1 ರೂ. ಖರ್ಚಿಲ್ಲದೆ 90 ಕಿ.ಮೀ ಓಡಿಸಬಹುದಾದ ಹೊಸ ಕಾರ್ಗೋ EV ಸ್ಕೂಟರ್ ಬಿಡುಗಡೆಗೆ ಸಜ್ಜು
ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಜೀಲಿಯೊ ಇಬೈಕ್ಸ್ (ZELIO Ebikes), ತನ್ನ ಅತ್ಯಾಧುನಿಕ ಕಾರ್ಗೋ EV ಸ್ಕೂಟರ್‌ನ ಬಿಡುಗಡೆಗೆ ಸಜ್ಜಾಗಿದೆ. ಪವರ್, ದಕ್ಷತೆ ಮತ್ತು ಬಳಕೆದಾರ ಸ್ನೇಹಿಯಾಗಿ ವಿನ್ಯಾಸಗೊಳಿಸಲಾದ ಈ ಮೇಡ್ ಇನ್ ಇಂಡಿಯಾ ಸ್ಕೂಟರ್, ವ್ಯಾಪಾರ ಸಾರಿಗೆಯನ್ನು ಮಾರ್ಪಡಿಸುವ ಭರವಸೆಯನ್ನು ನೀಡುತ್ತದೆ. ಸಣ್ಣ ವ್ಯಾಪಾರ ಮಾಲೀಕರಿಗೆ ವೈವಿಧ್ಯಮಯ ಶ್ರೇಣಿಯನ್ನು ನೀಡುವುದರ ಜೊತೆಗೆ ನಗರ ಪರಿಸರದಲ್ಲಿ ಸರಕುಗಳನ್ನು ಹೇಗೆ ಸಾಗಿಸಲಾಗುತ್ತದೆ ಎಂಬುದನ್ನು ಮರು ವ್ಯಾಖ್ಯಾನಿಸಲು ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿದೆ. ಸ್ಕೂಟರ್ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.
25 ಕಿ.ಮೀ ಉನ್ನತ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರುವ ಈ ಸ್ಕೂಟರ್, 150 ಕೆ.ಜಿ ಗರಿಷ್ಟ ತೂಕವನ್ನು ಸಲೀಸಾಗಿ ಸಾಗಿಸಬಲ್ಲದು. ದೈನಂದಿನ ಕಾರ್ಯಾಚರಣೆಗಳಿಗೆ ದೃಢವಾದ ಮತ್ತು ಬಹುಮುಖ ವಾಹನದ ಅಗತ್ಯವಿರುವವರಿಗೆ ಇದು ಸೂಕ್ತ ಆಯ್ಕೆಯಾಗಿದೆ. ಒಂದೇ ಚಾರ್ಜ್‌ನಲ್ಲಿ 90 ಕಿ.ಮೀ ಓಡಿಸಬಹುದಾಗಿದೆ.

ಎಲ್ಲಾ ಅಧಿಕೃತ ZELIO Ebikes ಡೀಲರ್‌ಶಿಪ್‌ಗಳು ಮತ್ತು ಶೋರೂಮ್‌ಗಳಲ್ಲಿ 2024 ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ನಿಗದಿಪಡಿಸಲಾಗಿದೆ. ಹೊಸ ಕಡಿಮೆ-ವೇಗದ ಕಾರ್ಗೋ EV ಸ್ಕೂಟರ್ ತನ್ನ ನವೀನ ವಿನ್ಯಾಸ, ಪ್ರಭಾವಶಾಲಿ ಕಾರ್ಯಕ್ಷಮತೆ ಮತ್ತು ರಸ್ತೆಯ ಮೇಲೆ ಗಮನಾರ್ಹವಾದ ಉಪಸ್ಥಿತಿಗಾಗಿ ಮೆಚ್ಚುಗೆಯನ್ನು ಗಳಿಸುವ ವಿಶ್ವಾಸವನ್ನು ಕಂಪನಿ ವ್ಯಕ್ತಪಡಿಸಿದೆ.
ಜೀಲಿಯೊ ಇಬೈಕ್ಸ್‌ನ ಸಹ-ಸಂಸ್ಥಾಪಕ ಕುನಾಲ್ ಆರ್ಯ ಮಾತನಾಡಿ, ಹೊಸ ಕಡಿಮೆ-ವೇಗದ ಕಾರ್ಗೋ EV ಸ್ಕೂಟರ್ ಕೊನೆಯ-ಮೈಲಿ ವಿತರಣೆಯಲ್ಲಿ ಸಣ್ಣ ವ್ಯಾಪಾರಗಳು ಎದುರಿಸುತ್ತಿರುವ ನಿರ್ಣಾಯಕ ಸವಾಲುಗಳನ್ನು ಪರಿಹರಿಸುತ್ತದೆ. ಉದಾಹರಣೆಗೆ ಭಾರೀ ಹೊರೆಗಳನ್ನು ನಿರ್ವಹಿಸುವುದು ಮತ್ತು ನಗರಗಳಲ್ಲಿ ಅಸಾಧಾರಣ ಕಾರ್ಯಕ್ಷಮತೆಯನ್ನು ಸಂಯೋಜಿಸುತ್ತದೆ ಎಂದರು.
ಇತ್ತೀಚಿನ ಇವಿಗಳು: ಜೀಲಿಯೊ ಇಬೈಕ್ಸ್ ಹೊಸ ಕಾರ್ಗೋ ಸ್ಕೂಟರ್ ಮಾತ್ರವಲ್ಲದೇ, ಇತ್ತೀಚೆಗೆ GRACY ಸರಣಿಯ ತನ್ನ ಕಡಿಮೆ-ವೇಗದ ಸ್ಕೂಟರ್‌ಗಳನ್ನು ಕೂಡ ಬಿಡುಗಡೆ ಮಾಡಿದೆ. ಇದರಲ್ಲಿ GRACYi, GRACY Pro ಮತ್ತು GRACY+ ಮಾದರಿಗಳನ್ನು ಒಳಗೊಂಡಿದ್ದು, ರೂ. 59,273 ಮತ್ತು ರೂ. 83,073 (ಎಕ್ಸ್ ಶೋರೂಂ) ನಡುವೆ ಬೆಲೆಯಿದೆ.
ಇದರ ನಂತರ ಎಕ್ಸ್-ಮೆನ್ ಸ್ಕೂಟರ್‌ಗಳನ್ನು ಪರಿಚಯಿಸಲಾಯಿತು, ಇವುಗಳ ಬೆಲೆಯು ರೂ. 64,543 ರಿಂದ ರೂ. 87,573 ವರೆಗೆ (ಎಕ್ಸ್ ಶೋ ರೂಂ) ಇದೆ. ಬ್ರ್ಯಾಂಡ್ ತನ್ನ ಕೊಡುಗೆಗಳನ್ನು Eeva ಸರಣಿಯೊಂದಿಗೆ ಮತ್ತಷ್ಟು ವಿಸ್ತರಿಸಿದ್ದು, ಇದರಲ್ಲಿ Eeva, Eeva ZX ಮತ್ತು Eeva ZX+ ಮಾಡೆಲ್‌ಗಳು ರೂ. 56,051 ಮತ್ತು ರೂ. 90,500 (ಎಕ್ಸ್-ಶೋರೂಮ್) ನಡುವೆ ಬೆಲೆಯಿದೆ.
ಇದೀಗ ಈ ಕಡಿಮೆ-ವೇಗದ ಕಾರ್ಗೋ EV ಸ್ಕೂಟರ್‌ನ ಸೇರ್ಪಡೆಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮದಲ್ಲಿ ZELIO Ebikes ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ, ಮಾರುಕಟ್ಟೆಯ ವಿಕಸನಗೊಳ್ಳುತ್ತಿರುವ ಬೇಡಿಕೆಗಳನ್ನು ಪೂರೈಸಲು ನಿರಂತರವಾಗಿ ಹೊಸತನವನ್ನು ನೀಡಲು ಕಂಪನಿ ಸದಾ ಮುಂದಿರುತ್ತದೆ ಎಂದು ಜೀಲಿಯೊ ಇಬೈಕ್ಸ್ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








