Bajaj: ಮೊನ್ನೆಯಷ್ಟೆ ಬಿಡುಗಡೆ: 2025ರ ಬಜಾಜ್ ಪಲ್ಸರ್ NS160 ಬೈಕ್ ವಿಶೇಷತೆಗಳು!

ವಿಭಿನ್ನ ಭೂಪ್ರದೇಶಗಳಿಗೆ ಅನುಗುಣವಾಗಿ ಉತ್ತಮ ಪರ್ಫಾಮೆನ್ಸ್ ನಿರೀಕ್ಷಿಸಬಹುದಾದ ರೈಡಿಂಗ್ ಮೋಡ್‌ಗಳೊಂದಿಗೆ ಬಜಾಜ್ ಎನ್‌ಎಸ್ 160 (2025 Bajaj Pulsar NS160) ಬೈಕ್ ಅನ್ನು ಕಂಪನಿ ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಬಜಾಜ್‌ನ ಜನಪ್ರಿಯ ಪಲ್ಸರ್ 2025ರ ಎನ್‌ಎಸ್ 160 (2025 Bajaj Pulsar NS160) ಹೊಸ ಪ್ರಮುಖ ಫೀಚರ್ಸ್ ಆಗಿ ರೋಡ್, ರೈನ್ ಮತ್ತು ಆಫ್-ರೋಡ್ ರೈಡಿಂಗ್ ಮೋಡ್‌ಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಸದ್ಯ ಬಜಾಜ್ ಪಲ್ಸರ್ ಎನ್‌ಎಸ್ 160 ಬೈಕಿನ ಬೆಲೆಯು ಭಾರತದ ಎಕ್ಸ್‌ಶೋರೂಂ ಪ್ರಕಾರ ರೂ.1.49 ಲಕ್ಷಗಳಾಗಿದೆ.

ಬಜಾಜ್ ಪಲ್ಸರ್ ಎನ್‌ಎಸ್ 160 ಬೈಕ್ 160 ಸಿಸಿ ಸ್ಟ್ರೀಟ್ ಬೈಕ್ ವಿಭಾಗದಲ್ಲಿ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಮತ್ತು ಹೀರೋ ಎಕ್ಸ್‌ಟ್ರೀಮ್ 160ಆರ್ ಬೈಕುಗಳಿಗೆ ಪೈಪೋಟಿ ನೀಡಲಿದೆ. ಈ ಬೈಕ್ 160.3 ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಸಹಾಯದಿಂದ 17.2 ಬಿಹೆಚ್ ಪವರ್ ಮತ್ತು 14.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2025-bajaj-pulsar-ns160-top-things-you-should-know

ಈ ಬೈಕ್ ಮುಂಭಾಗ ಹಾಗೂ ಹಿಂಭಾಗದಲ್ಲಿ 17 ಇಂಚಿನ ಟ್ಯೂಬ್ ಲೆಸ್ ಟೈರ್‌ಗಳನ್ನು ಹೊಂದಿದೆ. ಬ್ರೇಕಿಂಗ್ ಸೆಟಪ್ ಮುಂಭಾಗದಲ್ಲಿ 300 ಎಂಎಂ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್‌ಗಳನ್ನು ಹೊಂದಿದೆ, ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದೆ. ಈ ಮೂಲಕ ವಿಭಿನ್ನ ಭೂಪ್ರದೇಶಗಳಿಗೆ ಅನುಗುಣವಾಗಿ ಒಟ್ಟಾರೆ ಉತ್ತಮ ಪರ್ಫಾಮೆನ್ಸ್ ನಿರೀಕ್ಷಿಸಬಹುದು. ಜೊತೆಗೆ ವಿಭಿನ್ನ ಭೂಪ್ರದೇಶಗಳಿಗೆ ಸರಿಹೊಂದುವಂತೆ ಎಬಿಎಸ್ ಅನ್ನು ಕೂಡ ಸರಿಹೊಂದಿಸಲಾಗಿದೆ ಎಂದು ವರದಿಯಾಗಿದೆ.

ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಬ್ಲೂಟೂತ್ ಸಂಪರ್ಕವನ್ನು ಹೊಸ ನೀಡಲಾಗಿದೆ. ಜೊತೆಗೆ ಯುಎಸ್‌ಬಿ ಮೊಬೈಲ್ ಚಾರ್ಜಿಂಗ್ ಪೋರ್ಟ್ ಕೂಡ ಇದೆ. ಬಜಾಜ್ ಪಲ್ಸರ್ ಎನ್‌ಎಸ್ 160 ಬೈಕಿನಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಹೊಂದಿದ್ದು, ಇದರಲ್ಲಿ ಆರ್‌ಪಿಎಂ ಮೀಟರ್, ಫ್ಯೂಯಲ್ ಗೇಜ್, ಓಡೋಮೀಟರ್ ಮತ್ತು ಟ್ರಿಪ್ ಮೀಟರ್ ಅನ್ನು ಪ್ರದರ್ಶಿಸುತ್ತದೆ.

2025-bajaj-pulsar-ns160-top-things-you-should-know

ಈ ಬೈಕ್ ಸ್ಪೋರ್ಟಿ ರಸ್ತೆ ಉಪಸ್ಥಿತಿಯನ್ನು ಹೊಂದಿದ್ದು, ಕಾಕ್ಟೈಲ್ ವೈನ್ ರೆಡ್, ಎಬೊನಿ ಬ್ಲ್ಯಾಕ್, ಪರ್ಲ್ ಮೆಟಾಲಿಕ್ ವೈಟ್ ಮತ್ತು ಪ್ಯೂಟರ್ ಗ್ರೇ ಎಂಬ ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಆಕರ್ಷಕ ಹೆಡ್ ಲ್ಯಾಂಪ್ ವಿನ್ಯಾಸ, ಆಲ್-ಎಲ್ಇಡಿ ಲೈಟಿಂಗ್, ಯುಎಸ್‌ಡಿ ಫ್ರಂಟ್ ಫೋರ್ಕ್ಸ್, ಗ್ರಿಮೆಕಾ ಬ್ರೇಕ್ ಕ್ಯಾಲಿಪರ್ಸ್, ಮಸ್ಕುಲರ್ ಇಂಧನ ಟ್ಯಾಂಕ್, ಸ್ಪೋರ್ಟಿ ಗ್ರಾಫಿಕ್ಸ್, ಸ್ಪ್ಲಿಟ್ ಸೀಟ್‌ಗಳಂತಹ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.

ಆಫ್-ರೋಡ್ ಮೋಡ್ ಹಿಂಭಾಗದ ಚಕ್ರದಲ್ಲಿ ಎಬಿಎಸ್ ಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಇದು ಕೊಳಕು ಮತ್ತು ಜಲ್ಲಿಕಲ್ಲುಗಳಂತಹ ಸಡಿಲ ಮೇಲ್ಮೈಗಳಲ್ಲಿ ಉತ್ತಮ ನಿಯಂತ್ರಣಕ್ಕೆ ಅನುವು ಮಾಡಿಕೊಡುತ್ತದೆ. ಒದ್ದೆಯಾದ ರಸ್ತೆಗಳಲ್ಲಿ ಜಾರುವುದನ್ನು ತಡೆಯಲು ರೈನ್ ಮೋಡ್ ಎಬಿಎಸ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಇವು ಅನಗತ್ಯವೆಂದು ತೋರಬಹುದಾದರು ಸವಾರರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

2025-bajaj-pulsar-ns160-top-things-you-should-know

ರೈಡಿಂಗ್ ಮೋಡ್‌ಗಳನ್ನು ಹೊರತುಪಡಿಸಿ, 2025ರ ಬಜಾಜ್ ಪಲ್ಸರ್ ಎನ್‌ಎಸ್ 160 ಬೈಕಿನಲ್ಲಿ ಯಾವುದೇ ಪ್ರಮುಖ ನವೀಕರಣಗಳಿಲ್ಲ. ಬಜಾಜ್ ಪಲ್ಸರ್ ಎನ್‌ಎಸ್ 160 ಈಗಾಗಲೇ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಪೊಸಿಷನ್ ಇಂಡಿಕೇಟರ್, ಸರಾಸರಿ ಇಂಧನ ಮಿತವ್ಯಯ ಮತ್ತು ನೈಜ-ಸಮಯದ ಇಂಧನ ಮಿತವ್ಯಯ (Average fuel economy and real-time fuel economy) ದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, March 27, 2025, 11:02 [IST]
English summary
2025 bajaj pulsar ns160 top things you should know
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+