ಯುವಕರಿಗೆ ಖುಷಿಸುದ್ದಿ.. ಹೊಸ ಫೀಚರ್‌ನೊಂದಿಗೆ 2025ರ Hero Karizma XMR 210 ಬೈಕ್ ಬಿಡುಗಡೆ, ಬೆಲೆ ಎಷ್ಟು?
ಯುವಕರಿಗೆ ಭರ್ಜರಿ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಇಂದು 2025ರ ಹೊಚ್ಚ ಹೊಸ ಹೀರೋ ಕರಿಜ್ಮಾ ಎಕ್ಸ್ಎಂಆರ್ 210 (Hero Karizma XMR 210) ಬೈಕ್‌ನ್ನು ಬಿಡುಗಡೆಗೊಳಿಸಲಾಗಿದೆ. ಈ ಮೋಟಾರ್‌ಸೈಕಲ್ ಒಂದಷ್ಟು ನವೀಕರಣಗಳನ್ನು ಪಡೆದುಕೊಂಡಿದ್ದು, ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಮಾರಾಟಕ್ಕೆ ಬಂದಿದ್ದು, ಬೆಲೆಯೂ ಕೂಡ ಕೈಗೆಟುಕುವಂತಿದೆ. ಬನ್ನಿ.. ನೂತನ 'ಕರಿಜ್ಮಾ ಎಕ್ಸ್ಎಂಆರ್' ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.
2025ರ ಹೀರೋ ಕರಿಜ್ಮಾ ಎಕ್ಸ್ಎಂಆರ್ 210 ಮೋಟಾರ್‌ಸೈಕಲ್‌ನ್ನು ಹೊಸದಾದ ಕಾಂಬ್ಯಾಟ್ (Combat) ಎಂಬ ರೂಪಾಂತರದೊಂದಿಗೆ ಪರಿಚಯಿಸಲಾಗಿದೆ. ಇದರೊಂದಿಗೆ ಬೇಸ್ (Base) ಹಾಗೂ ಟಾಪ್ (Top) ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಈ ಬೈಕ್ ರೂ.1.81 ಲಕ್ಷದಿಂದ ರೂ.2.01 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.

ಹೀರೋ ಕರಿಜ್ಮಾ ಎಕ್ಸ್ಎಂಆರ್ 210 ಮೋಟಾರ್‌ಸೈಕಲ್‌ನ ವಿನ್ಯಾಸದಲ್ಲೂ ಅಷ್ಟಾಗಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಅತ್ಯುತ್ತಮವಾದ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಡಿಆರ್‌ಎಲ್, ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್, ಸ್ಪ್ಲಿಟ್ ಸೀಟ್ ಸೆಟಪ್‌ನ್ನು ಹೊಂದಿದೆ. ನವೀನ ಕಾಂಬ್ಯಾಟ್ ರೂಪಾಂತರ ಸಿಲ್ವರ್ ಗ್ರಾಫಿಕ್ಸ್‌ನೊಂದಿಗೆ ಕಾಂಬ್ಯಾಟ್ ಗ್ರೇ ಬಣ್ಣದೊಂದಿಗೆ ದೊರೆಯುತ್ತದೆ.
ನೂತನ ಕರಿಜ್ಮಾ ಎಕ್ಸ್ಎಂಆರ್ 210 ಬೈಕ್‌ನ ಬೇಸ್ & ಟಾಪ್ ರೂಪಾಂತರಗಳು ಐಕಾನಿಕ್ ಯೆಲ್ಲೋ, ಟರ್ಬೊ ರೆಡ್ ಹಾಗೂ ಮ್ಯಾಟ್ ಫ್ಯಾಂಟಮ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಇದರೊಂದಿಗೆ ಈ ಮೋಟಾರ್‌ಸೈಕಲ್ ರಸ್ತೆಯಲ್ಲಿ ಚಲಿಸುವಾಗ ನೋಡುಗರನ್ನು ತನ್ನತ್ತ ಸೆಳೆದು ಬಿಡುತ್ತದೆ.

ಹೊಸ ಹೀರೋ ಕರಿಜ್ಮಾ ಎಕ್ಸ್ಎಂಆರ್ 210 ಬೈಕ್ ಹೆಚ್ಚು ಶಕ್ತಿಯುತವಾದ 210 ಸಿಸಿ, ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 9,250 ಆರ್‌ಪಿಎಂನಲ್ಲಿ 25.15 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 7,250 ಆರ್‌ಪಿಎಂನಲ್ಲಿ 20.4 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.
ಈ ಹೀರೋ ಕರಿಜ್ಮಾ ಎಕ್ಸ್ಎಂಆರ್ 210 ಮೋಟಾರ್‌ಸೈಕಲ್ ಹಲವು ಆಕರ್ಷಕ ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ. ಬಹುಮುಖ್ಯವಾಗಿ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ 4.2-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್‌ನ್ನು ಪಡೆದಿದೆ. ಇದು ಕಾಲ್ - ಎಂಎಂಎಸ್ ಅಲರ್ಟ್ ಮತ್ತು ಮ್ಯೂಸಿಕ್ ಕಂಟ್ರೋಲ್ ಸೇರಿದಂತೆ ಇನ್ನಿತರೇ ಮಾಹಿತಿಯನ್ನು ಒದಗಿಸುತ್ತದೆ.

ನೂತನ ಬೈಕ್ ಮುಂಭಾಗ (ಫ್ರಂಟ್) ಅಪ್-ಸೈಡ್ ಡೌನ್ ಫೋರ್ಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. ಡುಯಲ್ - ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದ್ದು, ರಸ್ತೆಯ ಮೇಲೆ ಬಿಗಿಯಾಗ ಹಿಡಿತವನ್ನು ಒದಗಿಸಲು 17-ಇಂಚಿನ ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ.
ಒಟ್ಟ್ಟಾರೆಯಾಗಿ, ಹೊಸ 'ಹೀರೋ ಕರಿಜ್ಮಾ ಎಕ್ಸ್ಎಂಆರ್ 210' ಮೋಟಾರ್‌ಸೈಕಲ್ ಬಿಡುಗಡೆಯಾಗಿವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡು ಮಾರಾಟಕ್ಕೆ ಬಂದಿದೆ. ಈ ಹಿನ್ನೆಲೆ, ಮುಂಬರುವ ದಿನಗಳಲ್ಲಿ ದೊಡ್ಡ ಸಂಖ್ಯೆಯ ಯುವ ಖರೀದಿದಾರರ ಆಯ್ಕೆಯ ದ್ವಿಚಕ್ರ ವಾಹನವಾಗುವುದರಲ್ಲಿ ಎರಡು ಮಾತಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








