ನಿನ್ನೆಯಷ್ಟೆ ಬಿಡುಗಡೆಯಾದ 2025ರ ಕವಾಸಕಿ ವರ್ಸಿಸ್ 650 ಬೈಕ್ ವಿಶೇಷತೆಗಳು

ಕವಾಸಕಿ ಕಂಪನಿಯು ತನ್ನ ಅಡ್ವೆಂಚರ್ ಟೂರರ್ ಪ್ರತಿರೂಪವಾದ ವರ್ಸಿಸ್ 650 ಅನ್ನು 2025ರ ಆವೃತ್ತಿಗೆ ಪರಿಷ್ಕೃತ ಬೆಲೆ ಮತ್ತು ಸ್ವಲ್ಪ ಪರಿಷ್ಕೃತ ಬಣ್ಣದೊಂದಿಗೆ ನವೀಕರಿಸಿ ಬಿಡುಗಡೆ ಮಾಡಿದೆ. ಕವಾಸಕಿ ಕಂಪನಿಯು ಇತ್ತೀಚೆಗೆ ನಿಂಜಾ 500, ಎಲಿಮಿನೇಟರ್ 500 ಮತ್ತು ನಿಂಜಾ 650 ಬೈಕುಗಳನ್ನು ನವೀಕರಿಸಿದೆ. ಇದೀಗ ವರ್ಸಿಸ್ 650 ಅನ್ನು ನವೀಕರಿಸಲಾಗಿದೆ, ಇದು ಏಪ್ರಿಲ್ 1, 2025 ರಿಂದ ಜಾರಿಗೆ ಬಂದ ಭಾರತೀಯ ಸರ್ಕಾರ ನಿಗದಿಪಡಿಸಿದ ಇತ್ತೀಚಿನ ಬಿಎಸ್ 6 ಪಿ 2 ಒಬಿಡಿ 2 ಬಿ ಎಮಿಷನ್ ಮಾನದಂಡಕ್ಕೆ ಹೊಂದಿಕೆಯಾಗುತ್ತದೆ ಎಂದು ಕಂಪನಿ ತಿಳಿಸಿದೆ.

ವಿನ್ಯಾಸ ಹಾಗೆಯೇ ಉಳಿಸಿಕೊಂಡಿದ್ದು, ಮುಂಭಾಗದಲ್ಲಿ ಟ್ವಿನ್ ಎಲ್ಇಡಿ ಹೆಡ್ ಲೈಟ್ ಗಳೊಂದಿಗೆ ಸೆಮಿ-ಫೇರಿಂಗ್, ಎತ್ತರದ ವಿಂಡ್ ಸ್ಕ್ರೀನ್ ನೀಡಲಾಗಿದ್ದು ಇದು ಗಾಳಿಯ ರಕ್ಷಣೆಗೆ ಸಹಾಯ ಮಾಡುತ್ತದೆ. ಈ ಅಡ್ವೆಂಚರ್ ಟೂರರ್ ಯುಎಸ್‌ಡಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಗಳನ್ನು ಹೊಂದಿದೆ, ಕಂಪ್ರೆಷನ್ ಮತ್ತು ರೀಬೌಂಡ್ ಗೆ ಸಂಪೂರ್ಣವಾಗಿ ಸರಿಹೊಂದಿಸಬಹುದು.

2025-kawasaki-versys-650-bike-specifications

ಹಿಂಭಾಗದ ಪ್ರಿ - ಲೋಡ್ ಅಡ್ಜಸ್ಟ್ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಮತ್ತು ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಸೆಟಪ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಅನ್ನು ಹೊಂದಿದೆ. ಸೀಟ್ ಸ್ಪ್ಲಿಟ್ ಟೈಪ್ ಆಗಿ ನೀಡಲಾಗಿದ್ದು ಸವಾರರು ಮತ್ತು ಹಿಂಬದಿ ಸವಾರರಿಗೆ ಅನುಕೂಲಕರವಾಗಿದೆ.

ಹಳೆಯ 2024ರ ಆವೃತ್ತಿಯನ್ನು ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಮ್ಯಾಟ್ ಡಾರ್ಕ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ನೀಡಲಾಗಿತ್ತು. ಇದೀಗ ಹೊಸದನ್ನು ಹೊಸ ಬಣ್ಣದಲ್ಲಿ ನೀಡಲಾಗಿದ್ದು, 2025ರ ವರ್ಸಿಸ್ 650 ಬೈಕ್ ಅನ್ನು ಮೆಟಾಲಿಕ್ ಮ್ಯಾಟ್ ಗ್ರ್ಯಾಫೀನ್ ಸ್ಟೀಲ್ ಗ್ರೇ ಬಣ್ಣದಲ್ಲಿ ಮಾರಾಟ ಮಾಡಲಾಗುವುದು. ಹೊಸ ಬಣ್ಣವು ಹೆಚ್ಚಾಗಿ ಬೂದು ಮತ್ತು ಕಪ್ಪು ಬಣ್ಣದ್ದಾಗಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಅಲ್ಲಲ್ಲಿ ಹಸಿರು ಬಣ್ಣವನ್ನು ನೀಡಲಾಗಿದೆ.

2025-kawasaki-versys-650-bike-specifications

ಉಳಿದಂತೆ ವಾಹನದಲ್ಲಿ ಪ್ರಮುಖ ಬದಲಾವಣೆಯು ಎಂಜಿನ್‌ ಆಗಿದೆ. ಈ ಬೈಕ್ 66 ಬಿಹೆಚ್ ಪಿ ಪವರ್ ಮತ್ತು 61 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಲಿಕ್ವಿಡ್ ಕೂಲಿಂಗ್ ಸೆಟಪ್ ಹೊಂದಿರುವ ಎರಡು ಸಮಾನಾಂತರ ಸಿಲಿಂಡರ್‌ಗಳನ್ನು ಹೊಂದಿರುವ 649 ಸಿಸಿ ಎಂಜಿನ್ ಹೊಂದಿದೆ. ಒಟ್ಟಾರೆ ಹೊಸ ಬಿಎಸ್ 6 ಪಿ 2 ಒಬಿಡಿ 2 ಬಿ ಎಮಿಷನ್ ಸ್ಟ್ಯಾಂಡರ್ಡ್ ಕಾಂಪ್ಲೈಂಟ್ ಪವರ್ ಟ್ರೇನ್ ರೂಪದಲ್ಲಿ ಬರುತ್ತದೆ.

ಹೊಸ 2025ರ ನಿಂಜಾ 500 ಅನ್ನು ನವೀಕರಿಸಿ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ಪವರ್‌ಫುಲ್‌ ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆ ಮಾಡಿರುವುದು ವಿಶೇಷ. ಭಾರತದ ಇತ್ತೀಚಿನ ಮತ್ತು ಹೆಚ್ಚು ಕಠಿಣವಾದ ಬಿಎಸ್ 6 ಪಿ 2 ಒಬಿಡಿ 2 ಬಿ ಎಮಿಷನ್ ಮಾನದಂಡಗಳನ್ನು ಪೂರೈಸಲು ವಿಶ್ವದ ಪವರ್‌ಫುಲ್‌ ಮೋಟಾರ್‌ಸೈಕಲ್ ತಯಾರಕ ಕಂಪನಿ ಭಾರತಕ್ಕಾಗಿ ನೀಡಿದೆ.

2025-kawasaki-versys-650-bike-specifications

ಸ್ಟಾಕ್‌ನಲ್ಲಿರುವ ಈ ಹಳೆಯ ವರ್ಸಿಸ್ 650 ಬೈಕಿನ ಮೇಲೆ ರೂ.20,000 ಗಳವರೆಗೆ ಆಕರ್ಷಕ ರಿಯಾಯಿತಿಯನ್ನು ನೀಡಲಾಗಿದೆ. 2024ರ ಆವೃತ್ತಿಯನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ, ಮಾರಾಟವಾಗದ ಹಳೆಯ ಆವೃತ್ತಿಯು ಕೆಲವು ಡೀಲರ್‌ರ್ಶಿಪ್‌ಗಳಲ್ಲಿ ಸ್ಟಾಕ್‌ನಲ್ಲಿರಬಹುದು. ಉಳಿದಂತೆ ಹೊಸ 2025ರ ಕವಾಸಕಿ ವರ್ಸಿಸ್ 650 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.7.93 ಲಕ್ಷಗಳಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 3, 2025, 7:35 [IST]
English summary
2025 kawasaki versys 650 bike specifications
Read more on kawasaki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+