ಡೀಲರ್‌ಶಿಪ್‌ಗೆ ಬಂದೇ ಬಿಡ್ತು ಹೊಸ 'Bajaj Pulsar' ಬೈಕ್.. ಶೀಘ್ರ ಬಿಡುಗಡೆ.. ಬೆಲೆ ಇಷ್ಟೇನಾ?
ಬಜಾಜ್ ಪಲ್ಸರ್ (Bajaj Pulsar) ಜನಪ್ರಿಯ ಮೋಟಾರ್‌ಸೈಕಲ್ ಆಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಹಲವು ವಿಧದ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಈ ಹಿನ್ನೆಲೆ ಭಾರೀ ಸಂಖ್ಯೆಯಲ್ಲಿ ಯುವ ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಸದ್ಯ, ಬಜಾಜ್ ಕಂಪನಿಯು ಇದೇ ಬೈಕ್‌ನ 'ಎನ್ಎಸ್400ಜಡ್' ಮಾಡೆಲ್‌ನ್ನು ಹೊಸ ರೂಪದಲ್ಲಿ ಮಾರಾಟಕ್ಕೆ ತರಲು ಭರ್ಜರಿಯಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.
ಎಲ್ಲವು ಅಂದುಕೊಂಡಂತೆ ನಡೆದರೆ, ಒಂದಷ್ಟು ನವೀಕರಣಗಳಿಗೆ ಒಳಗಾಗಿರುವ 2025ರ ಬಜಾಜ್ ಪಲ್ಸರ್ ಎನ್ಎಸ್400ಜಡ್ (Bajaj Pulsar NS400Z) ಮೋಟಾರ್‌ಸೈಕಲ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈಗಾಗಲೇ, ನೂತನ ಬೈಕ್‌ನ್ನು ಕಂಪನಿಯು ವಿವಿಧ ಡೀಲರ್‌ಶಿಪ್‌ಗಳಿಗೆ ತಲುಪಿಸುವ ಕಾರ್ಯಕ್ಕೂ ಚಾಲನೆ ನೀಡಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಈ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹೊಸ 'ಬಜಾಜ್ ಪಲ್ಸರ್ ಎನ್ಎಸ್400ಜಡ್' ಮೋಟಾರ್‌ಸೈಕಲ್‌ನ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆಗಳನ್ನು ಗುರುತಿಸಬಹುದು. ವಿಶೇಷವಾಗಿ ನೂತನ ಬೈಕ್‌ನ ಹಿಂಭಾಗದಲ್ಲಿ ಅಪೊಲೊ ಆಲ್ಫಾ ಹೆಚ್1 ರೇಡಿಯಲ್ ಟೈರ್‌ನ್ನು ಬಳಕೆ ಮಾಡಲಾಗಿದೆ. ಇದು ಸವಾರರಿಗೆ ರಸ್ತೆಯ ಮೇಲೆ ಬಿಗಿಯಾದ ಹಿಡಿತವನ್ನು ಒದಗಿಸಲು ನೆರವಾಗಲಿದೆ.
ಹೊಸ ಬಜಾಜ್ ಪಲ್ಸರ್ ಎನ್ಎಸ್400ಜಡ್ ಮೋಟಾರ್‌ಸೈಕಲ್‌ನ ಪವರ್‌ಟ್ರೇನ್‌ನ್ನು ಒಬಿಡಿ-2ಬಿ (OBD-2B) ಮಾನದಂಡಗಳ ಪ್ರಕಾರ ನವೀಕರಣಗೊಳಿಸಿರಬಹುದು ಎನ್ನಲಾಗಿದೆ. ಇದು ಇಂಗಾಲದ ಹೊರಸುಸುವಿಕೆ ಸಂದರ್ಭದಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷಗಳು ಕಂಡುಬಂದರೆ, ತಕ್ಷಣ ಸವಾರರನ್ನು ಎಚ್ಚರಿಸುತ್ತದೆ. ಅದರ ಹೊರತಾಗಿ ಕಾರ್ಯಕ್ಷಮತೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಹೇಳಲಾಗಿದೆ.

ನೂತನ ಬೈಕ್ ಹೆಚ್ಚು ಶಕ್ತಿಯುತವಾದ 373 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ. 40 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 35 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕಲಿದೆ ಎಂದು ಹೇಳಲಾಗಿದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿರಲಿದ್ದು, 34 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡಬಹುದು ಎನ್ನಲಾಗಿದೆ.
ಈ ಮೋಟಾರ್‌ಸೈಕಲ್‌ನ ವೈಶಿಷ್ಟ್ಯಗಳು ಕೂಡ ಬಹುತೇಕ ಹಳೆಯ ಮಾಡೆಲ್‌ನಂತೆಯೇ ಇರಲಿದೆ. ಎಲ್‌ಸಿಡಿ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಂತಹ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಜೊತೆಗೆ ಸ್ಪೋರ್ಟ್, ರೈನ್ ಮತ್ತು ಆಫ್-ರೋಡ್ ಎಂಬ ರೈಡಿಂಗ್ ಮೋಡ್‌ಗಳನ್ನು ಹೊಂದಿರುವ ಸಾಧ್ಯತೆಯೂ ಇದೆ.
ಹೊಸ ಬಜಾಜ್ ಪಲ್ಸರ್ ಎನ್ಎಸ್400ಜಡ್ ಬೈಕ್ ಸಹ ಈಗಿರುವ ಮಾಡೆಲ್ ಹೊಂದಿರುವಂತೆ, ಮುಂಭಾಗ (ಫ್ರಂಟ್) ಇನ್ವರ್ಟೆಡ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಗ್ಯಾಸ್-ಚಾರ್ಜ್ಡ್ ಮಾನೋಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಸವಾರರ ರಕ್ಷಣೆಗಾಗಿ ಡುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿರಬಹುದು ಎನ್ನಲಾಗಿದೆ.
ನೂತನ ಬಜಾಜ್ ಪಲ್ಸರ್ ಎನ್ಎಸ್400ಜಡ್ ಮೋಟಾರ್‌ಸೈಕಲ್ ಕೈಗೆಟುಕುವ ಬೆಲೆಯಲ್ಲಿಯೇ ಮಾರಾಟಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ. ಆದರೂ ಪ್ರಸ್ತುತವಿರುವ ಮಾಡೆಲ್‌ಗಿಂತ ರೂ.7,000 ರಿಂದ ರೂ.8,000 ದುಬಾರಿಯಾಗಿರಬಹುದು ಹೇಳಲಾಗಿದೆ. ಈಗ ಇದೇ ಬೈಕ್ ರೂ.1.81 ಲಕ್ಷ ಎಕ್ಸ್-ಶೋರೂಂ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications