ಪೆಟ್ರೋಲ್ ಇಲ್ಲದೆ ನಿತ್ಯ 100 ಕಿ.ಮೀ ಓಡುವ ಸ್ಕೂಟರ್... ರಿವರ್ಸ್ ಗೇರ್ ಜೊತೆಗೆ ಹಲವು ವಿಶೇಷತೆಗಳಿವೆ!

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾದ ಜೀಲಿಯೊ ಇಬೈಕ್ಸ್ (ZELIO Ebikes), ಇತ್ತೀಚೆಗೆ ಹೊಸ ಪರಿಷ್ಕೃತ ದ್ವಿಚಕ್ರ ವಾಹನವನ್ನು ಪರಿಚಯಿಸಿದೆ. ಈಗಾಗಲೇ Eeva ಮತ್ತು Eeva Eco ನಂತಹ ಮಾದರಿಗಳನ್ನು ಒಳಗೊಂಡಿರುವ Eeva ಸರಣಿಯ ಭಾಗವಾಗಿ, ಹೊಸ Eeva ZX+ ಅನ್ನು ಅನಾವರಣಗೊಳಿಸಿದೆ. ಈ ಸ್ಕೂಟರ್ ಗರಿಷ್ಠ ವೇಗವು 25 km/h ಇದ್ದು, ದೃಢವಾದ BLDC ಮೋಟಾರ್ (60/72V) ಹೊಂದಿದೆ. 90 ಕೆ.ಜಿ ಯಿಂದ 180 ಕೆ.ಜಿ ಲೋಡಿಂಗ್ ಸಾಮರ್ಥ್ಯದೊಂದಿಗೆ ಒಂದು ಚಾರ್ಜ್‌ನಲ್ಲಿ 100 ಕಿ.ಮೀವರೆಗೆ ಓಡಿಸಬಹುದು.

ಹೊಸದಾಗಿ ಮರುವಿನ್ಯಾಸಗೊಳಿಸಲಾದ Eeva ZX+ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈ ಬಾರಿ ಆಕರ್ಷಕ ಡಿಸೈನ್‌ನೊಂದಿಗೆ ವಿನ್ಯಾಸಗೊಳಿಸಿದೆ. ಇದನ್ನು ವಿಶೇಷವಾಗಿ ವಿದ್ಯಾರ್ಥಿಗಳು, ವೃತ್ತಿಪರರು ಸೇರಿದಂತೆ ಆಧುನಿಕ ನಗರ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್ ರೂ. 67,500 (ಎಕ್ಸ್‌ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ.

zelio-eeva-zx-low-speed-scooter-price-features-details

ವೈಶಿಷ್ಟ್ಯಗಳು: Eeva ZX+ ಸ್ಕೂಟರ್ ಬ್ಲೂ, ಗ್ರೇ, ವೈಟ್ ಮತ್ತು ಬ್ಲಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಪ್ರಮುಖ ವೈಶಿಷ್ಟ್ಯಗಳಾಗಿ ಆಟೋ ರಿಪೇರಿ ಸ್ವಿಚ್, USB ಚಾರ್ಜಿಂಗ್ ಪೋರ್ಟ್, ಆಂಟಿ-ಥೆಫ್ಟ್ ಅಲಾರ್ಮ್, ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್ ಹಾಗೂ ಹೆಚ್ಚಿನ ಅನುಕೂಲಕ್ಕಾಗಿ ಡಿಜಿಟಲ್ ಡಿಸ್ಪ್ಲೇಯಂತಹ ಸುಧಾರಿತ ಫೀಚರ್‌ಗಳನ್ನು ನೀಡಲಾಗಿದೆ.

Eeva ZX+ ನಲ್ಲಿ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದ್ದು, ಇದು ಪರ್ಫಾಮೆನ್ಸ್ ಮತ್ತು ವಿಶ್ವಾಸಾರ್ಹತೆಯ ಪರಿಪೂರ್ಣ ಸಮತೋಲನವನ್ನು ಒದಗಿಸುತ್ತದೆ. ಇದು ಮುಂಭಾಗದ ಡಿಸ್ಕ್ ಬ್ರೇಕ್, ಹಿಂಭಾಗದ ಡ್ರಮ್ ಬ್ರೇಕ್ ಮತ್ತು ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್‌ಗಳನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಂದಿದೆ ಎಂದು ಕಂಪನಿ ಹೇಳಿದೆ.

zelio-eeva-zx-low-speed-scooter-price-features-details

ಬೆಲೆ ವಿವರಗಳು: ಈ ಸ್ಕೂಟರ್ ವಿವಿಧ ಬ್ಯಾಟರಿ ಆಯ್ಕೆಗಳೊಂದಿಗೆ ಬರಲಿದ್ದು, ಬ್ಯಾಟರಿ ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆಗಳನ್ನು ಹೊಂದಿದೆ. 60V/32AH ಲೀಡ್ ಆಸಿಡ್ ಬ್ಯಾಟರಿಯ ಸ್ಕೂಟರ್ ಫುಲ್ ಚಾರ್ಜ್‌ ಆಗಲು 7 ರಿಂದ 8 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇದು 60 ರಿಂದ 70 ಕಿ.ಮೀ ರೇಂಜ್ ನೀಡಲಿದ್ದು, ರೂ. 67,500 (ಎಕ್ಸ್‌ ಶೋರೂಂ) ಬೆಲೆಯನ್ನು ಹೊಂದಿದೆ.

72V/32AH ಲೀಡ್ ಆಸಿಡ್ ಬ್ಯಾಟರಿಯ ಸ್ಕೂಟರ್ ಪೂರ್ಣ ಚಾರ್ಜ್ ಆಗಲು 7 ರಿಂದ 8 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇದು ಫುಲ್‌ ಚಾರ್ಜ್‌ನಲ್ಲಿ 80 ಕಿ.ಮೀ ರೇಂಜ್ ನೀಡಲಿದ್ದು, ರೂ. 70,000 ಬೆಲೆಯಿದೆ. ಹಾಗೆಯೇ 60V/38AH ಲೀಡ್ ಆಸಿಡ್ ಬ್ಯಾಟರಿಯ ಸ್ಕೂಟರ್ ಬೆಲೆಯು ರೂ. 73,300 ಆಗಿದ್ದು, ಇದು ಕೂಡ 80 ಕಿ.ಮೀ ರೇಂಜ್ ಹಾಗೂ 7 ರಿಂದ 8 ಗಂಟೆಗಳ ಚಾರ್ಜಿಂಗ್ ಸಮಯವಿದೆ.

zelio-eeva-zx-low-speed-scooter-price-features-details

72V/38AH ಲೀಡ್ ಆಸಿಡ್ ಬ್ಯಾಟರಿಯ ಸ್ಕೂಟರ್ ಬೆಲೆಯು ರೂ. 77,000 ಇದ್ದು, ಸಂಪೂರ್ಣವಾಗಿ ಚಾರ್ಜ್ ಆಗಲು 9 ರಿಂದ 10 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇದು 100 ಕಿ.ಮೀ ರೇಂಜ್ ನೀಡುವ ಸ್ಕೂಟರ್ ಆಗಿದೆ. ಇನ್ನು 60V/30AH ಲಿಥಿಯಂ ಅಯಾನ್ (Li-Ion) ಬ್ಯಾಟರಿಯೊಂದಿಗೆ 80 ಕಿ.ಮೀ ರೇಂಜ್ ನೀಡುವ ಸ್ಕೂಟರ್ ರೂ. 90,500 ಬೆಲೆಯಿದ್ದು, 4 ಗಂಟೆಗಳ ಚಾರ್ಜಿಂಗ್ ಸಮಯವನ್ನು ಹೊಂದಿದೆ.

ವಾರಂಟಿ: ಇದರ ಪ್ರಭಾವಶಾಲಿ ಕಾರ್ಯಕ್ಷಮತೆಯ ಜೊತೆಗೆ, ಲೀಡ್ ಆಸಿಡ್ ಬ್ಯಾಟರಿ ಹೊಂದಿರುವ Eeva ZX+ ಸ್ಕೂಟರ್ ಒಂದು ವರ್ಷ ಅಥವಾ 10,000 ಕಿ.ಮೀ ವಾರಂಟಿ ನೀಡಲಾಗಿದೆ. ಹಾಗೆಯೇ Li-Ion ಬ್ಯಾಟರಿ ರೂಪಾಂತರಗಳು ವ್ಯಾಪಕವಾದ ವಾರಂಟಿಯೊಂದಿಗೆ ಬರುತ್ತವೆ. ಇದು ಸವಾರರಿಗೆ ಅಸಾಧಾರಣ ವಿಶ್ವಾಸಾರ್ಹತೆ ಒದಗಿಸುತ್ತದೆ ಎಂದು ಜೀಲಿಯೊ ಕಂಪನಿ ಭರವಸೆ ನೀಡಿದೆ.

More from DriveSpark

Article Published On: Thursday, October 3, 2024, 14:16 [IST]
English summary
Zelio eeva zx plus low speed scooter price features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+