TVS: ಬಡವರು ಮನೆಗೆ ತರಬಹುದು.. ಹೊಸ 'ಟಿವಿಎಸ್ ಸ್ಪೋರ್ಟ್ ಇಎಸ್ ಪ್ಲಸ್ ಬೈಕ್' ಬಿಡುಗಡೆ, ಬೆಲೆ ಇಷ್ಟೇನಾ?
ಟಿವಿಎಸ್ ಮೋಟಾರ್ (TVS Motor) ವಿಶ್ವಾಸಾರ್ಹ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಹೊರಹೊಮ್ಮಿದ್ದು, ದೇಶಾದ್ಯಂತ ಮನೆ ಮಾತಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿಸುವ ನಿಟ್ಟಿನಲ್ಲಿ ಒಂದಷ್ಟು ನವೀಕರಣಗಳೊಂದಿಗೆ 2025ರ ಹೊಚ್ಚ ಹೊಸ 'ಸ್ಪೋರ್ಟ್ ಇಎಸ್ ಪ್ಲಸ್' ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ಬನ್ನಿ, ಈ ನೂತನ ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.
2025ರ ಹೊಸ ಟಿವಿಎಸ್ ಸ್ಪೋರ್ಟ್ ಇಎಸ್ ಪ್ಲಸ್ (TVS Sport ES Plus) ಮೋಟಾರ್‌ಸೈಕಲ್ ಬಜೆಟ್ ಬೆಲೆಯಲ್ಲಿಯೇ ದೊರೆಯಲಿದ್ದು, ಗ್ರಾಹಕರು ಕೂಡ ಸುಲಭವಾಗಿ ಖರೀದಿ ಮಾಡಬಹುದು. ಇದು ರೂ.59,881 ರಿಂದ ರೂ.71,785 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಸೆಲ್ಫ್ ಸ್ಟಾರ್ಟ್ ಇಎಸ್, ಸೆಲ್ಫ್ ಸ್ಟಾರ್ಟ್ ಇಎಸ್ ಪ್ಲಸ್ ಹಾಗೂ ಸೆಲ್ಫ್ ಸ್ಟಾರ್ಟ್ ಇಎಲ್ಎಸ್ ಎಂಬ ಮೂರು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ ಟಿವಿಎಸ್ ಸ್ಪೋರ್ಟ್ ಇಎಸ್ ಪ್ಲಸ್ ಬೈಕ್‌ನ ವಿನ್ಯಾಸದಲ್ಲೂ ಯಾವುದೇ ಪ್ರಮುಖವಾದ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಅದರ ಸ್ಟ್ಯಾಂಡರ್ಡ್ 'ಸ್ಪೋರ್ಟ್' ಮೋಟಾರ್‌ಸೈಕಲ್‌ನ ತದ್ರೂಪದಂತಿದೆ. ಆದರೂ ಹೊಸದಾಗಿರುವ ಗ್ರಾಫಿಕ್ಸ್ ಪಡೆದಿದೆ. ಇದರೊಟ್ಟಿಗೆ ಗ್ರೇ ರೆಡ್ ಮತ್ತು ಬ್ಲ್ಯಾಕ್ ನಿಯಾನ್ ಎಂಬ ಎರಡು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಮೋಟಾರ್‌ಸೈಕಲ್‌ನ ಪವರ್‌ಟ್ರೇನ್‌ನ್ನು ಒಬಿಡಿ-2ಬಿ (OBD-2B) ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಲಾಗಿದೆ. ಇದು ಇಂಗಾಲದ ಹೊರಸುಸುವಿಕೆಯಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದರೆ, ಸವಾರರನ್ನು ಎಚ್ಚರಿಸುತ್ತದೆ. ಆದರೂ ನೂತನ ಬೈಕ್‌ನ ಕಾರ್ಯಕ್ಷಮತೆಯಲ್ಲಿ ಸದ್ಯಕ್ಕೆ ಬಹುಮುಖ್ಯವಾದ ಮಾರ್ಪಾಡುಗಳನ್ನು ಮಾಡಲಾಗಿಲ್ಲ.

ಹೊಸ ಟಿವಿಎಸ್ ಸ್ಪೋರ್ಟ್ ಇಎಸ್ ಪ್ಲಸ್ ಬೈಕ್ ಹೆಚ್ಚು ಶಕ್ತಿಯುತವಾದ 109.7 ಸಿಸಿ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದು 8.08 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 8.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 70 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ ಎಂದು ಅಂದಾಜಿಸಲಾಗಿದೆ.
ನೂತನ ಟಿವಿಎಸ್ ಸ್ಪೋರ್ಟ್ ಇಎಸ್ ಪ್ಲಸ್ ಮೋಟಾರ್‌ಸೈಕಲ್, ಈಗಿರುವ 'ಸ್ಪೋರ್ಟ್' ಬೈಕ್‌ನಂತೆಯೇ ವೈಶಿಷ್ಟ್ಯಗಳನ್ನು ಪಡೆದಿದೆ. ಟೂ-ಪಾಡ್ ಅನಲಾಗ್ ಇನ್ಸ್ಟ್ರುಮೆಂಟ್ ಪ್ಯಾನೆಲ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು 112 ಕೆಜಿ ತೂಕವಿದ್ದು, 10 ಲೀ. ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.
ಈ ಬೈಕ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) ಟ್ವಿನ್-ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೆಕ್‌ಗಳನ್ನು ಒಳಗೊಂಡಿದೆ. ಹಾಗೆಯೇ ಹೊಸ ಟಿವಿಎಸ್ ಸ್ಪೋರ್ಟ್ ಇಎಸ್ ಪ್ಲಸ್ ಮೋಟಾರ್‌ಸೈಕಲ್‌ಗೆ ಹೀರೋ ಹೆಚ್ಎಫ್ ಡಿಲಕ್ಸ್, ಹೋಂಡಾ ಶೈನ್ 100, ಬಜಾಜ್ ಪ್ಲಾಟಿನಾ 110 ಹಾಗೂ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ಸೈಕಲ್‌ಗಳು ಪ್ರಬಲವಾದ ಎದುರಾಳಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








