Hero: ಬಡವರು ಕೊಳ್ಳಬಹುದು.. 2025ರ ಹೊಸ ಹೀರೋ ಎಚ್ಎಫ್ 100 ಬಿಡುಗಡೆ.. ಬೆಲೆ ಇಷ್ಟೇನಾ, ವಿಶೇಷತೆಗಳೇನು?

ಹೀರೋ ಮೋಟೋಕಾರ್ಪ್ (Hero MotoCorp), ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ವಿಶೇಷವಾಗಿ ಕಂಪನಿಯು ಮಾರಾಟಗೊಳಿಸಿವ ಬೈಕ್‌ಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿವೆ. ಅದರಲ್ಲೂ ಸ್ಪ್ಲೆಂಡರ್ ಹಾಗೂ ಎಚ್ಎಫ್ 100 ಮೋಟಾರ್‌ಸೈಕಲ್‌ಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿ ಸಿಗುವುದರಿಂದ ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಸದ್ಯ, ಹೀರೋ ಕಂಪನಿಯು 'ಎಚ್ಎಫ್ 100' ಬೈಕ್‌ನ ಪವರ್‌ಟ್ರೇನ್‌ನ್ನು ನವೀಕರಿಸಿದ್ದು, 2025ರ ಮಾಡೆಲ್‌ನ್ನು ಬಿಡುಗಡೆಗೊಳಿಸಿದೆ.

2025ರ ನೂತನ ಹೀರೋ ಎಚ್ಎಫ್ 100 (Hero HF 100) ಬೈಕ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ದುಡಿಯುವ ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಖರೀದಿ ಮಾಡಬಹುದು. ಇದು ರೂ.60,118 (ಎಕ್ಸ್-ಶೋರೂಂ - ದೆಹಲಿ) ದರವನ್ನು ಒಳಗೊಂಡಿದೆ. ಹಳೆಯ ಮಾಡೆಲ್‌ಗಿಂತ ರೂ.1,100 ದುಬಾರಿಯಾಗಿದೆ.

2025 New Hero HF 100 Launched in india Rs 60 118 Price Details

ಹೊಸ ಹೀರೋ ಎಚ್ಎಫ್ 100 ಮೋಟಾರ್‌ಸೈಕಲ್‌, ವಿನ್ಯಾಸದಲ್ಲಿಯೂ ಯಾವುದೇ ಮಾರ್ಪಾಡನ್ನು ಮಾಡಲಾಗಿಲ್ಲ. ಇದು ಹೆಚ್ಚು ಸರಳವಾಗಿದ್ದು, ಉತ್ತಮವಾಗಿರುವ ಹ್ಯಾಲೊಜೆನ್ ಹೈಡ್‌ಲೈಟ್ ಮತ್ತು ಟೇಲ್ ಲೈಟ್‌ನ್ನು ಪಡೆದಿದೆ. ಜೊತೆಗೆ ರೆಡ್ - ಬ್ಲ್ಯಾಕ್ ಮತ್ತು ಬ್ಲ್ಯೂ - ಬ್ಲ್ಯಾಕ್ ಎಂಬ ಎರಡು ಅತ್ಯಾಧುನಿಕವಾದ ಬಣ್ಣಗಳೊಂದಿಗೂ ದೊರೆಯುತ್ತದೆ.

ಈ ಹೀರೋ ಎಚ್ಎಫ್ 100 ಬೈಕ್‌ನ ಪವರ್‌ಟ್ರೇನ್‌ನಲ್ಲಿ ಮಾತ್ರ ಪ್ರಮುಖವಾದ ಬದಲಾವಣೆಯಾಗಿದೆ. ಇದನ್ನು ಒಬಿಡಿ-2ಬಿ (OBD-2B) ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಲಾಗಿದೆ. ಚಾಲನೆ ವೇಳೆ ಇಂಗಾಲದ ಹೊರಸೂಸುವಿಕೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ, ಸವಾರರನ್ನು ಎಚ್ಚರಿಸಲು ನೆರವಾಗುತ್ತದೆ. ಇದು ಬಿಟ್ಟರೆ, ಕಾರ್ಯಕ್ಷಮತೆಯೂ ಹಳೆಯ ಮಾಡೆಲ್‌ನಂತೆಯೇ ಇದೆ.

2025 New Hero HF 100 Launched in india Rs 60 118 Price Details

ನೂತನ ಎಚ್ಎಫ್ 100 ಮೋಟಾರ್‌ಸೈಕಲ್‌ 97.2 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8,000 ಆರ್‌ಪಿಎಂನಲ್ಲಿ 8.02 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6,000 ಆರ್‌ಪಿಎಂನಲ್ಲಿ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಹೊಸ ಹೀರೋ ಎಚ್ಎಫ್ 100 ಬೈಕ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್, ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕಿಕ್-ಸ್ಟಾರ್ಟರ್ ಮತ್ತು ಎಲೆಕ್ಟ್ರಿಕ್-ಸ್ಟಾರ್ಟ್ ಸೇರಿದಂತೆ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಮೋಟಾರ್‌ಸೈಕಲ್‌ 110 ಕೆಜಿ ತೂಕವಿದ್ದು, 9.1-ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.

2025 New Hero HF 100 Launched in india Rs 60 118 Price Details

ನೂತನ ಎಚ್ಎಫ್ 100 ಬೈಕ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಟೂ-ಸ್ಟೆಪ್ ಅಡ್ಜಸ್ಟಬಲ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಪಡೆದಿದೆ. ಸವಾರರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ. ಇದರೊಟ್ಟಿಗೆ ಐಬಿಎಸ್ (ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದ್ದು, ಸೀಟ್ ಹೈಟ್ 805 ಎಂಎಂ ಮತ್ತು ಗ್ರೌಂಡ್ ಕ್ಲಿಯರೆನ್ಸ್ 165 ಎಂಎಂ ಇದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 28, 2025, 15:07 [IST]
English summary
2025 new hero hf 100 launched in india rs 60118 price details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+