ZELIO: 100 Km ರೇಂಜ್.. ಅತಿಕಡಿಮೆ ಬೆಲೆಗೆ ರಿವರ್ಸ್ ಗೇರ್‌ನ ಎಲೆಕ್ಟ್ರಿಕ್ ಸ್ಕೂಟರ್ ಬಂದಿದೆ.. ಪ್ರಮುಖಾಂಶಗಳಿವು!

ಸ್ವದೇಶಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ (Electric Two Wheeler) ಕಂಪನಿ ಝೆಲಿಯೊ ಇಬೈಕ್ಸ್ (Zelio Ebikes), ಭಾರಿ ಜನಪ್ರಿಯತೆ ಗಳಿಸಿದೆ. ದೇಶಾದ್ಯಂತ ನವೀನ-ಶೈಲಿಯ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಗುರುವಾರವಷ್ಟೇ ನೂತನ ಮಿಸ್ಟರಿ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು (ZELIO Mystery High-Speed Electric Scooter) ಬಿಡುಗಡೆಗೊಳಿಸಿದೆ. ಇಲ್ಲಿ ಹೊಸ ಇ-ಸ್ಕೂಟರ್ ವಿಶೇಷತೆಗಳ ಕುರಿತ ಪ್ರಮುಖಾಂಶಗಳನ್ನು ತಿಳಿಸಿಕೊಟ್ಟಿದ್ದೇವೆ.

ಬೆಲೆ, ಬಣ್ಣಗಳು: ನೂತನ ಝೆಲಿಯೊ ಮಿಸ್ಟರಿ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ (ZELIO Mystery High-Speed Electric Scooter), ನಗರ ಸಂಚಾರಕ್ಕೆ ಹೆಚ್ಚು ಸೂಕ್ತವಾಗಿದೆ. ಕಚೇರಿಗೆ ಹೋಗುವವರೂ ಸುಲಭವಾಗಿ ಬಳಕೆ ಮಾಡಬಹುದಾಗಿದ್ದು, ಭಾರಿ ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಿದೆ. ರೂ.81,999 (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಬ್ಲ್ಯಾಕ್, ಸೀ ಗ್ರೀನ್ & ರೆಡ್ ಎಂಬ 3 ಆಕರ್ಷಕ ಬಣ್ಣಗಳ (ಕಲರ್) ಆಯ್ಕೆಯನ್ನು ಹೊಂದಿದೆ.

Zelio Mystery High-Speed Electric Scooter Top Things 81 999 Price Details

ವಿನ್ಯಾಸ: ಹೊಸ ಝೆಲಿಯೊ ಮಿಸ್ಟರಿ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಾಧುನಿಕ ವಿನ್ಯಾಸವನ್ನು (ಡಿಸೈನ್) ಒಳಗೊಂಡಿದೆ. ಹ್ಯಾಂಡಲ್‌ಬಾರ್‌ನಲ್ಲಿ ಎಲ್ಇಡಿ ಹೆಡ್‌ಲೈಟ್, ಬಾಡಿ - ಮೌಂಟೆಡ್ ಡಿಆರ್‌ಎಲ್‌ಗಳು, 12 - ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಹಿಂಭಾಗದ ವಿನ್ಯಾಸವು ಅತ್ಯುತ್ತಮವಾಗಿದ್ದು, ಸಿಂಗಲ್ - ಪೀಸ್ ಗ್ರಾಬ್ ರೈಲ್ ಅನ್ನು ಒಳಗೊಂಡಿದೆ.

ಕಾರ್ಯಕ್ಷಮತೆ: ಈ ಎಲೆಕ್ಟ್ರಿಕ್ ಸ್ಕೂಟರ್, 72ವಿ/29ಎಹೆಚ್ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹಾಗೂ 72ವಿ ಮೋಟಾರ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 100 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 70 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಇದರಲ್ಲಿರುವ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಿಲು 4 ರಿಂದ 5 ಗಂಟೆ ತೆಗೆದುಕೊಳುತ್ತದೆ.

Zelio Mystery High-Speed Electric Scooter Top Things 81 999 Price Details

ವೈಶಿಷ್ಟ್ಯಗಳು: ನೂತನ ಝೆಲಿಯೊ ಮಿಸ್ಟರಿ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ (ZELIO Mystery High-Speed Electric Scooter) ಹತ್ತಾರು ಅತ್ಯುತ್ತಮ ವೈಶಿಷ್ಟ್ಯಗಳನ್ನು (ಫೀಚರ್) ಹೊಂದಿದೆ. ಡಿಜಿಟಲ್ ಡಿಸ್‌ಪ್ಲೇ, ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್ ಆಟೋ ರಿಪೇರಿ ಸ್ವಿಚ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳು ಇದರಲ್ಲಿವೆ.

ಸುರಕ್ಷತಾ ವೈಶಿಷ್ಟ್ಯಗಳು: ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂಭಾಗ (ಫ್ರಂಟ್) - ಹಿಂಭಾಗ (ರೇರ್) ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆಷನ್ ಸೆಟಪ್, ಹ್ಯಾಂಡಲ್‌ಬಾರ್‌ನ ಎರಡು ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳು, ಅಡ್ವಾನ್ಸ್ಡ್ ಕಾಂಬಿ ಬ್ರೇಕ್ ಸಿಸ್ಟಮ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಮತ್ತು ಆಂಟಿ-ಥೆಫ್ಟ್ ಅಲಾರಾಂನ್ನು ಒಳಗೊಂಡಿದೆ.

ಮತ್ತೇನಿದೆ ವಿಶೇಷತೆ: ಹೊಸ ಝೆಲಿಯೊ ಮಿಸ್ಟರಿ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ 120 ಕೆಜಿ ತೂಕವಿದ್ದು, ಬರೋಬ್ಬರಿ 180 ಕೆಜಿ (ರೈಡರ್‌ಗಳು & ಲಗೇಜ್) ಭಾರವನ್ನು ಸಾಗಿಸಬಲ್ಲದು. ಈ ಸ್ಕೂಟರ್‌ಗೆ ಓಲಾ ಎಸ್1ಎಕ್ಸ್, ಟಿವಿಎಸ್ ಐಕ್ಯೂಬ್, ಹೀರೋ ವಿಡಾ, ಎಥರ್ 450, ಬಜಾಜ್ ಚೇತಕ್ ಸೇರಿದಂತೆ ಅನೇಕ ಪ್ರತಿಸ್ಪರ್ಧಿಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, September 29, 2024, 11:00 [IST]
English summary
Zelio mystery high speed electric scooter top things 81999 price details
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+