ಜೀವ ಉಳಿಸಲು ಮಹತ್ವದ ಘೋಷಣೆ: ಎಲ್ಲ ಹೊಸ ಬೈಕ್ & ಸ್ಕೂಟರ್‌ಗಳಲ್ಲಿ ABS ಕಡ್ಡಾಯ.. ಏನಿದರ ಉಪಯೋಗ?

ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನಗಳ ಅಪಘಾತಗಳಿಂದಾಗಿ ಹೆಚ್ಚಿನ ಜನರು ಮೃತಪಡುತ್ತಿದ್ದು, ಹಲವರು ಗಾಯಾಳುಗಳಾಗುತ್ತಿದ್ದಾರೆ. ಇದು ಕಳವಳಕಾರಿಯಾದ ಸಂಗತಿಯಾಗಿದ್ದು, ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ (Ministry of Road Transport and Highways) ದಿಟ್ಟ ಹೆಜ್ಜೆ ಇಟ್ಟಿದ್ದು, ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ ಎಂಬ ವಿವರಗಳು ಲಭ್ಯವಾಗಿವೆ.

ದೇಶದಲ್ಲಿ ಮಾರಾಟವಾಗುವ ಪ್ರತಿಯೊಂದು ಹೊಸ ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು 2026ರ ಜನವರಿ 1 ರಿಂದ ಅಧಿಕೃತವಾಗಿ ಜಾರಿಯಾಗಲಿದೆ ಎನ್ನಲಾಗಿದೆ. ಈ ಸಂಬಂಧ ಅತಿ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲು ಸರ್ಕಾರವು ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ABS Mandatory For All New Two Wheelers From January 1 2026 Details

ಸದ್ಯ 125 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಎಂಜಿನ್ ಒಳಗೊಂಡಿರುವ ಎಲ್ಲ ವಿಧದ ದ್ವಿಚಕ್ರ ವಾಹನಗಳಿಗೆ ಮಾತ್ರ ಎಬಿಎಸ್ (ABS) ಆಯ್ಕೆಯನ್ನು ಕಡ್ಡಾಯ ಮಾಡಲಾಗಿದೆ. ಅದರ ಹೊರತಾಗಿ, ಬರೋಬ್ಬರಿ ಶೇಕಡ 40% ದ್ವಿಚಕ್ರ ವಾಹನಗಳು ಈ ಸುರಕ್ಷತಾ ವೈಶಿಷ್ಟ್ಯವನ್ನು ಹೊಂದಿಲ್ಲ.

ಎಬಿಎಸ್ ಉಪಯೋಗವೇನು: ಇದು ಬಹುಮುಖ್ಯ ಸುರಕ್ಷತಾ ವೈಶಿಷ್ಟ್ಯವಾಗಿದೆ. ಸ್ಕೂಟರ್‌ ಹಾಗೂ ಮೋಟಾರ್‌ಸೈಕಲ್‌ಗಳನ್ನು ಓಡಿಸುವಾಗ ಇದ್ದಕ್ಕಿದಂತೆ ಬ್ರೇಕ್ ಹಾಕಿದಾಗ ವೀಲ್ ಲಾಕ್ ಆಗುವುದನ್ನು ತಡೆಗಟ್ಟುತ್ತದೆ. ವಾಹನದ ಮೇಲೆ ಸಂಪೂರ್ಣವಾದ ಹಿಡಿತ ಸಾಧಿಸಲು ನೆರವಾಗಲಿದೆ. ಸ್ಕಿಡ್ ಆಗುವುದನ್ನು ತಪ್ಪಿಸಿತ್ತದೆ. ಇದರೊಂದಿಗೆ ಅಪಘಾತವಾಗುವ ಸಾಧ್ಯತೆಯನ್ನು ಶೇಕಡ 35 ರಿಂದ 45% ಕಡಿಮೆಗೊಳಿಸುತ್ತದೆ ಎಂದು ಹಲವು ಅಧ್ಯಯನಗಳು ಹೇಳಿವೆ.

ABS Mandatory For All New Two Wheelers From January 1 2026 Details

ಎಬಿಎಸ್ ಮಾತ್ರವಲ್ಲದೆ, 2026ರ ಜನವರಿ 1 ರಿಂದ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲ ಹೊಸ ದ್ವಿಚಕ್ರ ವಾಹನಗಳಿಗೆ ಎರಡು ಹೆಲ್ಮೆಟ್‌ಗಳನ್ನು ಒದಗಿಸಬೇಕು. ಅವು ಬಿಐಎಸ್ ಮಾನದಂಡಗಳಿಗೆ ಅನುಗುಣವಾಗಿರಬೇಕು. ಈ ಬಗ್ಗೆಯೂ ಕೇಂದ್ರ ಸರ್ಕಾರ ನಿಯಮವನ್ನು ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಒಂದು ಹೆಲ್ಮೆಟ್‌ನ್ನು ಮಾತ್ರ ಮಾರಾಟಗಾರರು ನೀಡುತ್ತಿದ್ದಾರೆ.

ಭಾರತದಲ್ಲಿ ಅಪಘಾತದ ಪ್ರಮಾಣವೇನು:

2022ರಲ್ಲಿ ದೇಶದಲ್ಲಿ ದಿನವೊಂದಕ್ಕೆ ಕನಿಷ್ಠ 462 ಜನರು ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದಾರೆ. ಜೊತೆಗೆ ಪ್ರತಿನಿತ್ಯ 1,264 ರಸ್ತೆ ಅಪಘಾತಗಳು ಸಂಭವಿಸಿವೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿಯಲ್ಲಿ ಬಹಿರಂಗಗೊಂಡಿದೆ. ತಮಿಳುನಾಡಿನಲ್ಲಿ ಗರಿಷ್ಠ ರಸ್ತೆ ಅಪಘಾತ (64,105) ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ (22,595) ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ.

ABS Mandatory For All New Two Wheelers From January 1 2026 Details

ಎಬಿಎಸ್ ಆಯ್ಕೆಯಲ್ಲಿ ಲಭ್ಯವಿರುವ ಪ್ರಮುಖ ಬೈಕ್‌ಗಳಿವು:

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್‌ನೊಂದಿಗೆ ಗ್ರಾಹಕರಿಗೆ ಸಿಗಲಿದ್ದು, ರೂ.1.49 ಲಕ್ಷ ಬೆಲೆಯನ್ನು ಹೊಂದಿದೆ. ಇದೇ ಸುರಕ್ಷತಾ ವೈಶಿಷ್ಟ್ಯದೊಂದಿಗೆ ಟಿವಿಎಸ್ ಅಪಾಚೆ ಆರ್‌ಟಿಆರ್160 ಮೋಟಾರ್‌ಸೈಕಲ್‌ ಕೂಡ ಖರೀದಿಗೆ ಲಭ್ಯವಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ರೂ.1.11 ಲಕ್ಷದಿಂದ ರೂ.1.31 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಎಬಿಎಸ್‌ನೊಂದಿಗೆ ದೊರೆಯುವ ಜನಪ್ರಿಯ ಸ್ಕೂಟರ್‌ಗಳಿವು:

ಯಮಹಾ ಏರೋಕ್ಸ್ 155 ಸ್ಕೂಟರ್ ಸಹ ಎಬಿಎಸ್ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯಲಿದ್ದು, ರೂ.1.96 ಲಕ್ಷ ದರವನ್ನು ಪಡೆದಿದೆ. ಇದೇ ಸುರಕ್ಷತಾ ವೈಶಿಷ್ಟ್ಯದೊಂದಿಗೆ ಹೀರೋ ಜೂಮ್ 160 ಅನ್ನು ಮನೆಗೆ ತರಬಹುದಾಗಿದ್ದು ರೂ.1.89 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಕೆಲವೇ ದಿನಗಳಲ್ಲಿ ಈ ಜೂಮ್ ಸ್ಕೂಟರ್‌ನ ವಿತರಣೆಗಳು ಶುರುವಾಗಲಿದೆ.

ಒಟ್ಟಾರೆಯಾಗಿ, ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎನ್ನಲಾದ ಈ ಕ್ರಮವು ನಿಜಕ್ಕೂ ಶ್ಲಾಘನೀಯವಾಗಿದೆ. ಇದರಿಂದ ಅಪಘಾತಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದ್ದು, ಜನರ ಜೀವವು ಉಳಿಯಲಿದೆ. ಜೊತೆಗೆ ಗಾಯಾಳುಗಳ ಸಂಖ್ಯೆಯಲ್ಲಿಯೂ ಇಳಿಮುಖವಾಗಲಿದೆ.

Article Published On: Friday, June 20, 2025, 16:00 [IST]
English summary
Abs mandatory for all new two wheelers from january 1 2026 details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+