Royal Enfield: ರಾಯಲ್ ಎನ್‌ಫೀಲ್ಡ್‌ನ ಅತ್ಯಂತ ಅಗ್ಗದ ಬೈಕ್ ಬಿಡುಗಡೆಗೆ ಸಜ್ಜು! ಬೆಲೆ ಇಷ್ಟೇನಾ?
ರಾಯಲ್ ಎನ್‌ಫೀಲ್ಡ್ ಹಂಟರ್ (Royal Enfield Hunter) ಬೈಕ್ ಸದ್ಯ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ 350 ಸಿಸಿ ಬೈಕ್ ಆಗಿದೆ. ಇದು ಕ್ಲಾಸಿಕ್ 350 ನಷ್ಟೇ ಜನಪ್ರಿಯತೆ ಪಡೆದುಕೊಂಡಿದ್ದು, ರೆಟ್ರೋ ಸ್ಟೈಲಿಷ್ ಲುಕ್‌ನಲ್ಲಿ ಸಿಗುವ ರಾಯಲ್ ಎನ್‌ಫೀಲ್ಡ್ ಅಗ್ಗದ ಬೈಕ್ ಆಗಿದೆ. ಪ್ರಸ್ತುತ ತನ್ನ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿದ್ದು, ಪ್ರತಿಸ್ಪರ್ಧಿ ಬೈಕ್‌ಗಳು ಹೊಸ ಅಪ್‌ಡೇಟ್‌ಗಳೊಂದಿಗೆ ಧೂಳೆಬ್ಬಿಸುತ್ತಿರುವ ಕಾರಣ ಈಗ ರಾಯಲ್ ಎನ್‌ಫೀಲ್ಡ್ ಹಂಟರ್ ಕೂಡ ಹೊಸ ಅಪ್‌ಡೇಟ್‌ಗಳನ್ನು ಪಡೆದುಕೊಂಡು ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಯಾವೆಲ್ಲಾ ಅಪ್‌ಡೇಟ್‌ಗಳನ್ನು ಪಡೆಯಲಿದೆ? ಬೆಲೆ ಎಷ್ಟಿರಬಹುದು ಎಂಬುದನ್ನು ತಿಳಿಯೋಣ.
ಒಂದು ಕಾಲದಲ್ಲಿ ರಾಯಲ್ ಎನ್‌ಫೀಲ್ಡ್ ಎಂದಾಕ್ಷಣ ದುಬಾರಿ ಬೈಕ್‌ಗಳು ಎಂಬಂತಿತ್ತು. ಹಂಟರ್ ಬಿಡುಗಡೆಯ ನಂತರ ಎಲ್ಲರಿಗೂ ಕೈಗೆಟುಕುವ ರಾಯಲ್‌ಎನ್‌ಫೀಲ್ಡ್ ಬೈಕ್ ಆಗಿ ಇದು ಗುರ್ತಿಸಿಕೊಂಡಿದೆ. ಸದ್ಯಕ್ಕೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಲ್ಲಿ ಅತ್ಯಂತ ಕೈಗೆಟುಕುವ ಅಗ್ಗದ ಮೋಟಾರ್ ಸೈಕಲ್ ಆಗಿದೆ. ಇದರ ಬೆಲೆಯು ಕೇವಲ ರೂ.1.50 ಲಕ್ಷಗಳಾಗಿದೆ (ಎಕ್ಸ್ ಶೋರೂಂ).

ಇದೀಗ ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿರುವ 2025ರ ಹಂಟರ್ 350 ಬೈಕ್ ಸುಮಾರು 10,000 ರೂ. ಬೆಲೆ ಏರಿಕೆಯೊಂದಿಗೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ರಾಯಲ್ ಎನ್‌ಫೀಲ್ಡ್ ತನ್ನ ಪ್ರಸಿದ್ಧ ಬೈಕ್ ಹಂಟರ್ 350 ಅನ್ನು ತನ್ನ ಅತಿದೊಡ್ಡ ನವೀಕರಣವಾಗಿ ನೀಡಲು ಯೋಜಿಸುತ್ತಿದೆ.
ಈ ಬೈಕಿನ 2025 ರ ಆವೃತ್ತಿಯನ್ನು ಏಪ್ರಿಲ್ 26 ರಂದು ಹಂಟರ್ ಹುಡ್ ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದು ಕಂಪನಿಯ 350 ಸಿಸಿ ಬೈಕ್‌ಗಳಲ್ಲಿಯೇ ಎಂದೂ ಮಾಡದ ಒಂದು ದಿನದ ಉತ್ಸವವಾಗಿರಲಿದೆ. ಇನ್ನು ಹಂಟರ್ ತನ್ನ ವಿಭಾಗದಲ್ಲಿನ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಕೆಲವೊಂದು ಹೊಸ ಅಪ್‌ಡೇಟ್‌ಗಳನ್ನು ಪಡೆಯಲಿದೆ.

ಪ್ರಸ್ತುತ, ಹಂಟರ್ 350 ಬೈಕ್ ಒಟ್ಟು ಎಂಟು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಮುಂಬರಲಿರುವ ಹೊಸ ಹಂಟರ್ ಹೊಸ ಬಣ್ಣಗಳನ್ನು ಪಡೆದು ಸದ್ಯಕ್ಕೆ ಹೆಚ್ಚು ಮಾರಾಟವಾಗದ ಕೆಲವು ಬಣ್ಣಗಳನ್ನು ನಿಲ್ಲಿಸಬಹುದು. 2025ರ ಹಂಟರ್ 350 ಬೈಕಿನಲ್ಲಿ ಕೆಲವು ಸಣ್ಣ ನವೀಕರಿಸಿದ ಫೀಚರ್ ಗಳನ್ನು ಕೂಡ ಅಳವಡಿಸುವ ಸಾಧ್ಯತೆಗಳಿವೆ.
ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಹಿಂಭಾಗದಲ್ಲಿ ಕಠಿಣವಾದ ಸವಾರಿಯ ಗುಣಮಟ್ಟವಿದೆ (ಹಿಂಭಾಗದಲ್ಲಿ ಗಟ್ಟಿಯಾದ ಸಸ್ಪೆನ್ಷನ್) ಎಂಬ ದೂರುಗಳಿವೆ. ಮುಖ್ಯವಾಗಿ ರೀಬೌಂಡ್ ಡ್ಯಾಂಪಿಂಗ್ ನಲ್ಲಿ, ಇದೀಗ ಮುಂಬರಲಿರುವ ಹೊಸ ಹಂಟರ್ 350 ಬೈಕಿನಲ್ಲಿ ನವೀಕರಿಸಿದ ಕಾಂಪೊನೆಂಟ್ ಅನ್ನು ಅಳವಡಿಸಲಾಗಿದ್ದು, ಇದು ಬೈಕಿನ ಒಟ್ಟಾರೆ ಆರಾಮವನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಮೊದಲೇ ಹೇಳಿದಂತೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಹಂಟರ್ 350 ಬೈಕಿನ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಗಳಿದ್ದು, ಪ್ರಸ್ತುತ ಹಂಟರ್ 350 ಬೈಕಿನ ಬೆಲೆಯು ರೂ.1.50 ಲಕ್ಷಗಳಾದರೆ, ಇದರ ಟಾಪ್ ವೇರಿಯೆಂಟ್ ಬೆಲೆಯು ರೂ.1.75 ಲಕ್ಷಗಳಾಗಿದೆ (ಎಕ್ಸ್ ಶೋರೂಂ ಬೆಲೆಗಳು). ಹೊಸ ಮುಂಬರುವ ಹಂಟರ್‌ನ ಎಲ್ಲಾ ವೇರಿಯೆಂಟ್‌ಗಳು ಸುಮಾರು 10,000 ರೂ.ಗಳ ಬೆಲೆ ಹೆಚ್ಚಳವನ್ನು ಕಾಣಬಹುದು.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








