಿಸಿದೆ. ಯುವ ಗ್ರಾಹಕರ ಆದ್ಯತೆಗಳನ್ನು ಪೂರೈಸಲು ಮತ್ತು ಈ ನವೀಕರಣಗಳ ಮೂಲಕ ಅವರ ಅನುಭವವನ್ನು ಹೆಚ್ಚಿಸಲು ಒತ್ತು ನೀಡಲಾಗಿದೆ ಎಂದು ಯಮಹಾ ಹೇಳಿದೆ.

2024 ರ ಅತ್ಯುನ್ನತ ಸ್ಪೋರ್ಟಿ R15 V4 ಮಾದರಿಯು ಹೊಸ ಬಣ್ಣದ ಸ್ಕೀಮ್‌ನೊಂದಿಗೆ ಉತ್ಸಾಹಿಗಳನ್ನು ಬೆರಗುಗೊಳಿಸುವಂತೆ ಹೊಂದಿಸಲಾಗಿದೆ. ಇದು ಯಮಹಾದ ಉನ್ನತ ಮಟ್ಟದ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಮಾಡೆಲ್‌ನ ಆಕರ್ಷಣೆಯನ್ನು ಹೆಚ್ಚಿಸುವ ಮೂಲಕ, ಅಸ್ತಿತ್ವದಲ್ಲಿರುವ ರೇಸಿಂಗ್ ಬ್ಲೂ ಮತ್ತು ಮೆಟಾಲಿಕ್ ರೆಡ್ ಶೇಡ್‌ಗಳು ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳಿಗೆ ಒಳಪಡಿಸಲಾಗಿದೆ.
2024 ರ FZ ಸರಣಿಯು ಪರಿವರ್ತಕ ಅಪ್‌ಡೇಟ್‌ಗೆ ಒಳಗಾಗಿದೆ, ಇದು ಅದ್ಭುತವಾದ ಹೊಸ ಬಣ್ಣಗಳೊಂದಿಗೆ ನೋಡುಗರನ್ನು ಆಕರ್ಷಿಸಲಿದೆ ಎಂದು ಯಮಹಾ ಹೇಳಿದೆ. FZ-S FI Ver 4.0 ಡೀಲಕ್ಸ್ ಈಗ ಹೊಸ 'ರೇಸಿಂಗ್ ಬ್ಲೂ' ಬಣ್ಣವನ್ನು ಹೊಂದಿದೆ. ಆದರೆ ಅಸ್ತಿತ್ವದಲ್ಲಿರುವ ಮೆಟಾಲಿಕ್ ಬ್ಲಾಕ್ ಬಣ್ಣವನ್ನು ಮ್ಯಾಟ್ ಬ್ಲ್ಯಾಕ್ ಆಯ್ಕೆಯೊಂದಿಗೆ ಬದಲಾಯಿಸಲಾಗಿದೆ.

ಇದಲ್ಲದೆ, ಮ್ಯಾಟ್ ಬ್ಲ್ಯಾಕ್ ಮತ್ತು ಮೆಜೆಸ್ಟಿ ರೆಡ್ ಬಣ್ಣಗಳು ಸಹ ಸೊಗಸಾದ ಕಾಸ್ಮೆಟಿಕ್ ವರ್ಧನೆಗಳನ್ನು ಪಡೆದಿವೆ. ಗಮನಾರ್ಹವಾಗಿ, ಸಂಪೂರ್ಣ FZ-S FI Ver 4.0 ಡಿಲಕ್ಸ್‌ಗೆ ಸೀಟ್ ಬಣ್ಣವನ್ನು ನಯವಾದ ಸಾಲಿಡ್ ಬ್ಲಾಕ್ ಬಣ್ಣಕ್ಕೆ ಪರಿವರ್ತಿಸಲಾಗಿದೆ, ಒಟ್ಟಾರೆ ಇದು ಸ್ಟೈಲಿಂಗ್ ರಿಫ್ರೆಶ್ ಟಚ್ ಅನ್ನು ಸೇರಿಸುತ್ತದೆ ಎಂದು ಯಮಹಾ ಹೇಳಿದೆ.
ಡಿಸೈನ್ ಅನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನದಲ್ಲಿ, FZ-S FI Ver 3.0 ಮಾದರಿಯು ಈಗ ಆಕರ್ಷಕ ಮ್ಯಾಟ್ ಗ್ರೇ ಬಣ್ಣದಲ್ಲಿ ಲಭ್ಯವಿದ್ದು, FZ FI ಆಕರ್ಷಕವಾದ ಮ್ಯಾಟ್ ಸಯಾನ್ ಬಣ್ಣನ್ನು ಪಡೆದಿದೆ. FZ-X, ರೋಮಾಂಚಕ ಶ್ರೇಣಿಯನ್ನು ಸ್ಟ್ರಾಂಗ್ ಮತ್ತು ಒರಟಾದ ಮ್ಯಾಟ್ ಟೈಟಾನ್ ಬಣ್ಣವನ್ನು ಪಡೆದಿದೆ.

ಹೊಸ ಅಪ್‌ಡೇಟ್‌ಗಳ ಕುರಿತು ಪ್ರತಿಕ್ರಿಯಿಸಿದ ಯಮಹಾ ಅಧ್ಯಕ್ಷ ಐಶಿನ್ ಚಿಹಾನಾ, ಯಮಹಾ ತನ್ನ ರಿಫ್ರೆಶ್ ಮಾಡಿದ 2024 ಮೋಟಾರ್‌ಸೈಕಲ್ ಶ್ರೇಣಿಯನ್ನು 'ದಿ ಕಾಲ್ ಆಫ್ ದಿ ಬ್ಲೂ' ಬ್ರಾಂಡ್ ಅಭಿಯಾನಕ್ಕೆ ಅನುಗುಣವಾಗಿ ಅನಾವರಣಗೊಳಿಸಲು ಉತ್ಸುಕವಾಗಿದೆ. ರೋಮಾಂಚಕ ಹೊಸ ಬಣ್ಣದ ಆಯ್ಕೆಗಳನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಇದು ಭಾರತದ ಯಮಹಾ ಉತ್ಸಾಹಿಗಳಿಗೆ ದೃಷ್ಟಿಗೋಚರವಾಗಿ ಬೆರಗುಗೊಳಿಸುವುದರ ಜೊತೆಗೆ ತೃಪ್ತಿಕರ ಅನುಭವಗಳನ್ನು ನೀಡುತ್ತದೆ ಎಂದರು.
"ಕಾಲಕಾಲಕ್ಕೆ ನಡೆಸಲಾಗುತ್ತಿರುವ ಬಣ್ಣ ಸಂಬಂಧಿತ ಸಮೀಕ್ಷೆಗಳಲ್ಲಿ ನಮ್ಮ ಯುವ ಗ್ರಾಹಕರಿಂದ ಸಾಕಷ್ಟು ಪ್ರತಿಕ್ರಿಯೆಯನ್ನು ಪಡೆದ ನಂತರ ನಾವು ಈ ಹೊಸ ಬಣ್ಣದ ಯೋಜನೆಗಳನ್ನು ಪರಿಚಯಿಸಿದ್ದೇವೆ. ಈ ನವೀಕರಣಗಳ ಮೂಲಕ, ಯಮಹಾ ಅಭಿಮಾನಿಗಳಿಗೆ ವೈಯಕ್ತೀಕರಿಸಿದ ಪ್ರಯಾಣವನ್ನು ನೀಡಲು ನಾವು ಬದ್ಧರಾಗಿದ್ದೇವೆ, ವರ್ಧಿತ ಬೈಕಿಂಗ್ ಅನುಭವಕ್ಕಾಗಿ 'ದಿ ಕಾಲ್ ಆಫ್ ದಿ ಬ್ಲೂ' ಅನ್ನು ಸ್ವೀಕರಿಸಲು ಹೆಚ್ಚು ಉತ್ಸಾಹಿಗಳನ್ನು ಪ್ರೋತ್ಸಾಹಿಸುತ್ತೇವೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








