2024ರಲ್ಲಿ ಬಿಡುಗಡೆಯಾದ ಬೆಸ್ಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು: ಕೈಗೆಟುಕುವ ಬೆಲೆ, ಹೆಚ್ಚು ರೇಂಜ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಜನರ ಹಿಂಜರಿಕೆಯಾಗುವ ಬಾವನೆ ಬದಲಾಗಿದೆ. ಆದರೆ ಇಂದು ಭಾರತದ ರಸ್ತೆಯಲ್ಲಿ ಹಸಿರು ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ಇಂದು ಸಾಮಾನ್ಯ ದೃಶ್ಯವಾಗಿದೆ. ಆದರೆ ರಸ್ತೆಯಲ್ಲಿ ಪೆಟ್ರೋಲ್ ದ್ವಿಚಕ್ರ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (Electric Two Wheelers) ಹೆಚ್ಚಾಗಿ ಕಾಣಿಸುತ್ತಿದೆ. ಐಸಿ ಎಂಜಿನ್ ದ್ವಿಚಕ್ರ ವಾಹನಗಳಗಿಂತ ವೆಚ್ಚವು ಸ್ವಲ್ಪ ಹೆಚ್ಚಾಗಿರುತ್ತದೆ ಮತ್ತು ಚಾರ್ಜಿಂಗ್ ಸೌಲಭ್ಯಗಳು ಇನ್ನೂ ಅಭಿವೃದ್ಧಿ ಹೊಂದುತ್ತಿವೆ. ಇದಕ್ಕಾಗಿ ಹೆಚ್ಚಿನ ಜನರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಭಾರತದಲ್ಲಿ ಬಿಡುಗಡೆಗೊಂಡ ಪ್ರಮುಖ ಎಲೆಕ್ಟ್ರಿಕ್ ದ್ವಿಚ್ಕ್ರ ವಾಹನಗಳ ಮಾಹಿತಿ ಇಲ್ಲಿದೆ.

ಎಥರ್ ರಿಜ್ಟಾ: ಬೆಂಗಳೂರು ಮೂಲದ ಎಥರ್ ಎನರ್ಜಿ (Ather Energy) ತನ್ನ 450 ಸರಣಿ ಎಲೆಕ್ಟ್ರಿಕ್ ಮಾರಾಟದೊಂದಿಗೆ ದೇಶಾದ್ಯಂತ ಖ್ಯಾತಿ ಗಳಿಸಿದೆ. ಎಥರ್ ಕಂಪನಿಯು ಈ ವರ್ಷ ರಿಜ್ಟಾ ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಎಥರ್ ರಿಜ್ಟಾ ಎಂಬ ಫ್ಯಾಮಿಲಿ ಸ್ಕೂಟರ್ ಎಂದು ಕರೆಯಲಾಗುತ್ತದೆ ಏಕೆಂದರೆ ಕುಟುಂಬದ ಪ್ರತಿಯೊಬ್ಬರೂ ಇದನ್ನು ಓಡಿಸಬಹುದು.

Electric Two Wheelers

ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ರಿಜ್ಟಾ ಎಸ್, ರಿಜ್ಟಾ ಝಡ್ ಮತ್ತು ರಿಜ್ಟಾ ಝಡ್ (ಲಾಂಗ್ ರೇಂಜ್) ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಡ್ಯಾಶ್‌ಬೋರ್ಡ್‌ನಲ್ಲಿ SkidControl TM ಮತ್ತು WhatsApp ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಸವಾರಿ ಅನುಭವವನ್ನು ಹೆಚ್ಚಿಸುತ್ತದೆ. ಇದರಲ್ಲಿ ಬೇಸ್ ರಿಜ್ಟಾ S ರೂಪಾಂತರವು 2.9kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು 2.9kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ಬಜಾಜ್ ಚೇತಕ್ 35: ಚೇತಕ್ 35 ಸೀರಿಸ್ ದೇಶೀಯ ವಾಹನ ತಯಾರಕರಿಂದ ಬಿಡುಗಡೆಯಾದ ಇತ್ತೀಚಿನ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.ಸಾಮಾನ್ಯ ಬಜಾಜ್ ಚೇತಕ್ ಸ್ಕೂಟರ್‌ನಿಂದ ಸ್ವಲ್ಪ ವಿಭಿನ್ನ ನೋಟ ಮತ್ತು ಹೊಸ ಬಣ್ಣದ ಆಯ್ಕೆಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲಾಗಿದೆ. ಚೇತಕ್ 35 ಎಲೆಕ್ಟ್ರಿಕ್ ಸ್ಕೂಟರ್‌ನ 3501 ರೂಪಾಂತರವು ಟಚ್ ಸ್ಕ್ರೀನ್ ಡ್ಯಾಶ್‌ಬೋರ್ಡ್ ಅನ್ನು ನೀಡುತ್ತದೆ. ಬಜಾಜ್ 35 ಸೀರಿಸ್ ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.20 ಲಕ್ಷವಾಗಿದೆ.

ಅಲ್ಟ್ರಾವೈಲೆಟ್‌ F77 ಮ್ಯಾಕ್‌ 2: ಬೆಂಗಳೂರು ಮೂಲದ ಎಲೆಕ್ಟ್ರಿಕ್‌ ಬೈಕ್‌ ನಿರ್ಮಾಣ ಕಂಪನಿ ಅಲ್ಟ್ರಾವೈಲೆಟ್‌ ಈ ವರ್ಷ ಅಲ್ಟ್ರಾವೈಲೆಟ್‌ F77 ಮ್ಯಾಕ್‌ 2 ಬೈಕ್‌ ಅನ್ನು ಭಾರತೀಯ ಮಾರುಕಟ್ಟೆಗೆಯಲ್ಲಿ ಬಿಡುಗಡೆಗೊಳಿಸಿತು. F77 ಬೈಕ್‌ಗಿಂತಲೂ ಸಾಕಷ್ಟು ಅಪ್‌ಡೇಟ್‌ ಮತ್ತು ಹಲವು ಬಣ್ಣಗಳ ಆಯ್ಕೆಯೊಂದಿಗೆ ಬಂದಿರುವ ಈ ಬೈಕ್‌, ಹಾರ್ಡ್‌ಕೋರ್‌ ಎಲೆಕ್ಟ್ರಿಕ್‌ ಬೈಕ್‌ ಅಭಿಮಾನಿಗಳಿಗೆ ನೆಚ್ಚಿನ ಬೈಕ್‌ ಆಗಿ ಮಾರ್ಪಾಡಾಗಲಿದೆ.

ಅಲ್ಟ್ರಾವೈಲೆಟ್‌ F77 ಮ್ಯಾಕ್‌ 2 ಎಲೆಕ್ಟ್ರಿಕ್ ಬೈಕಿನಲ್ಲಿ ಬ್ಯಾಟರಿ ಸಾಮರ್ಥ್ಯವು (ರೀಕಾನ್‌ನ) ಮೊದಲಿನ 10.3kWh ಆಗಿದ್ದರೂ, IDC ಶ್ರೇಣಿಯು ಒಂದೇ ಚಾರ್ಜ್‌ನಲ್ಲಿ ಸಿಗುವ ರೇಂಜ್‌ ಸುಮಾರು 16 ಕಿಮೀನಷ್ಟು ಹೆಚ್ಚಾಗಿದ್ದು ಈಗ 323 ಕಿಮೀ ನಷ್ಟು ಓಡುತ್ತದೆ. ಅಲ್ಟ್ರಾವಯೊಲೆಟ್‌ನ ಸ್ವಂತ ಸೂಪರ್‌ನೋವಾ ಚಾರ್ಜರ್ ಕೇವಲ 45 ನಿಮಿಷಗಳಲ್ಲಿ 20-80 ಪ್ರತಿಶತದಷ್ಟು ರೀಚಾರ್ಜ್‌ಗೆ ಅವಕಾಶ ನೀಡುವ ಜೊತೆಗೆ ಈಗ ವೇಗವಾಗಿ ಚಾರ್ಜಿಂಗ್ ಆಯ್ಕೆಗಳು ಲಭ್ಯವಿದೆ.

ಟಿವಿಎಸ್ ಐಕ್ಯೂಬ್: ಇದು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಈ ಟಿವಿಎಸ್ ಐಕ್ಯೂಬ್ ನವೀಕರಿಸಿ ಈ ವರ್ಷ ಬಿಡುಗಡೆಗೊಳಿಸಿತು. ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ST ರೂಪಾಂತರವನ್ನು ಸಹ ಪರಿಚಯಿಸಿದೆ. ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ 3.2kWh ಮತ್ತು 5.5kWh ನ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ.

ಹೀರೋ ವಿಡಾ ವಿ2: ಹೀರೋನ ಎಲೆಕ್ಟ್ರಿಕ್ ಸಬ್-ಬ್ರಾಂಡ್ ವಿಡಾ ಈ ವರ್ಷ ವಿ2 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು. ಈ ವರ್ಷ ಬಿಡುಗಡೆಗೊಂಡ ಹೀರೋ ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್ ವಿ2 ಲೈಟ್, ವಿ2 ಪ್ಲಸ್ ಮತ್ತು ವಿ2 ಪ್ರೊ ಎಂಬ ಮೂರು ರೂಪಾಂತರಗಳಲ್ಲಿ ಖರೀದಿಸಬಹುದು.

More from DriveSpark

Article Published On: Friday, December 27, 2024, 14:58 [IST]
English summary
Year ender 2024 top electric two wheelers launched in india this year details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+