2026 ಕವಾಸಕಿ ZX-10R ಬೆಲೆ ಏರಿಕೆಯೊಂದಿಗೆ ಬಿಡುಗಡೆ: ವಿಶೇಷತೆಗಳೇನು?

2026 ಕವಾಸಕಿ ZX-10R ಭಾರತದಲ್ಲಿ ಬಿಡುಗಡೆಯಾಗಿದ್ದು, ಈಗ ಇದರ ಬೆಲೆಯು ರೂ. 19.49 ಲಕ್ಷ (ಎಕ್ಸ್-ಶೋರೂಂ) ಇದೆ. ಇದು ಹಿಂದಿನ 2025 ಮಾಡಲ್‌ಗಿಂತ ರೂ. 99,000 ರಷ್ಟು ಹೆಚ್ಚಾಗಿದೆ. 2025 ಮತ್ತು 2026 ಎರಡೂ ಮಾಡಲ್‌ಗಳನ್ನು ಪ್ರಸ್ತುತ ಮಾರಾಟದಲ್ಲಿ ಇಡಲಾಗಿದೆ, ಈಗಿರುವ 2025 ಮಾಡಲ್‌ ಹೆಚ್ಚಿನ ಪವರ್‌ ನೀಡುತ್ತದೆ. ಹಳೆಯ ಸ್ಟಾಕ್ ತೆರವುಗೊಳಿಸಲು ರಿಯಾಯಿತಿಯಲ್ಲಿ ಇದನ್ನು ಸಂಗ್ರಹಿಸಲಾಗಿದೆ ಎಂದು ವರದಿಯಾಗಿದೆ. 2026 ಕವಾಸಕಿ ZX-10R ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

2026 ಕವಾಸಕಿ ZX-10R ನ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಹಾರ್ಡ್‌ವೇರ್ ಬದಲಾಗದೆ ಉಳಿದಿದ್ದರೂ - ಶಾರ್ಪ್ ಫೇರಿಂಗ್, ಶೋವಾ ಸಸ್ಪೆನ್ಷನ್, ಬ್ರೆಂಬೊ ಬ್ರೇಕ್‌ಗಳು ಮತ್ತು ಸಮಗ್ರ ಎಲೆಕ್ಟ್ರಾನಿಕ್ ಸೂಟ್ ಸೇರಿಸಲಾಗಿದೆ. 2025ರ ಮಾಡಲ್‌ಗೆ ಹೋಲಿಸಿದರೆ ಎಂಜಿನ್‌ ಪವರ್‌ ಔಟ್‌ಪುಟ್ ಸ್ವಲ್ಪ ಕಡಿಮೆಯಾಗಿದೆ. 2026 ZX-10R ಈಗ ಸುಮಾರು 193 hp (RAM ಇನ್‌ಟೇಕ್‌ನೊಂದಿಗೆ 205 hp) ಮತ್ತು 112 Nm ಉತ್ಪಾದಿಸುತ್ತದೆ.

2026-kawasaki-zx-10r-launched-in-india-price-features-details

ಜೊತೆಗೆ ಹೊಸ ಮಾಡಲ್‌ನಲ್ಲಿ ಸುಮಾರು 7 ರಿಂದ 8 hp ಪವರ್ ಮತ್ತು 2.9 Nm ಟಾರ್ಕ್ ಕಡಿಮೆಯಾಗಿದೆ. ಹೊಸ 2026 ಕವಾಸಕಿ ZX-10R ನಲ್ಲಿ 998cc ಇನ್‌ಲೈನ್-4 ಸಿಲಿಂಡರ್, 6 - ಸ್ಪೀಡ್ ಗೇರ್‌ಬಾಕ್ಸ್, 193 hp ಪವರ್ ಮತ್ತು 112 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ 2025 ಮಾಡಲ್‌ 200 hp ಪವರ್ ಹಾಗೂ 114.9 Nm ಟಾರ್ಕ್ ಉತ್ಪಾದಿಸುತ್ತದೆ.

ಯಾವುದೇ ಪ್ರಮುಖ ಹಾರ್ಡ್‌ವೇರ್ ಬದಲಾವಣೆಗಳಿಲ್ಲ: ಇನ್ನೂ ಶೋವಾ BFF ಫೋರ್ಕ್‌ ಗಳು, ಶೋವಾ BFRC ಹಿಂಭಾಗದ ಮೊನೊಶಾಕ್, ಓಹ್ಲಿನ್ಸ್ ಎಲೆಕ್ಟ್ರಾನಿಕ್ ಸ್ಟೀರಿಂಗ್ ಡ್ಯಾಂಪರ್, 330 mm ಮುಂಭಾಗದ ಡಿಸ್ಕ್‌ಗಳು ಮತ್ತು ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ TFT ಕನ್ಸೋಲ್, ಬಹು ರೈಡ್ ಮೋಡ್‌ಗಳು, ಡ್ಯುಯಲ್ - ಚಾನೆಲ್ ABS, ಕ್ರೂಸ್ ಮತ್ತು ಲಾಂಚ್ ಕಂಟ್ರೋಲ್ ಸೇರಿದಂತೆ ಟ್ರಾಕ್ಷನ್ ಕಂಟ್ರೋಲ್ ಅನ್ನು ಒಳಗೊಂಡಿದೆ.

2026-kawasaki-zx-10r-launched-in-india-price-features-details

2026 ZX-10R ನ ಪವರ್ ಮತ್ತು ಟಾರ್ಕ್ ಕಡಿಮೆಯಾಗಲು ಕವಾಸಕಿ ಕಂಪನಿ ನಿಖರ ಕಾರಣವನ್ನು ಬಹಿರಂಗಪಡಿಸಿಲ್ಲ. ಇದು ಗಮನಾರ್ಹವಾಗಿದೆ ಏಕೆಂದರೆ ಇದು ಕಡಿಮೆ ಬೆಲೆಯಲ್ಲಿ ಗರಿಷ್ಠ ಪರ್ಫಾಮೆನ್ಸ್ ಬಯಸುವ ಖರೀದಿದಾರರಿಗೆ ಹಳೆಯ 2025 ಮಾಡಲ್‌ ಹೆಚ್ಚು ಆಕರ್ಷಕವಾಗಿಸುತ್ತದೆ. ಜೊತೆಗೆ ಪ್ರಸ್ತುತ ಸೆಪ್ಟೆಂಬರ್ 30, 2025 ರವರೆಗೆ ರೂ. 1.5 ಲಕ್ಷದವರೆಗೆ ರಿಯಾಯಿತಿ ಕೂಡ ಇರುವುದಾಗಿ ಹಲವು ಸೈಟ್‌ಗಳು ವರದಿ ಮಾಡಿವೆ.

2026 ZX-10R ಫೀಚರ್ಸ್: ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ TFT - ಡಿಜಿಟಲ್ ಕನ್ಸೋಲ್, ಮಲ್ಟಿ ರೈಡ್ ಮೋಡ್‌, ಟ್ರಾಕ್ಷನ್, ಲಾಂಚ್ ಮತ್ತು ಕ್ರೂಸ್ ಕಂಟ್ರೋಲ್, ಎಂಜಿನ್ ಬ್ರೇಕ್ ಕಂಟ್ರೋಲ್, ಶೋವಾ BFF/BFRC ಸಸ್ಪೆನ್ಷನ್, ಓಹ್ಲಿನ್ಸ್ ಸ್ಟೀರಿಂಗ್ ಡ್ಯಾಂಪರ್, ಪೂರ್ಣ - LED ಲೈಟಿಂಗ್ ‌ನೊಂದಿಗೆ ಬರುತ್ತದೆ. ಗ್ರೀನ್ & ಗ್ರೇ ಬಣ್ಣಗಳ ಆಯ್ಕೆಗಳಲ್ಲಿ ಗ್ರಾಹಕರು ಇದನ್ನು ಖರೀದಿಸಬಹುದು.

2026-kawasaki-zx-10r-launched-in-india-price-features-details

2026 ZX-10R ಅನ್ನು ಇತ್ತೀಚಿನ ಅಪ್‌ಡೇಟ್‌ಗಳನ್ನು ಬಯಸುವವರನ್ನು ಗುರಿಯಾಗಿಸಿಕೊಂಡು ಬಿಡುಗಡೆ ಮಾಡಲಾಗಿದೆ. ಆದರೆ ಮೌಲ್ಯ ಪ್ರಜ್ಞೆಯುಳ್ಳ ಉತ್ಸಾಹಿಗಳು ಸೀಮಿತ ಅವಧಿಗೆ ಲಭ್ಯವಿರುವ ರಿಯಾಯಿತಿ ಮತ್ತು ಹೆಚ್ಚು ಶಕ್ತಿಶಾಲಿ 2025 ಮಾಡಲ್‌ ಅನ್ನು ಖರೀದಿಸಬಹುದು. ಕವಾಸಕಿ ZX-10R ತನ್ನ ಸೆಗ್ಮೆಂಟಿನಲ್ಲಿ ಅತ್ಯಂತ ಗುರುತಿಸಬಹುದಾದ ಮಾಡಲ್‌ಗಳಲ್ಲಿ ಒಂದಾಗಿದ್ದು, ಅತ್ಯುತ್ತಮ ಲೀಟರ್ ಕ್ಲಾಸ್ ಸ್ಪೋರ್ಟ್ ಬೈಕ್ ಆಗಿದೆ.

2026 ZX-10R ಬೈಕ್‌ಗೆ ಪರ್ಯಾಯ ಆಯ್ಕೆಯನ್ನು ನೋಡುವುದಾದ್ರೆ, ಸುಜುಕಿ, ಯಮಹಾ ಮತ್ತು ಹೋಂಡಾ ಕಂಪನಿಗಳು ಸದ್ಯ ಭಾರತದಲ್ಲಿ ತಮ್ಮ ಫ್ಲ್ಯಾಗ್ ಶಿಪ್ ಲೀಟರ್ ಕ್ಲಾಸ್ ಸ್ಪೋರ್ಟ್ ಬೈಕ್ ಗಳನ್ನು ಮಾರಾಟ ಮಾಡುತ್ತಿಲ್ಲವಾದ್ದರಿಂದ ಲೀಟರ್ ಕ್ಲಾಸ್ ವಿಭಾಗದ ಇತರ ಆಯ್ಕೆಗಳಲ್ಲಿ ಡುಕಾಟಿ ಮತ್ತು ಬಿಎಂಡಬ್ಲ್ಯು ಬೈಕ್ ಗಳು ಇವೆ. ಎರಡು ಯುರೋಪಿಯನ್ ಪರ್ಯಾಯಗಳು ZX-10R ಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರುವ ಕಾರಣ ಕವಾಸಕಿಯನ್ನು ಏಕೈಕ ಆಯ್ಕೆಯನ್ನಾಗಿ ಮಾಡುತ್ತದೆ.

More from DriveSpark

Article Published On: Friday, September 12, 2025, 14:47 [IST]
English summary
2026 kawasaki zx 10r launched in india price features details
Read more on kawasaki new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+