TVS: ಅಗ್ಗದ ಬೆಲೆಗೆ ಇತ್ತೀಚೆಗೆ ಬಿಡುಗಡೆಯಾದ ಹೊಸ ಟಿವಿಎಸ್ ಬೈಕ್ ವಿಶೇಷತೆಗಳು
ಜನಪ್ರಿಯ ದ್ವಿಚಕ್ರ ವಾಹನ ತಯಾರ ಕಂಪನಿಯಾಗಿರುವ ಟಿವಿಎಸ್ ಮೋಟಾರ್, ಇತ್ತೀಚೆಗೆ ತನ್ನ 2025ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ (TVS Apache RTR 200 4V) ಬೈಕ್ ಅನ್ನು ರೂ. 1,53,990 (ಎಕ್ಸ್-ಶೋರೂಂ) ಕ್ಕೆ ಬಿಡುಗಡೆ ಮಾಡಿದೆ. ಹೊಸ ನವೀಕರಣಗಳು ಹಾಗೂ ನೂತನ ಗ್ರಾಫೀಕ್ ಡಿಸೈನ್‌ನೊಂದಿಗೆ ಈ ಬಾರಿ ಬೈಕ್ ಅನ್ನು ಪರಿಚಯಿಸಲಾಗಿದೆ. 200 ಸಿಸಿ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿರುವ ಕಾರಣ ಕಂಪನಿಯು ಅಪಾಚೆ ಆರ್‌ಟಿಆರ್ 200 4ವಿ ಮೋಟಾರ್‌ಸೈಕಲ್‌ಗೆ ಹೊಸ ಅಪ್‌ಡೇಟ್‌ಗಳನ್ನು ನೀಡಿ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಸಿದ್ಧಗೊಳಿಸಿದೆ.
2016 ರಿಂದ ಧೂಳೆಬ್ಬಿಸಿದೆ: ಹೆಚ್ಚು ಆಕ್ರಮಣಕಾರಿಯಾಗಿ ವಿನ್ಯಾಸಗೊಳಿಸಲಾದ ಹೊಸ ಡಿಸೈನ್‌ನೊಂದಿಗೆ 2016 ರಲ್ಲಿ ಬಿಡುಗಡೆಯಾದ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಯುವಕರ ಫೇವರೆಟ್ ಬೈಕ್ ಆಗಿ ಗುರ್ತಿಸಿಕೊಂಡಿತ್ತು. ಕಾಲಾನಂತರದಲ್ಲಿ, ಸಿಗ್ನೇಚರ್ ಡಿಆರ್‌ಎಲ್‌ಗಳನ್ನು ಒಳಗೊಂಡಿರುವ ಎಲ್‌ಇಡಿ ಹೆಡ್‌ಲ್ಯಾಂಪ್ ಸೇರಿಸುವುದರೊಂದಿಗೆ ಮೋಟಾರ್‌ಸೈಕಲ್‌ನ ವಿನ್ಯಾಸವು ಹೊಸ ಮಟ್ಟಕ್ಕೆ ಕೊಂಡೊಯ್ಯಿತು.

ಇದು ಡ್ಯುಯಲ್ ಚಾನೆಲ್ ಎಬಿಎಸ್ ಜೊತೆಗೆ ರಿಯರ್ ಲಿಫ್ಟ್-ಆಫ್ ಪ್ರೊಟೆಕ್ಷನ್, ರೈಡ್ ಮೋಡ್‌ಗಳು (ಸ್ಪೋರ್ಟ್, ಅರ್ಬನ್, ರೈನ್) ಮತ್ತು ರೇಸ್-ಟ್ಯೂನ್ಡ್ ಸ್ಲಿಪ್ಪರ್ ಕ್ಲಚ್‌ನಂತಹ ಹೊಸ ಫೀಚರ್‌ಗಳನ್ನು ಪಡೆದುಕೊಂಡಿತು. ರಿಯರ್ ಲಿಫ್ಟ್-ಆಫ್ ಪ್ರೊಟೆಕ್ಷನ್‌ನೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್‌ನ ಪರಿಚಯವು ಹೆಚ್ಚಿನ ವೇಗದ ಬ್ರೇಕಿಂಗ್ ಸಮಯದಲ್ಲಿ ವರ್ಧಿತ ಸುರಕ್ಷತೆ ಮತ್ತು ನಿಯಂತ್ರಣವನ್ನು ನೀಡುತ್ತದೆ.
ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ: ಇತ್ತೀಚಿನ ಮೋಟಾರ್‌ಸೈಕಲ್, OBD2B ಕಂಪ್ಲೈಂಟ್‌ನೊಂದಿಗೆ ಸವಾರಿ ಅನುಭವವನ್ನು ಹೆಚ್ಚಿಸುವ ಗಮನಾರ್ಹ ಅಪ್‌ಡೇಟ್‌ಗಳೊಂದಿಗೆ ಎಂಟ್ರಿ ಕೊಟ್ಟಿದೆ. ಈ ಮೋಟಾರ್‌ಸೈಕಲ್ ಸುಧಾರಿತ ತಂತ್ರಜ್ಞಾನ, ರೇಸ್-ಪ್ರೇರಿತ ವಿನ್ಯಾಸ ಅಂಶಗಳು ಮತ್ತು ನಿಖರ ಎಂಜಿನಿಯರಿಂಗ್ ಡಿಸೈನ್ ಪಡೆದುಕೊಂಡಿದೆ.
ಗ್ಲಾಸಿ ಬ್ಲ್ಯಾಕ್, ಮ್ಯಾಟ್ ಬ್ಲ್ಯಾಕ್ ಮತ್ತು ಗ್ರಾನೈಟ್ ಗ್ರೇ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ರೆಡ್ ಅಲಾಯ್ ವೀಲ್ ಮತ್ತು ರಿಫ್ರೆಶ್ ಮಾಡಿದ ಗ್ರಾಫಿಕ್ಸ್‌ನೊಂದಿಗೆ ಗಮನಾರ್ಹ ಹೊಸ ಲುಕ್ ಹೊಂದಿದೆ. ಹೈಡ್ರೋಫಾರ್ಮ್ಡ್ ಹ್ಯಾಂಡಲ್‌ಬಾರ್‌ನ ಸೇರ್ಪಡೆ ಹಾಗೂ ಹೊಸ 37 ಎಂಎಂ ಅಪ್‌ಸೈಡ್ ಡೌನ್ (ಯುಎಸ್‌ಡಿ) ಮುಂಭಾಗದ ಸಸ್ಪೆನ್ಷನ್ ಮೋಟಾರ್‌ಸೈಕಲ್‌ಗೆ ಹೆಚ್ಚಿನ ಸ್ಟೆಬಿಲಿಟಿ ನೀಡಲಿದೆ ಎಂದು ಕಂಪನಿ ತಿಳಿಸಿದೆ.
ಹೊಸ 2025 ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಭಾರತದಾದ್ಯಂತ TVS ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬೆಲೆಗಳು ರೂ. 1,53,990 (ಎಕ್ಸ್-ಶೋರೂಂ) ರಿಂದ ಪ್ರಾರಂಭವಾಗುತ್ತವೆ. ಬ್ಲೂಟೂತ್ ಮತ್ತು ವಾಯ್ಸ್-ಅಸಿಸ್ಟ್‌ನೊಂದಿಗೆ TVS SmartXonnect ಮತ್ತು LED ಹೆಡ್‌ಲ್ಯಾಂಪ್‌ಗಳು ಹಾಗೂ DRL ಗಳೊಂದಿಗೆ ಸಂಪೂರ್ಣ ಡಿಜಿಟಲ್ ಕ್ಲಸ್ಟರ್ ಅನ್ನು ಹೊಂದಿದೆ.
ವರ್ಧಿತ ಬ್ರೇಕಿಂಗ್ ಸುರಕ್ಷತೆಗಾಗಿ ಮೋಟಾರ್‌ಸೈಕಲ್ ಡ್ಯುಯಲ್-ಚಾನೆಲ್ ABS, ಮೂರು ರೈಡ್ ಮೋಡ್‌ಗಳು (ಅರ್ಬನ್, ಸ್ಪೋರ್ಟ್ ಮತ್ತು ರೈನ್), ಸ್ಲಿಪ್ಪರ್ ಕ್ಲಚ್, ಅಡ್ಜಸ್ಟಬಲ್ ಕ್ಲಚ್ ಮತ್ತು ಬ್ರೇಕ್ ಲಿವರ್‌ಗಳನ್ನು ಹೊಂದಿದೆ. ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮೋಟಾರ್‌ಸೈಕಲ್ 9,000 rpm ನಲ್ಲಿ 20.8 PS ಪವರ್ ಮತ್ತು 7,250 rpm ನಲ್ಲಿ 17.25 Nm ಟಾರ್ಕ್ ಉತ್ಪಾದಿಸುತ್ತದೆ.
ಇದಲ್ಲದೆ ಟಿವಿಎಸ್ ಅಪಾಚೆ ಹೊಸ ಮೈಲಿಗಲ್ಲನ್ನು ದಾಟಿದೆ, ವಿಶ್ವಾದ್ಯಂತ 6 ಮಿಲಿಯನ್ ಮಾರಾಟವನ್ನು ಸಾಧಿಸಿದೆ. ಈ ತ್ವರಿತ ಬೆಳವಣಿಗೆಯು ಅಪಾಚೆ ಸಿರೀಸ್‌ನ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಮತ್ತು ಉತ್ಸಾಹದೊಂದಿಗೆ ಸವಾರಿ ಮಾಡಲು ಬದುಕುವ ರೇಸರ್‌ಗಳ ಅಭಿವೃದ್ಧಿ ಹೊಂದುತ್ತಿರುವ, ನಿರಂತರವಾಗಿ ವಿಸ್ತರಿಸುತ್ತಿರುವ ಗ್ರಾಹಕ ಸಮುಯದಾಯನ್ನು ಹೆಚ್ಚಿಸಿದೆ ಎಂದು ಕಂಪನಿ ಹೇಳಿದೆ.


Click it and Unblock the Notifications








