ಹೊಸ ಸ್ಕೂಟರ್ ಅನಾವರಣ: 1 ರೂ. ಖರ್ಚಿಲ್ಲದೆ ನಿತ್ಯ 100 ಕಿ.ಮೀ ಓಡುತ್ತೆ... ರಿವರ್ಸ್ ಗೇರ್ ಇದೆ!

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಜೀಲಿಯೊ ಇಬೈಕ್ಸ್ (ZELIO Ebikes), ಪರಿಷ್ಕೃತ Eeva ZX+ ಇವಿ ಸ್ಕೂಟರ್ ಅನ್ನು ಈ ಬಾರಿ ಆಕರ್ಷಕ ಡಿಸೈನ್‌ನೊಂದಿಗೆ ವಿನ್ಯಾಸಗೊಳಿಸಿದೆ. Eeva ಮತ್ತು Eeva Eco ನಂತಹ ಮಾದರಿಗಳನ್ನು ಒಳಗೊಂಡಿರುವ Eeva ಸರಣಿಯ ಭಾಗವಾಗಿ, ಹೊಸ Eeva ZX+ ಅನ್ನು ಅನಾವರಣಗೊಳಿಸಲಾಗಿದೆ. ವಿದ್ಯಾರ್ಥಿಗಳು, ವೃತ್ತಿಪರರು ಸೇರಿದಂತೆ ಆಧುನಿಕ ನಗರ ಪ್ರಯಾಣಿಕರಿಗಾಗಿ ಈ ಇವಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಹೊಸದಾಗಿ ಮರುವಿನ್ಯಾಸಗೊಳಿಸಲಾದ Eeva ZX+ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗವು 25 km/h ಇದ್ದು, ಒಂದು ಚಾರ್ಜ್‌ನಲ್ಲಿ 100 ಕಿ.ಮೀವರೆಗೆ ಓಡಿಸಬಹುದು. ಸ್ಕೂಟರ್ ದೃಢವಾದ BLDC ಮೋಟಾರ್ (60/72V) ನಿಂದ ಚಾಲಿತವಾಗಿದ್ದು, 90 ಕೆ.ಜಿ ಯಿಂದ 180 ಕೆ.ಜಿ ಲೋಡಿಂಗ್ ಸಾಮರ್ಥ್ಯಯನ್ನು ಹೊಂದಿದೆ.

zelio-ebikes-unveils-eeva-zx-low-speed-scooter

Eeva ZX+ ನಲ್ಲಿ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದ್ದು, ಇದು ಮುಂಭಾಗದ ಡಿಸ್ಕ್ ಬ್ರೇಕ್, ಹಿಂಭಾಗದ ಡ್ರಮ್ ಬ್ರೇಕ್ ಮತ್ತು ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್‌ಗಳನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಂದಿದೆ. ಪರ್ಫಾಮೆನ್ಸ್ ಮತ್ತು ವಿಶ್ವಾಸಾರ್ಹತೆಯ ಪರಿಪೂರ್ಣ ಸಮತೋಲನವನ್ನು ಒದಗಿಸುತ್ತದೆ ಕಂಪನಿ ಭರವಸೆ ನೀಡಿದೆ.

Eeva ZX+ ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಆಂಟಿ-ಥೆಫ್ಟ್ ಅಲಾರ್ಮ್, ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್, ಆಟೋ ರಿಪೇರಿ ಸ್ವಿಚ್, USB ಚಾರ್ಜಿಂಗ್ ಪೋರ್ಟ್ ಮತ್ತು ಹೆಚ್ಚಿನ ಅನುಕೂಲಕ್ಕಾಗಿ ಡಿಜಿಟಲ್ ಡಿಸ್ಪ್ಲೇಯಂತಹ ಸುಧಾರಿತ ಫೀಚರ್‌ಗಳನ್ನು ನೀಡಲಾಗಿದೆ. ಬ್ಲೂ, ಗ್ರೇ, ವೈಟ್ ಮತ್ತು ಬ್ಲಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

zelio-ebikes-unveils-eeva-zx-low-speed-scooter

ಇದರ ಪ್ರಭಾವಶಾಲಿ ಕಾರ್ಯಕ್ಷಮತೆಯ ಜೊತೆಗೆ, Eeva ZX+ ಒಂದು ವರ್ಷ ಅಥವಾ 10,000 ಕಿ.ಮೀ ಲೀಡ್ ಆಸಿಡ್ ಮತ್ತು Li-Ion ಬ್ಯಾಟರಿ ರೂಪಾಂತರಗಳಲ್ಲಿ ವ್ಯಾಪಕವಾದ ವಾರಂಟಿಯೊಂದಿಗೆ ಬರುತ್ತದೆ. ಇದು ಸವಾರರಿಗೆ ಅಸಾಧಾರಣ ವಿಶ್ವಾಸಾರ್ಹತೆ ಒದಗಿಸುತ್ತದೆ ಎಂದು ಜೀಲಿಯೊ ಕಂಪನಿ ಭರವಸೆ ನೀಡಿದೆ.

ಬೆಲೆ ವಿವರಗಳು: ಈ ಸ್ಕೂಟರ್ ವಿವಿಧ ಬ್ಯಾಟರಿ ಆಯ್ಕೆಗಳೊಂದಿಗೆ ಬರಲಿದ್ದು, ಬ್ಯಾಟರಿ ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆಗಳನ್ನು ಹೊಂದಿದೆ. 60V/32AH ಲೀಡ್ ಆಸಿಡ್ ಬ್ಯಾಟರಿಯೊಂದಿಗೆ 60 ರಿಂದ 70 ಕಿ.ಮೀ ರೇಂಜ್ ನೀಡುವ ಸ್ಕೂಟರ್ ರೂ. 67,500 (ಎಕ್ಸ್‌ ಶೋರೂಂ) ಬೆಲೆಯನ್ನು ಹೊಂದಿದೆ. ಈ ಸ್ಕೂಟರ್ ಫುಲ್ ಚಾರ್ಜ್‌ ಆಗಲು 7 ರಿಂದ 8 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.

zelio-ebikes-unveils-eeva-zx-low-speed-scooter

72V/32AH ಲೀಡ್ ಆಸಿಡ್ ಬ್ಯಾಟರಿಯೊಂದಿಗೆ 80 ಕಿ.ಮೀ ರೇಂಜ್ ನೀಡುವ ಸ್ಕೂಟರ್ ರೂ. 70,000 ಬೆಲೆಯಿದ್ದು, ಇದನ್ನು ಪೂರ್ಣ ಚಾರ್ಜ್ ಮಾಡಲು 7 ರಿಂದ 8 ಗಂಟೆಗಳ ಸಮಯ ಬೇಕಾಗುತ್ತದೆ. ಹಾಗೆಯೇ 60V/38AH ಲೀಡ್ ಆಸಿಡ್ ಬ್ಯಾಟರಿಯೊಂದಿಗೆ 80 ಕಿ.ಮೀ ರೇಂಜ್ ನೀಡುವ ಸ್ಕೂಟರ್ ರೂ. 73,300 ಬೆಲೆಯಿದ್ದು, 7 ರಿಂದ 8 ಗಂಟೆಗಳ ಚಾರ್ಜಿಂಗ್ ಸಮಯವಿದೆ.

72V/38AH ಲೀಡ್ ಆಸಿಡ್ ಬ್ಯಾಟರಿಯೊಂದಿಗೆ 100 ಕಿ.ಮೀ ರೇಂಜ್ ನೀಡುವ ಸ್ಕೂಟರ್ ರೂ. 77,000 ಬೆಲೆಯಿದ್ದು, ಸಂಪೂರ್ಣವಾಗಿ ಚಾರ್ಜ್ ಆಗಲು 9 ರಿಂದ 10 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. 60V/30AH ಲಿಥಿಯಂ ಅಯಾನ್ (Li-Ion) ಬ್ಯಾಟರಿಯೊಂದಿಗೆ 80 ಕಿ.ಮೀ ರೇಂಜ್ ನೀಡುವ ಸ್ಕೂಟರ್ ರೂ. 90,500 ಬೆಲೆಯಿದ್ದು, 4 ಗಂಟೆಗಳ ಚಾರ್ಜಿಂಗ್ ಸಮಯವನ್ನು ಹೊಂದಿದೆ.

More from DriveSpark

Article Published On: Tuesday, October 1, 2024, 16:35 [IST]
English summary
Zelio ebikes unveils eeva zx low speed scooter
Read more on electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+