ಇತ್ತೀಚೆಗೆ ಬಿಡುಗಡೆ.. ಅಗ್ಗದ 'Hero Glamour' ಬೈಕ್ ತೆಗೆದುಕೊಳ್ಳಲು 5 ಬಹುಮುಖ್ಯ ಕಾರಣಗಳಿವು!
ಹೀರೋ ಮೋಟೋಕಾರ್ಪ್ (Hero MotoCorp), ಒಬಿಡಿ-2ಬಿ (OBD-2B) ಮಾನದಂಡಗಳ ಅನ್ವಯ ನವೀಕರಣಕ್ಕೆ ಒಳಪಡಿಸಿರುವ 2025ರ ವಿವಿಧ ಮೋಟಾರ್‌ಸೈಕಲ್ ಮಾಡೆಲ್‌ಗಳನ್ನು ಬಿಡುಗಡೆಗೊಳಿಸುತ್ತಿದೆ. ಇದು ಇಂಗಾಲ ಹೊರಸೂಸುವಿಕೆಯಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ಸವಾರರನ್ನು ಎಚ್ಚರಿಸುತ್ತದೆ. ಸದ್ಯ, ಈ ಪ್ರಕಾರವಾಗಿ ಹೊಚ್ಚ ಹೊಸ ಗ್ಲಾಮರ್ (Glamour) ಬೈಕ್‌ನ್ನು ಅದ್ದೂರಿಯಾಗಿಯೂ ಮಾರಾಟಕ್ಕೆ ತರಲಾಗಿದೆ. ನೂತನ ಬೈಕ್ ಹೆಚ್ಚು ಆಕರ್ಷಕವಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ನೀವು ಹೊಸ ಹೀರೋ ಗ್ಲಾಮರ್ ಮೋಟಾರ್‌ಸೈಕಲ್‌ನ್ನು ತೆಗೆದುಕೊಳ್ಳಲು ಆಲೋಚಿಸಿದ್ದೀರಾ.. ನಾವಿಲ್ಲಿ ಈ ಬೈಕ್‌ನ್ನು ಏಕೆ ಕೊಂಡುಕೊಳ್ಳಬೇಕು ಎಂಬುದರ ಕುರಿತಂತೆ 5 ಪ್ರಮುಖ ಕಾರಣಗಳನ್ನು ತಿಳಿಸಿಕೊಟ್ಟದ್ದೇವೆ.
ಬೆಲೆ & ರೂಪಾಂತರಗಳು (Price & Variants): ನೂತನ 2025ರ ಹೀರೋ ಗ್ಲಾಮರ್ ಮೋಟಾರ್‌ಸೈಕಲ್ ಅತಿ ಕಡಿಮೆ ಬೆಲೆಯಲ್ಲಿ ದೇಶೀಯ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದು ಕನಿಷ್ಠ ರೂ.84,698 ಮತ್ತು ಗರಿಷ್ಠ ರೂ.90,698 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಡ್ರಮ್ ಬ್ರೇಕ್, ಡಿಸ್ಕ್ ಬ್ರೇಕ್, ಡ್ರಮ್ ಬ್ರೇಕ್ ಒಬಿಡಿ-2ಬಿ & ಡಿಸ್ಕ್ ಬ್ರೇಕ್ ಒಬಿಡಿ-2ಬಿ ಎಂಬ ರೂಪಾಂತರಗಳೊಂದಿಗೂ (ವೇರಿಯೆಂಟ್) ದೊರೆಯುತ್ತದೆ.

ವಿನ್ಯಾಸ & ಬಣ್ಣಗಳು (Design & Colors): ಈ ಬೈಕ್ ನೋಡುಗರ ಕಣ್ಮನ ಸೆಳೆಯುವಂತಹ ವಿನ್ಯಾಸವನ್ನು ಒಳಗೊಂಡಿದೆ. ಇದು ಎಲ್ಇಡಿ ಹೆಡ್‌ಲೈಟ್ & ಸಿಂಗಲ್ ಪೀಸ್ ಸೀಟ್‌ನ್ನು ಪಡೆದಿದೆ. ಜೊತೆಗೆ ಕ್ಯಾಂಡಿ ಬ್ಲೇಜಿಂಗ್ ರೆಡ್, ಬ್ಲ್ಯಾಕ್ ಮೆಟಾಲಿಕ್ ಸಿಲ್ವರ್ ಮತ್ತು ಟೆಕ್ನೋ ಬ್ಲೂ ಮ್ಯಾಟ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಕಾರ್ಯಕ್ಷಮತೆ (Performance): ನೂತನ ಹೀರೋ ಗ್ಲಾಮರ್ ಮೋಟಾರ್‌ಸೈಕಲ್ ಹೆಚ್ಚಿನ ಸಾಮರ್ಥ್ಯದ 124.7 ಸಿಸಿ ಒಬಿಡಿ-2ಬಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 10 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 10.4 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಇದರೊಟ್ಟಿಗೆ 63 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ವೈಶಿಷ್ಟ್ಯಗಳು (Features): ಹೊಸ ಹೀರೋ ಗ್ಲಾಮರ್ ಬೈಕ್ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ವಿಶೇಷವಾಗಿ ಡಿಜಿಟಲ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹಾಗೂ 18-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ ಈ ಮೋಟಾರ್‌ಸೈಕಲ್ ಬರೋಬ್ಬರಿ 121 ಕೆಜಿ ತೂಕವಿದ್ದು, 13.6 ಲೀ.ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ಈ ಬೈಕ್ ಪ್ರಯಾಣಿಕರಿಗೂ ಸಹ ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ & ಹಿಂಭಾಗ (ರೇರ್) 5-ಸ್ಟೆಪ್ ಪ್ರಿಲೋಡ್ ಅಡ್ಜಸ್ಟಬಲ್ ಡುಯಲ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

2025ರ ಹೊಸ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಕೂಡ ಮಾರಾಟಕ್ಕೆ: ಇದು ರೂ.88,128 ರಿಂದ ರೂ.92,028 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 124.7 ಸಿಸಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಸರಿ ಸುಮಾರು 69 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಕ್ಲಸ್ಟರ್ & ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








