ನಿನ್ನೆಯಷ್ಟೇ ಬಿಡುಗಡೆ.. 60 ಸಾವಿರದ ಹೀರೋ ಎಚ್ಎಫ್ 100 ಬೈಕ್ ಖರೀದಿಸಬೇಕೇ.. ಇಲ್ಲಿವೆ ಪ್ರಮುಖಾಂಶಗಳು!

ಹೀರೋ ಎಚ್ಎಫ್ 100 (Hero HF 100) ಜನಪ್ರಿಯ ಪ್ರಯಾಣಿಕ ಬೈಕ್ ಆಗಿದೆ. ಇದು ಸಾಮಾನ್ಯ ವರ್ಗದ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲಿದ್ದು, ದಿನನಿತ್ಯದ ಬಳಕೆಗೆ ಅತ್ಯುತ್ತಮವಾದ ಆಯ್ಕೆಯಾಗಲಿದೆ. ಸೋಮವಾರ ಈ ಮೋಟಾರ್‌ಸೈಕಲ್‌ನ ನವೀಕರಿಸಿದ 2025ರ ಮಾಡೆಲ್‌ನ್ನು ಮಾರಾಟಕ್ಕೆ ತರಲಾಗಿದೆ. ಇದರ ಪವರ್‌ಟ್ರೇನ್‌ನ್ನು ಒಬಿಡಿ-2ಬಿ ಮಾನದಂಡಗಳ ಪ್ರಕಾರ ಮೇಲ್ದರ್ಜೆರಿಸಲಾಗಿದ್ದು, ಇಂಗಾಲದ ಹೊರಸೂಸುವಿಕೆಯ ಸಂದರ್ಭದಲ್ಲಿ ದೋಷಗಳು ಕಂಡುಬಂದರೆ ಸವಾರರನ್ನು ಎಚ್ಚರಿಸುತ್ತದೆ. ನೀವು ಈ ನೂತನ ಬೈಕ್‌ನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಬೆಲೆ ಹಾಗೂ ವಿಶೇಷತೆಗಳ ಕುರಿತ 5 ಪ್ರಮುಖಾಂಶಗಳು ಇಲ್ಲಿವೆ.

ಬೆಲೆ (Price): ಹೊಸ ಹೀರೋ ಎಚ್ಎಫ್ 100 ಮೋಟಾರ್‌ಸೈಕಲ್‌, ಎಲ್ಲ ವರ್ಗದ ಗ್ರಾಹಕರ ಕೈಗೆಟುಕುವಂತಿದ್ದು, ಬಜೆಟ್ ಬೆಲೆಯಲ್ಲಿಯೇ ಸಿಗುತ್ತದೆ. ಇದು ರೂ.60,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಮಾಸಿಕ ರೂ.20,000 ಸಂಬಳ ಪಡೆಯುವರು ಸಹ ಈ ಬೈಕ್‌ನ್ನು ಸುಲಭವಾಗಿ ಖರೀದಿ ಮಾಡಲು ಸಾಧ್ಯವಾಗಲಿದೆ.

2025 New Hero HF 100 Bike Top 5 Things You Should Must Know Details

ವಿನ್ಯಾಸ & ಬಣ್ಣಗಳು (Design & Colors): ಈ ಬೈಕ್ ತುಂಬಾ ಸರಳತೆಯಿಂದ ಕೂಡಿರುವ ವಿನ್ಯಾಸವನ್ನು ಹೊಂದಿದೆ. ಆಕರ್ಷಕವಾಗಿರುವ ಹ್ಯಾಲೊಜೆನ್ ಹೈಡ್‌ಲೈಟ್ ಹಾಗೂ ಟೇಲ್ ಲೈಟ್‌ನ್ನು ಒಳಗೊಂಡಿದೆ. ಇದರೊಟ್ಟಿಗೆ ರೆಡ್-ಬ್ಲ್ಯಾಕ್ & ಬ್ಲ್ಯೂ-ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಗ್ರಾಹಕರ ಖರೀದಿಗೆ ದೊರೆಯುತ್ತವೆ.

ಕಾರ್ಯಕ್ಷಮತೆ (Performance): ನೂತನ ಹೀರೋ ಎಚ್ಎಫ್ 100 ಮೋಟಾರ್‌ಸೈಕಲ್‌, 97.2 ಸಿಸಿ ಒಬಿಡಿ-2ಬಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 8.02 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಸರಾಸರಿ 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ.

2025 New Hero HF 100 Bike Top 5 Things You Should Must Know Details

ವೈಶಿಷ್ಟ್ಯಗಳು (Features): ಹೊಸ ಹೀರೋ ಎಚ್ಎಫ್ 100 ಬೈಕ್ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕಿಕ್ ಸ್ಟಾರ್ಟರ್ ಹಾಗೂ ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಇದು 110 ಕೆಜಿ ತೂಕವಿದ್ದು, ಹೆಚ್ಚಿನ ದೂರ ಕ್ರಮಿಸಲು ಸಾಧ್ಯವಾಗುವಂತೆ 9.1-ಲೀ.ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ಈ ಮೋಟಾರ್‌ಸೈಕಲ್‌ ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂದೆ (ರೇರ್) 2-ಸ್ಟೆಪ್ ಅಡ್ಜಸ್ಟಬಲ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ ಆಯ್ಕೆಯನ್ನು ಪಡೆದಿದೆ.

2025 New Hero HF 100 Bike Top 5 Things You Should Must Know Details

ಇನ್ನು, ನೂತನ 'ಹೀರೋ ಎಚ್ಎಫ್ 100' ಬೈಕ್ ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಈ ಮೋಟಾರ್‌ಸೈಕಲ್‌ಗೆ ಮುಂಬರುವ ದಿನಗಳಲ್ಲಿ ಮಧ್ಯಮ ವರ್ಗದ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 29, 2025, 16:45 [IST]
English summary
2025 new hero hf 100 bike top 5 things you should must know details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+