ಹೊಸ ಸ್ಕೂಟರ್‌ಗಳು ಬಿಡುಗಡೆಗೆ ಸಿದ್ಧ: 2025ರ ದ್ವಿತಿಯಾರ್ಧದಲ್ಲಿ ಇವುಗಳದ್ದೆ ಅಬ್ಬರ

ಈಗಾಗಲೇ 2025ರ ವರ್ಷ ನೋಡ ನೋಡುತ್ತಲೇ ಅರ್ಧ ಮುಗಿದಿದೆ, ಸದ್ಯಕ್ಕೆ ಜೂನ್‌ ತಿಂಗಳಿನಲ್ಲಿದ್ದೇವೆ. ಇನ್ನೂ 7 ತಿಂಗಳು ಬಾಕಿ ಉಳಿದಿದ್ದು, 4 ಸ್ಕೂಟರ್‌ಗಳು ಬಿಡುಗಡೆಯಾಗಲು ಸಜ್ಜಾಗುತ್ತಿವೆ. ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ, ಇಂಧನ ಚಾಲಿತ ದ್ವಿಚಕ್ರ ವಾಹನಗಳಿಗೂ ಒಂದಷ್ಟು ಡಿಮ್ಯಾಂಡ್ ಇರುವುದರಿಂದ ಹೊಸ ಫೇಸ್‌ಲಿಫ್ಟ್‌ ಮಾದರಿಗಳನ್ನು ಸಹ ಕಂಪನಿಗಳು ಬಿಡುಗಡೆ ಮಾಡಲು ಸಜ್ಜಾಗಿವೆ. ಬನ್ನಿ ಹಾಗಾದ್ರೆ ಮುಂಬರುವ ತಿಂಗಳುಗಳಲ್ಲಿ ಪ್ರಮುಖ ಬ್ರಾಂಡ್‌ಗಳಿಂದ ಬಿಡುಗಡೆಗೆ ಸಜ್ಜಾಗಿರುವ ಟಾಪ್‌ ಸ್ಕೂಟರ್‌ಗಳನ್ನು ನೋಡೋಣ.

ಹೋಂಡಾ: ಭಾರತದ ಜನಪ್ರಿಯ ಸ್ಕೂಟರ್ ಆಕ್ಟಿವಾ ಕೆಲವು ಪ್ರಮುಖ ನವೀಕರಣಗಳೊಂದಿಗೆ ಶೀಘ್ರದಲ್ಲೆ ಬಿಡುಗಡೆಯಲಿದೆ. ಇದು ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಇಂಡಿಕೇಟರ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳನ್ನು ಹೊಸದಾಗಿ ಪಡೆಯಲಿದೆ. ವಿನ್ಯಾಸದಲ್ಲಿ ಕೆಲವು ಬದಲಾವಣೆಗಳು ಇದ್ದರೂ, ಮುಖ್ಯ ವಿನ್ಯಾಸವು ಒಂದೇ ಆಗಿರಲಿದೆ. ನವೀಕರಿಸಿದ ಆಕ್ಟಿವಾ ಮುಂಬರುವ ದಸರಾ ಹಬ್ಬದ ಸಮಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

2025-second-half-upcoming-scooter-launches

ಬಜಾಜ್: ನವೀಕರಿಸಿದ ಚೇತಕ್ 2903 ಎಂಟ್ರಿ ಲೆವೆಲ್ ಮಾದರಿಯು ಈ ತಿಂಗಳು ಬಿಡುಗಡೆಯಾಗಲಿದೆ. ನವೀಕರಿಸಿದ ಮಾದರಿಯು 35 ಸೀರಿಸ್‌ನ 3.5 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದುವ ನಿರೀಕ್ಷೆಯಿದೆ. ಎಂಟ್ರಿ ಲೆವೆಲ್ 3503 ರೂಪಾಂತರಗಳ ಆಧಾರದ ಮೇಲೆ, ಇದು ದೊಡ್ಡ 35-ಲೀಟರ್ ಅಂಡರ್-ಸೀಟ್ ಸ್ಟೋರೇಜ್, ಗಂಟೆಗೆ 63 ಕಿ.ಮೀ ಟಾಪ್ ಸ್ಪೀಡ್, ಶೇ80 ವರೆಗೆ ಚಾರ್ಜ್ ಮಾಡಲು 3 ಗಂಟೆ 25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಸಿಂಗಲ್ ಚಾರ್ಜ್‌ನಲ್ಲಿ ಇದು 151 ಕಿ.ಮೀ ರೇಂಜ್ ನೀಡುತ್ತದೆ. ಈ ಸ್ಕೂಟರ್ ಇಕೋ ಮತ್ತು ಸ್ಪೋರ್ಟ್ ಎಂಬ ಎರಡು ರೈಡ್ ಮೋಡ್‌ಗಳನ್ನು ಹೊದಿರಲಿದೆ. ಮೂಲಗಳ ಪ್ರಕಾರ ಬಜಾಜ್ ಕಂಪನಿಯು ಜೂನ್ ನಲ್ಲಿ ಹೆಚ್ಚು ಕೈಗೆಟುಕುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಪ್ರಯತ್ನಗಳನ್ನು ಚುರುಕುಗೊಳಿಸುತ್ತಿದೆ.

2025-second-half-upcoming-scooter-launches

ಹೀರೋ ವಿಡಾ: ಹೀರೋ (Hero) ಕಂಪನಿಯು ಭಾರತದಲ್ಲಿ ಜುಲೈ 1 ರಂದು ವಿಡಾ ಝಡ್ ಮತ್ತು ವಿಡಾ ವಿಎಕ್ಸ್ 2 ಎಂಬ ಎರಡು ಹೊಸ ಮಾಡಲ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗುತ್ತಿರುವುದು ತಿಳಿದುಬಂದಿದೆ. VX2 ಹೀರೋ ವಿಡಾ ಶ್ರೇಣಿಯಲ್ಲಿ ಬಜೆಟ್ ಶ್ರೇಣಿಯಲ್ಲಿ ಬರುವ ನಿರೀಕ್ಷೆಯಿದೆ. ಪ್ರಸ್ತುತ ವಿಡಾ V2 - ಲೈಟ್, ಪ್ಲಸ್ ಮತ್ತು ಪ್ರೊ ಎಂಬ ಮೂರು ರೂಪಾಂತರಗಳಲ್ಲಿ ಬರುತ್ತದೆ. ಇದು ರೂ. 74,000 ರಿಂದ ರೂ. 1,20,300 ವರೆಗೆ, ಎಕ್ಸ್-ಶೋರೂಂ ವರೆಗೆ ಇದೆ.

ಹೊಸ ಸ್ಕೂಟರ್‌ಗಳು ದೊಡ್ಡ 4.4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಉತ್ತಮ ಪರ್ಫಾಮೆನ್ಸ್ ಮತ್ತು ದೀರ್ಘ ಪ್ರಯಾಣದ ಭರವಸೆ ನೀಡಲಿವೆ. ಆಕರ್ಷಕ ಬಣ್ಣಗಳ ಆಯ್ಕೆಯೊಂದಿಗೆ ಈ ಬಾರಿ ಯುವ ಖರೀದಿದಾರರನ್ನು ಮತ್ತಷ್ಟು ಆಕರ್ಷಿಸಲಿವೆ. ಸ್ಟೈಲಿಶ್ ಡಿಸೈನ್, ಹೆಚ್ಚಿನ ಪರ್ಫಾಮೆನ್ಸ್ ಮತ್ತು ಕೈಗೆಟುಕುವ ಇವಿಗಳನ್ನು ಬಯಸುವ ವ್ಯಾಪಕ ಶ್ರೇಣಿಯ ಗ್ರಾಹಕರಿಗೆ ಇವು ಸೂಕ್ತವಾಗಿರಲಿವೆ.

2025-second-half-upcoming-scooter-launches

ಟಿವಿಎಸ್ ಮೋಟಾರ್: ಟಿವಿಎಸ್ ಕಂಪನಿಯು ತನ್ನ ಸ್ಪೋರ್ಟಿ ಎನ್‌ಟಾರ್ಕ್ ಅನ್ನು 150 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಗಳು ಹೆಚ್ಚಾಗಿವೆ. ಈ ವಿಭಾಗದಲ್ಲಿ ಎಪ್ರಿಲಿಯಾ SXR 160, ಹೀರೋ ಕ್ಸೂಮ್160 ಮತ್ತು ಯಮಹಾ ಏರೋಕ್ಸ್ 155 ಸ್ಕೂಟರ್‌ಗಳು ಧೂಳೆಬ್ಬಿಸುತ್ತಿದ್ದು, ಹೆಚ್ಚು ಶಕ್ತಿಶಾಲಿ 150 ಸಿಸಿಯನ್ನು ಬಿಡುಗಡೆ ಮಾಡಲಿದೆಯೇ ಎಂಬ ವದಂತಿ ಸ್ವಲ್ಪ ಸಮಯದಿಂದ ಹರಿದಾಡುತ್ತಿದೆ. ವರ್ಷಾಂತ್ಯದಲ್ಲಿ ಈ ಸ್ಕೂಟರ್ ಎಂಟ್ರಿ ಕೊಡುವ ಸಾಧ್ಯತೆಯಿದೆ.

ಸದ್ಯ ಮಾರುಕಟ್ಟೆಯಲ್ಲಿ ನಿತ್ಯಾವಸರಗಳಿಗೆ ಸ್ಕೂಟರ್‌ಗಳ ಅವಲಂಭನೆ ಹೆಚ್ಚಾಗುತ್ತಿರುವುದರಿಂದ ಇವುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಮತ್ತೊಂದೆಡೆ ಇವಿಗಳ ಅಬ್ಬರವು ಜೋರಾಗಿದ್ದು, ಎರಡೂ ವಾಹನ ವಿಭಾಗಗಳಲ್ಲಿ ಪೈಪೋಟಿ ಹೆಚ್ಚಾಗಿರುವುದಂತು ಸತ್ಯ. ಮುಂಬರುವ ದಿನಗಳಲ್ಲಿ ಫ ಸ್ಪರ್ಧೆ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ. ನಿಮಗೆ ಇವಿಗಳು ಅಥವಾ ಇಂಧನ ಚಾಲಿತ ಸ್ಕೂಟರ್‌ಗಳು ಎರಡರಲ್ಲಿ ಯವುದು ಇಷ್ಟ ಕಮೆಂಟ್‌ನಲ್ಲಿ ತಿಳಿಸಿ.

Article Published On: Monday, June 16, 2025, 9:14 [IST]
English summary
2025 second half upcoming scooter launches
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+