TATA:100 ಕಿ.ಮೀ ಮೈಲೇಜ್.. 55,999 ರೂಪಾಯಿ, ಅತಿ ಶೀಘ್ರದಲ್ಲೇ ಹೊಸ ಟಾಟಾ ಬೈಕ್ ಬಿಡುಗಡೆ! ಕಂಪನಿ ಹೇಳಿದ್ದೇನು?

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಟ್ರಕ್, ಬಸ್, ಪಿಕ್ಅಪ್ ಟ್ರಕ್ ಹಾಗೂ ಕಾರುಗಳನ್ನು ದಶಕಗಳಿಂದ ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ಕಂಪನಿಯು ದ್ವಿಚಕ್ರ ವಾಹನ (Two Wheeler) ವಿಭಾಗವನ್ನು ಪ್ರವೇಶಿಸಲಿದ್ದು, ಕೈಗೆಟುಕುವ ಬೆಲೆಗೆ '125 ಸಿಸಿ' ಮೋಟಾರ್‌ಸೈಕಲ್‌ವೊಂದನ್ನು ಬಿಡುಗಡೆಗೊಳಿಸಲಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಾಹನ ಪ್ರಿಯರಲ್ಲೂ ಕಾತರ ಹೆಚ್ಚಾಗುವಂತೆ ಮಾಡಿದೆ. ಆದರೀಗ ಎಲ್ಲ ಕುತೂಹಲಗಳಿಗೂ ಕಂಪನಿಯು ತೆರೆ ಎಳೆದಿದೆ.

ಹೊಚ್ಚ ಹೊಸ ಟಾಟಾ ಬೈಕ್ (Tata Bike) ರೂ.55,999 ಎಕ್ಸ್-ಶೋರೂಂ ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. 2026ರ ಆರಂಭದಲ್ಲಿ ಮಾರಾಟಕ್ಕೂ ಬರಲಿದೆ. 124.8 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ. ಸರಿ ಸುಮಾರು 100 ಕಿ.ಮೀವರೆಗೆ ಮೈಲೇಜ್ ನೀಡಲಿದೆ. ಸಿಬಿಎಸ್ (ಕಾಂಬಿ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಜಿಟಲ್ ಬ್ಲೂಟೂತ್ ಸ್ಕ್ರೀನ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಹೇಳಲಾಗಿತ್ತು.

100 Km Mileage Rs 55 999 Tata 125 CC Bike Launch Soon Company Clarification

ಈ ಬಗ್ಗೆ 'ಎಕ್ಸ್' ಬಳಕೆದಾರ ಆಶಿಮ್ ಎಂಬುವವರು 'ಟಾಟಾ ಮೋಟಾರ್ಸ್'ನ್ನು ಟ್ಯಾಗ್ ಮಾಡಿ, ನೂತನ ಮೋಟಾರ್‌ಸೈಕಲ್‌ಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಕೇಳಿದ್ದರು. 'ಇದು ನಿಜವೋ ಅಥವಾ ಸುಳ್ಳೋ? ನಾನು ಬೈಕ್ ಖರೀದಿ ಪ್ಲ್ಯಾನ್ ಮಾಡಿದ್ದೇನೆ. ಈ ಸುದ್ದಿ ಸತ್ಯವಾಗಿದ್ದರೆ ಕಾಯಲು ಬಯಸುತ್ತೇನೆ. ದಯವಿಟ್ಟು ಗೊಂದಲಗಳನ್ನು ನಿವಾರಿಸಿ' ಎಂದಿದ್ದರು.

ಇದಕ್ಕೆ 'ಟಾಟಾ ಮೋಟಾರ್ಸ್' ಪ್ರತಿಕ್ರಿಯೆ ನೀಡಿದೆ. 'ನಮ್ಮನ್ನು ಸಂಪರ್ಕಿಸಿದ್ದಕ್ಕಾಗಿ ಧನ್ಯವಾದಗಳು. ಟಾಟಾ ದ್ವಿಚಕ್ರ ವಾಹನ ವಿಭಾಗವನ್ನು ಪ್ರವೇಶಿಸುತ್ತಿಲ್ಲ. ನೀವು ನೋಡಿರುವ ಸುದ್ದಿ ಅಥವಾ ಮಾಹಿತಿ ತಪ್ಪಾಗಿದೆ. ನಿಖರವಾದ ವಿವರಗಳಿಗೆ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಬೇಟಿ ನೀಡಿ' ಎಂಬ ಸಲಹೆ ನೀಡಿದೆ.

100 Km Mileage Rs 55 999 Tata 125 CC Bike Launch Soon Company Clarification

ಈ ಹಿಂದೆಯೂ ನೂತನ ಟಾಟಾ ಎಲೆಕ್ಟ್ರಿಕ್ ಸ್ಕೂಟರ್ (Tata Electric Scooter) ಮಾರಾಟಕ್ಕೆ ಬರಲಿದೆ ಎಂಬ ನಕಲಿ ಸುದ್ದಿಯೊಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆಗ, ನೂತನ ಇ-ಸ್ಕೂಟರ್ 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಪಡೆದುಕೊಂಡಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 200 ಕಿ.ಮೀವರೆಗೆ ರೇಂಜ್ (ಮೈಲೇಜ್) ಕೊಡಲಿದೆ. ರೂ.1 ಲಕ್ಷದಿಂದ ರೂ.1.2 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಾಗಲಿದೆ ಎನ್ನಲಾಗಿತ್ತು.

ಹೊಸ ಕಾರು ಬಿಡುಗಡೆಗೊಳಿಸಲು ಟಾಟಾ ಮೋಟಾರ್ಸ್‌ ಸಿದ್ಧತೆ:

ಇದೇ ನವೆಂಬರ್ 25 ರಂದು ಹೊಸ 'ಟಾಟಾ ಸಿಯೆರಾ' ಎಸ್‌ಯುವಿಯು ಅದ್ದೂರಿಯಾಗಿ ಮಾರಾಟಕ್ಕೆ ಬರಲಿದೆ. ರೂ.10 ಲಕ್ಷದಿಂದ ರೂ.25 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದಿರುವ ನೀರಿಕ್ಷೆಯಿದೆ. ಈ ಕಾರು ಐಸಿಇ (ಪೆಟ್ರೋಲ್/ಡೀಸೆಲ್), ಹಾಗೂ ಎಲೆಕ್ಟ್ರಿಕ್ ಚಾಲಿತ ಪವರ್‌ಟ್ರೇನ್ ಆಯ್ಕೆಯಲ್ಲಿಯೂ ಪರಿಚಯಗೊಳ್ಳಲಿದೆ.

ನೂತನ 'ಸಿಯೆರಾ' ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ತುಂಬಾ ಚೆನ್ನಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಫ್ಲಶ್ - ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಪಡೆದಿದೆ. ಜೊತೆಗೆ ಆಕರ್ಷಕ ಬಣ್ಣಗಳೊಂದಿಗೂ ದೊರೆಯುವ ನಿರೀಕ್ಷೆಯಿದೆ.

ಈ ಕಾರು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಓಡಾಟ ನಡೆಸಬಹುದು. ವಿಶೇಷವಾಗಿ ಟ್ರಿಪಲ್ ಸ್ಕ್ರೀನ್ ಸೆಟಪ್ (ಡಿಜಿಟಲ್ ಡ್ರೈವರ್ ಡಿಸ್​ಪ್ಲೇ, ಟಚ್‌ಸ್ಕ್ರೀನ್ ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಪ್ಯಾಸೆಂಜರ್-ಸೈಡ್ ಡಿಸ್​ಪ್ಲೇ) ಸ್ಟೀರಿಂಗ್ ವೀಲ್‌ನಲ್ಲಿ ಟಾಟಾ ಲೋಗೋ, ಟಚ್-ಬೇಸ್ಡ್ ಕ್ಲೇಮೇಟ್ ಕಂಟ್ರೋಲ್ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ.

Article Published On: Sunday, November 9, 2025, 20:16 [IST]
English summary
100 km mileage rs 55999 price tata 125 cc bike launch soon company clarification
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+