Zelio: ಹೊಸ ಈವಾ ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗುರುವಾರವಷ್ಟೇ ಬಿಡುಗಡೆ.. 52,000ಕ್ಕೆ ಲಭ್ಯ, ಪ್ರಮುಖಾಂಶಗಳಿವು

ಝೆಲಿಯೊ ಇಬೈಕ್ಸ್ (Zelio Ebikes) ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಗುರುವಾರ ಹೊಚ್ಚ ಹೊಸ ಈವಾ ಸಿರೀಸ್ (Eeva series) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅದ್ದೂರಿಯಾಗಿ ಪರಿಚಯಿಸಿತ್ತು. ಇವುಗಳು ಈವಾ (Eeva), ಈವಾ ಇಕೋ (Eeva Eco) ಹಾಗೂ ಈವಾ ಝಡ್ಎಕ್ಸ್ ಪ್ಲಸ್ (Eeva ZX+) ಎಂಬ 3 ಬೇರೆ - ಬೇರೆ ಮಾದರಿಗಳ (Models) ಆಯ್ಕೆಯಲ್ಲಿಯೂ ಖರೀದಿಗೆ ದೊರೆಯಲಿದ್ದು, ದಿನನಿತ್ಯದ ಬಳಕೆಗೆ ಹೆಚ್ಚು ಸೂಕ್ತವಾಗಿವೆ. ಬನ್ನಿ.. ಈ ನೂತನ ಝೆಲಿಯೊ ಈವಾ ಸಿರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿ ಪ್ಯಾಕ್ ಹಾಗೂ ಬೆಲೆ ಕುರಿತಂತೆ ಪ್ರಮುಖಾಂಶಗಳನ್ನು ತಿಳಿಯೋಣ.

ಝೆಲಿಯೊ ಈವಾ (Zelio Eeva): ಇದರ 60ವಿ/32ಎಹೆಚ್ ಲೀಡ್ ಆಸಿಡ್ ಬ್ಯಾಟರಿ ಪ್ಯಾಕ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್, ರೂ.56,051 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 55 ರಿಂದ 60 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 72ವಿ/32 ಎಹೆಚ್ ಲೀಡ್ ಆಸಿಡ್ ಬ್ಯಾಟರಿ ಪಡೆದಿರುವ ಎಲೆಕ್ಟ್ರಿಕ್ ಸ್ಕೂಟರ್, ರೂ. 58,551 ದರವನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 70 ಕಿಲೋಮೀಟರ್ ಓಡುತ್ತದೆ.

Zelio Eeva Series Electric Scooter Top Things Battery Pack Wise Price And Range Details

60ವಿ/38ಎಹೆಚ್ ಲೀಡ್ ಆಸಿಡ್ ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಎಲೆಕ್ಟ್ರಿಕ್ ಸ್ಕೂಟರ್, ರೂ.61,851 ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೂರ್ತಿ ಚಾರ್ಜ್‌ನಲ್ಲಿ 70 ರಿಂದ 75 ಕಿಲೋಮೀಟರ್ ಕ್ರಮಿಸುತ್ತದೆ. 72ವಿ/38ಎಹೆಚ್ ಲೀಡ್ ಆಸಿಡ್ ಬ್ಯಾಟರಿಯನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್, ರೂ.65,551 ದರವನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 100 ಓಡುತ್ತದೆ. 60ವಿ/30ಎಹೆಚ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿರುವ ಎಲೆಕ್ಟ್ರಿಕ್ ಸ್ಕೂಟರ್, ರೂ.79,051 ಬೆಲೆಯನ್ನು ಹೊಂದಿದೆ. 80 ಕಿಲೋಮೀಟರ್ ರೇಂಜ್ ನೀಡುತ್ತದೆ.

ಈ ಹೊಚ್ಚ ಹೊಸ ಝೆಲಿಯೊ ಈವಾ ಎಲೆಕ್ಟ್ರಿಕ್ ಸ್ಕೂಟರ್, ಬಿಎಲ್‌ಡಿಸಿ ಮೋಟಾರ್ ಹೊಂದಿದೆ. 80 ಕೆಜಿ ತೂಕವಿದ್ದು, 180 ಕೆಜಿವರೆಗೆ (ವ್ಯಕ್ತಿಗಳು & ವಸ್ತು) ಸಾಗಿಸಬಲ್ಲದು. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ನ್ನು ಹೊಂದಿದೆ. ಡಿಜಿಟಲ್ ಡಿಸ್ಪ್ಲೇ, ಆಂಟಿ ಥೆಫ್ಟ್ ಅಲಾರ್ಮ್, ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್, ಆಟೋ ರಿಪೇರಿ ಸ್ವಿಚ್ ಹಾಗೂ ಯುಎಸ್‌ಬಿ ಚಾರ್ಜರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

Zelio Eeva Series Electric Scooter Top Things Battery Pack Wise Price And Range Details

ಝೆಲಿಯೊ ಈವಾ ಇಕೋ (Zelio Eeva Eco): ಇದು ಕೂಡ ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ದೊರೆಯುತ್ತದೆ. 48ವಿ/32ಎಹೆಚ್ ಲೀಡ್ ಆಸಿಡ್ ಬ್ಯಾಟರಿ ಪ್ಯಾಕ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್, ರೂ.52,000 ಎಕ್ಸ್ ಶೋರೂಂ ದರವನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 50 ರಿಂದ 60 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 60ವಿ/32ಎಹೆಚ್ ಲೀಡ್ ಆಸಿಡ್ ಬ್ಯಾಟರಿಯನ್ನು ಪಡೆದಿರುವ ಎಲೆಕ್ಟ್ರಿಕ್ ಸ್ಕೂಟರ್, ರೂ.54,000 ಬೆಲೆಯನ್ನು ಹೊಂದಿದೆ. 70 ಕಿಲೋಮೀಟರ್ ಓಡುತ್ತದೆ.

60ವಿ/30ಎಹೆಚ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಎಲೆಕ್ಟ್ರಿಕ್ ಸ್ಕೂಟರ್, ರೂ.68,000 (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 100 ಕಿಲೋಮೀಟರ್ ಕ್ರಮಿಸುತ್ತದೆ. ಡಿಜಿಟಲ್ ಡಿಸ್ಪ್ಲೇ ಮತ್ತು ಸೆಂಟ್ರಲ್ ಲಾಕಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬ್ಲ್ಯೂ, ಗ್ರೇ, ವೈಟ್, ಬ್ಲ್ಯಾಕ್ & ರೆಡ್ ಬಣ್ಣಗಳೊಂದಿಗೂ (ಕಲರ್) ಲಭ್ಯವಿದೆ.

Zelio Eeva Series Electric Scooter Top Things Battery Pack Wise Price And Range Details

ಝೆಲಿಯೊ ಝಡ್ಎಕ್ಸ್ ಪ್ಲಸ್ (Zelio Eeva ZX+): ಇದರ 60ವಿ/32ಎಹೆಚ್ ಲೀಡ್ ಆಸಿಡ್ ಬ್ಯಾಟರಿ ಪ್ಯಾಕ್ ಪಡೆದಿರುವ ಎಲೆಕ್ಟ್ರಿಕ್ ಸ್ಕೂಟರ್, ರೂ.67,500 (ಎಕ್ಸ್ ಶೋರೂಂ) ಬೆಲೆಯನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 55 ರಿಂದ 60 ಕಿಲೋಮೀಟರ್ ಓಡುತ್ತದೆ. 72ವಿ/32ಎಹೆಚ್ ಲೀಡ್ ಆಸಿಡ್ ಬ್ಯಾಟರಿಯನ್ನು ಪಡೆದಿರುವ ಎಲೆಕ್ಟ್ರಿಕ್ ಸ್ಕೂಟರ್, ರೂ.70,000 ದರವನ್ನು ಹೊಂದಿದೆ. 70 ಕಿಲೋಮೀಟರ್ ಕ್ರಮಿಸುತ್ತದೆ.

60ವಿ/38ಎಹೆಚ್ ಲೀಡ್ ಆಸಿಡ್ ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಎಲೆಕ್ಟ್ರಿಕ್ ಸ್ಕೂಟರ್, ರೂ.73,300 ಬೆಲೆಯನ್ನು ಪಡೆದಿದೆ. 70 ರಿಂದ 75 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 72ವಿ/38ಎಹೆಚ್ ಲೀಡ್ ಆಸಿಡ್ ಬ್ಯಾಟರಿಯನ್ನು ಹೊಂದಿರುವ ಸ್ಕೂಟರ್, ರೂ.77,000 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯುತ್ತದೆ. 100 ಕಿಲೋಮೀಟರ್ ಓಡುತ್ತದೆ.

60ವಿ/30ಎಹೆಚ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿರುವ ಎಲೆಕ್ಟ್ರಿಕ್ ಸ್ಕೂಟರ್, ರೂ.90,500 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 80 ಕಿಲೋಮೀಟರ್ ಕ್ರಮಿಸುತ್ತದೆ. ಆಂಟಿ ಥೆಫ್ಟ್ ಅಲಾರಂ, ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್, ಆಟೋ ರಿಪೇರ್ ಸ್ವಿಚ್, ಯುಎಸ್‌ಬಿ ಚಾರ್ಜರ್ ಹಾಗೂ ಡಿಜಿಟಲ್ ಡಿಸ್ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, August 30, 2024, 12:26 [IST]
English summary
Zelio eeva series electric scooter top things battery pack wise price and range details
Read more on electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+