2025 ರಲ್ಲಿ ಬಿಡುಗಡೆಯಾದ 5 ಅತ್ಯುತ್ತಮ ಪವರ್‌ಫುಲ್ ಬೈಕ್‌ಗಳು

ಭಾರತವು ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಹೊಂದಿರುವ ದೇಶವಾಗಿದೆ. ದೇಶದಲ್ಲಿ ಬಹುತೇಕರು ಬೈಕ್ ಹಾಗೂ ಸ್ಕೂಟರ್‌ಗಳ ಮೇಲೆ ಅವಲಂಭಿತರಾಗಿದ್ದಾರೆ, ಪ್ರತಿ ತಿಂಗಳು ಲಕ್ಷಾಂತರ ದ್ವಿಚಕ್ರ ವಾಹನಗಳು ಮಾರಾಟವಾಗುತ್ತವೆ. ಆದರೆ ಹಲವರಿಗೆ ದೇಶದಲ್ಲಿ ಯಾವುದು ಬೆಸ್ಟ್ ಬೈಕ್ ಅಥವಾ ಸ್ಕೂಟರ್ ಎಂಬ ಅರಿವಿಲ್ಲದೆಯೇ ಖರೀದಿಸುವವರಿದ್ದಾರೆ. ಹಾಗಾಗಿ ಭಾರತದ ಮೋಟಾರ್‌ಸೈಕಲ್ ಪ್ರಿಯರಿಗಾಗಿ ಅಡ್ವೆಂಚರ್ ಬೈಕ್‌ಗಳು, ಸ್ಟ್ರೀಟ್ ‌ಫೈಟರ್‌ಗಳು ಅಥವಾ ಪ್ರೀಮಿಯಂ ಕ್ರೂಸರ್‌ಗಳ ಪಟ್ಟಿ ಇಲ್ಲಿದೆ, ಇವು 2025 ರಲ್ಲಿ ಬಿಡುಗಡೆಯಾದ 5 ಅತ್ಯುತ್ತಮ ಬೈಕ್‌ಗಳಾಗಿವೆ.

ಹಾರ್ಲೆ-ಡೇವಿಡ್ಸನ್ X440T: ಮೊನ್ನೆಯಷ್ಟೆ (ಡಿಸೆಂಬರ್ 6, 2025) ಬಿಡುಗಡೆಯಾದ ಹಾರ್ಲೆ - ಡೇವಿಡ್ಸನ್ X440T, ಈ ವರ್ಷಾಂತ್ಯದಲ್ಲಿ ಬಿಡುಗಡೆಯಾದ ಬೆಸ್ಟ್ ಮೋಟಾರ್‌ಸೈಕಲ್ ಆಗಿದೆ. ಅಲಾಯ್ ವೀಲ್‌ಗಳು, ಪರಿಷ್ಕೃತ ಸ್ಟೈಲಿಂಗ್ ಮತ್ತು ಬಲವಾದ ರಸ್ತೆ ಉಪಸ್ಥಿತಿಯೊಂದಿಗೆ, X440T ಭಾರತೀಯ ಮಿಡಲ್ ವೇಟ್ ವಿಭಾಗಕ್ಕೆ ಪ್ರೀಮಿಯಂ ಬೈಕ್ ಆಗಿ ಗುರ್ತಿಸಿಕೊಂಡಿದೆ.

5-best-powerful-bikes-launched-in-2025

ಹಾರ್ಲೆ-ಡೇವಿಡ್ಸನ್ X440T ಬೆಲೆಯು ರೂ. 2,79,500 (ಎಕ್ಸ್ - ಶೋರೂಂ) ನಿಂದ ಪ್ರಾರಂಭವಾಗುತ್ತದೆ. ಇದು 440cc ಏರ್ - ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 27.37 PS ಪವರ್ ಮತ್ತು 38 Nm ಟಾರ್ಕ್ ಉತ್ಪಾದಿಸುತ್ತದೆ. ಇದು ರೈಡ್-ಬೈ-ವೈರ್, ನ್ಯಾವಿಗೇಷನ್‌ನೊಂದಿಗೆ TFT ಡಿಸ್ಪ್ಲೇ, ಟ್ರಾಕ್ಷನ್ ಕಂಟ್ರೋಲ್, ಎರಡು ರೈಡಿಂಗ್ ಮೋಡ್‌ಗಳು (ರೋಡ್/ರೈನ್) ಮತ್ತು ಡ್ಯುಯಲ್-ಚಾನೆಲ್ ABS ಅನ್ನು ಒಳಗೊಂಡಿದೆ.

ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300: ಅಪಾಚೆ ಆರ್‌ಟಿಎಕ್ಸ್ 300 ಬಿಡುಗಡೆ ಮಾಡುವ ಮೂಲಕ ಅಡ್ವೆಂಚರ್ ಮೋಟಾರ್‌ಸೈಕಲ್ ವಿಭಾಗಕ್ಕೆ ಟಿವಿಎಸ್ ಎಂಟ್ರಿ ಕೊಟ್ಟಿದೆ. ಇದು 299 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ, ಇದು 36 ಪಿಎಸ್ ಪವರ್ ಮತ್ತು 28.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್, ಐಚ್ಛಿಕ ಕ್ವಿಕ್‌ಶಿಫ್ಟರ್ ಮತ್ತು ಡ್ಯುಯಲ್ - ಚಾನೆಲ್ ಎಬಿಎಸ್ ಅನ್ನು ಹೊಂದಿದೆ.

5-best-powerful-bikes-launched-in-2025

ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300 ಅನ್ನು ಅಕ್ಟೋಬರ್ 15, 2025 ರಂದು ಬಿಡುಗಡೆ ಮಾಡಲಾಯಿತು. ಇದರ ಬೆಲೆ ರೂ. 1.99 ಲಕ್ಷ (ಎಕ್ಸ್-ಶೋರೂಂ) ಇದೆ. ಇದರ ಎತ್ತರದ ನಿಲುವು, ಎಲ್‌ಇಡಿ ಲ್ಯಾಂಪ್‌ಗಳು ಮತ್ತು ಅಡ್ವೆಂಚರ್-ಸಿದ್ಧ ಟೈರ್‌ಗಳನ್ನು ಒಳಗೊಂಡಿದೆ. ಫುಲ್ಲಿ-ಕಲರ್ ಟಿಎಫ್‌ಟಿ ಡಿಸ್ಪ್ಲೆ ಮತ್ತು ರೈಡಿಂಗ್ ಮೋಡ್‌ಗಳಂತಹ ಫೀಚರ್ಸ್, ಈ ಬೈಕ್ ಅನ್ನು ಆಧುನಿಕ ಮತ್ತು ಸವಾರ-ಸ್ನೇಹಿಯನ್ನಾಗಿ ಮಾಡುತ್ತದೆ.

ಹೀರೋ ಎಕ್ಸ್‌ಪಲ್ಸ್ 210: ಈ ಬೈಕ್ ಅನ್ನು ಜನವರಿ 2025 ರಲ್ಲಿ ನಡೆದ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಬಿಡುಗಡೆ ಮಾಡಲಾಯಿತು. ಇದು 210cc DOHC ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ, 24.6 PS ಪವರ್ ಮತ್ತು 20.7 Nm ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಹೊಂದಿದೆ. ಹೊಸ ಹೀರೋ ಎಕ್ಸ್‌ಪಲ್ಸ್ 210 ರೂ. 1,62,065 (ಎಕ್ಸ್-ಶೋರೂಂ) ನಿಂದ ಪ್ರಾರಂಭವಾಗುತ್ತದೆ.

5-best-powerful-bikes-launched-in-2025

ಯಮಹಾ MT-15 ಆವೃತ್ತಿ 2.0: ಆಗಸ್ಟ್ 1, 2025 ರಂದು ಬಿಡುಗಡೆಯಾದ ಜನಪ್ರಿಯ ಸ್ಟ್ರೀಟ್‌ಫೈಟರ್ MT-15 2.0 ಬೈಕ್ ಹೊಸ ಅಪ್‌ಡೇಟ್‌ಗಳನ್ನು ಪಡೆದುಕೊಂಡಿದೆ. ಇದರ ಬೆಲೆಯು ರೂ. 1,55,469 (ಎಕ್ಸ್ - ಶೋರೂಂ) ಇದೆ. ಈ ಬೈಕ್ 18.4 PS ಉತ್ಪಾದಿಸುವ ತನ್ನ ತೀಕ್ಷ್ಣವಾದ 155cc ಲಿಕ್ವಿಡ್ - ಕೂಲ್ಡ್ ಎಂಜಿನ್‌ ಹೊಂದಿದೆ. 6-ಸ್ಪೀಡ್ ಗೇರ್‌ಬಾಕ್ಸ್, ಅಸಿಸ್ಟ್ & ಸ್ಲಿಪ್ಪರ್ ಕ್ಲಚ್ ಮತ್ತು ಡ್ಯುಯಲ್-ಚಾನೆಲ್ ABS ನೊಂದಿಗೆ ಬರುತ್ತದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮನಾ ಬ್ಲಾಕ್: ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮನಾ ಬ್ಲಾಕ್ ಅನ್ನು ನವೆಂಬರ್ 21 ರಂದು ಗೋವಾದಲ್ಲಿ ನಡೆದ ಮೋಟೋವರ್ಸ್ 2025 ರಲ್ಲಿ ಬಿಡುಗಡೆ ಮಾಡಿತು. ಇದು 40 PS ಪವರ್ ಮತ್ತು 40 Nm ಟಾರ್ಕ್ ಉತ್ಪಾದಿಸುತ್ತದೆ. ಅದೇ 452cc ಲಿಕ್ವಿಡ್-ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದೆ. ರೂ. 3,37,036 (ಎಕ್ಸ್ - ಶೋರೂಂ) ಬೆಲೆಯಿಂದ ಪ್ರಾರಂಭವಾಗುತ್ತದೆ.

More from DriveSpark

Article Published On: Tuesday, December 9, 2025, 16:35 [IST]
English summary
5 best powerful bikes launched in 2025
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+