ಬಿಡುಗಡೆಗೆ ಎರಡೇ ದಿನ ಬಾಕಿ... ಆಗಲೇ ಲೀಕ್ ಆಯ್ತು ಬೈಕ್... ರಾಯಲ್ ಎನ್‌ಫೀಲ್ಡ್‌ಗೆ ಶಾಕ್!

ಹೊಸ 2025ರ ರಾಯಲ್ ಎನ್‌ಫೀಲ್ಡ್ ಹಂಟರ್‌ 350 ಬೈಕ್‌ನ್ನು ಕಂಪನಿಯು ಇದೇ ಏಪ್ರಿಲ್ 26, 2025 ರಂದು ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದು ಹೊಸ ರಿಯರ್ ಸಸ್ಪೆಂಷನ್, ನವೀಕರಿಸಿದ ಬಾಡಿ ಗ್ರಾಫಿಕ್ಸ್ ಮತ್ತು ಬಣ್ಣಗಳನ್ನು ಪಡೆಯಲಿದೆ. ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಬೈಕ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಇದೀಗ ಬಿಡುಗಡೆ ದಿನ ಬಹಿರಂಗವಾಗಬೇಕಿದ್ದ ಹೊಸ 2025ರ ರಾಯಲ್ ಎನ್‌ಫೀಲ್ಡ್ ಹಂಟರ್‌ 350 ಮೋಟಾರ್‌ಸೈಕಲ್ ಬಿಡುಗಡೆಗೂ ಮುನ್ನ ದರ್ಶನ ಕೊಟ್ಟಿದೆ. ಈ ಬೈಕ್ ಕುರಿತ ಹೊಸ ಚಿತ್ರಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ.

ಒಟ್ಟಾರೆ ಹೊಸ 2025ರ ರಾಯಲ್ ಎನ್‌ಫೀಲ್ಡ್ ಹಂಟರ್‌ 350 ಬೈಕ್ ತನ್ನ ಸಂಪೂರ್ಣ ವಿಶೇಷತೆಗಳನ್ನು ಬಹಿರಂಗಪಡಿಸಿಕೊಂಡಿದೆ. ಚಿತ್ರಗಳಲ್ಲಿ ನಮಗೆ ಲಭ್ಯವಾದ ಮಾಹಿತಿಯ ಪ್ರಕಾರ, ಹೊಚ್ಚ ಹೊಸ ಬಣ್ಣ ಆಯ್ಕೆಗಳು ಮತ್ತು ಪರಿಷ್ಕೃತ ಬಾಡಿ ಗ್ರಾಫಿಕ್ಸ್ ನೊಂದಿಗೆ ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ. ಆನ್‌ಲೈನ್ ನಲ್ಲಿ ಕಾಣಿಸಿಕೊಂಡ ಬೈಕಿನ ಎರಡು ಹೊಸ ಬಣ್ಣಗಳಲ್ಲಿ ಒಂದು ಹಳದಿ, ಹಸಿರು ಮತ್ತು ಇನ್ನೊಂದು ನೀಲಿ ಗ್ರಾಫಿಕ್ಸ್ ಜೊತೆಗೆ ಬಿಳಿ ಬೇಸ್ ಅನ್ನು ಹೊಂದಿದೆ.

2025-royal-enfield-hunter-350-pics-leaked-ahead-of-launch

ಇನ್ನೊಂದು ವಿಭಿನ್ನ ಬ್ಲಾಕ್ ಹೈಲೈಟ್ ಗಳೊಂದಿಗೆ ರೆಡ್ ಬಾಡಿಯನ್ನು ಹೊಂದಿದೆ. ರಾಯಲ್ ಎನ್ ಫೀಲ್ಡ್ ಹಂಟರ್ 350 ಬೈಕ್ ತನ್ನ ರೆಟ್ರೊ ವಿನ್ಯಾಸ ಮತ್ತು ಅಗ್ಗದ ಬೆಲೆಯಿಂದಾಗಿ ಸ್ಥಿರ ಬೇಡಿಕೆ ಪಡೆದುಕೊಂಡಿದೆ. ಹೊಸ ವೃತ್ತಾಕಾರದ ಎಲ್ಇಡಿ ಹೆಡ್ ಲ್ಯಾಂಪ್ ಇರುವುದು ಸಹ ಚಿತ್ರಗಳಲ್ಲಿ ಬಹಿರಂಗವಾಗಿದೆ. ಮೊದಲು ಕಡಿಮೆ ಪವರ್‌ ಇರುವ ಹ್ಯಾಲೋಜೆನ್ ಸೆಟಪ್ ಇತ್ತು, ಈಗ ಎಲ್ಇಡಿ ಹೆಡ್ ಲ್ಯಾಂಪ್ ಉತ್ತಮ ಬೆಳಕನ್ನು ನೀಡುತ್ತದೆ.

ರಾಯಲ್‌ ಎನ್‌ಫೀಲ್ಡ್‌ ಹಂಟರ್ 350 ಬೈಕಿನ ಹಿಂಭಾಗದಲ್ಲಿ ಕಠಿಣವಾದ ಸವಾರಿಯ ಗುಣಮಟ್ಟವಿದೆ (ಹಿಂಭಾಗದಲ್ಲಿ ಗಟ್ಟಿಯಾದ ಸಸ್ಪೆನ್ಷನ್) ಎಂಬ ದೂರುಗಳಿವೆ. ಬಹುಶಃ ಹೆಚ್ಚು ನಿರ್ಣಾಯಕವಾಗಿ, ರಾಯಲ್ ಎನ್ ಫೀಲ್ಡ್ ಹಿಂಭಾಗದ ಸಸ್ಪೆಂಷನ್ ಘಟಕಗಳನ್ನು ಪರಿಷ್ಕರಿಸಿದೆ ಎಂದು ತೋರುತ್ತದೆ. ಇದು ಸವಾರಿ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಗಳಿಗೆ ಕಾರಣವಾಗಬಹುದು.

2025-royal-enfield-hunter-350-pics-leaked-ahead-of-launch

ಹೊಸ ರಾಯಲ್ ಎನ್ ಫೀಲ್ಡ್ ಹಂಟರ್ 350 ಬೈಕಿನ ಪರ್ಫಾಮೆನ್ಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಏಕೆಂದರೆ ಇದು 349 ಸಿಸಿ ಸಿಂಗಲ್ ಸಿಲಿಂಡರ್ ಏರ್ ಮತ್ತು ಆಯಿಲ್-ಕೂಲ್ಡ್ ಫ್ಯೂಯಲ್ ಇಂಜೆಕ್ಟೆಡ್ ಒಹೆಚ್‌ಸಿ ಎಂಜಿನ್ ಅನ್ನು ಇರಲಿದೆ. ಈ ಎಂಜಿನ್ 20.2 ಬಿಹೆಚ್ ಪವರ್ ಮತ್ತು 27 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್ ಇರಲಿದೆ.

ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಹಂಟರ್ 350 ಬೈಕಿನ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಗಳಿದ್ದು, ಪ್ರಸ್ತುತ ಹಂಟರ್ 350 ಬೈಕಿನ ಬೆಲೆಯು ರೂ.1.50 ಲಕ್ಷಗಳಾದರೆ, ಇದರ ಟಾಪ್ ವೇರಿಯೆಂಟ್ ಬೆಲೆಯು ರೂ.1.75 ಲಕ್ಷಗಳಾಗಿದೆ (ಎಕ್ಸ್‌ ಶೋರೂಂ ಬೆಲೆಗಳು). ಹೊಸ ಮುಂಬರುವ ಹಂಟರ್‌ನ ಎಲ್ಲಾ ವೇರಿಯೆಂಟ್‌ಗಳು ಸುಮಾರು 10,000 ರೂ.ಗಳ ಬೆಲೆ ಹೆಚ್ಚಳವನ್ನು ಕಾಣಬಹುದು.

2025-royal-enfield-hunter-350-pics-leaked-ahead-of-launch

ಈ ವರ್ಷದ ಆರಂಭದಲ್ಲಿ ಎರಡೂವರೆ ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಮೋಟಾರ್ ಸೈಕಲ್ 5 ಲಕ್ಷ ವಾಹನಗಳು ಮಾರಾಟವಾಗಿವೆ. ನವೀಕರಿಸಿದ ಆವೃತ್ತಿಯ ಆಗಮನವು ಅದರ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ. ನವೀಕರಣಗಳಿಗೆ ಅನುಗುಣವಾಗಿ ಇದೀಗ ಮುಂಬರಲಿರುವ ಹೊಸ ಹಂಟರ್ 350 ಬೈಕಿನಲ್ಲಿ ಹೊಸ ಕಾಂಪೊನೆಂಟ್ ಅನ್ನು ಅಳವಡಿಸಲಾಗಿದ್ದು, ಇದು ಬೈಕಿನ ಒಟ್ಟಾರೆ ಆರಾಮವನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, April 24, 2025, 16:30 [IST]
English summary
2025 royal enfield hunter 350 pics leaked ahead of launch
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+