Affordable bikes: ಭಾರತದ ಅತ್ಯಂತ ಕೈಗೆಟುಕುವ ಬೈಕ್‌ಗಳು: ಆನ್ ರೋಡ್ ಬೆಲೆ, EMI ವಿವರಗಳು...
ಮಧ್ಯಮ ವರ್ಗದ ಕುಟುಂಬಗಳಿಗೆ ಬೈಕುಗಳು ಅತ್ಯಗತ್ಯ ವಾಹನಗಳಾಗಿವೆ. ಖರೀದಿದಾರರು ಕೇವಲ ಕೈಗೆಟುಕುವಿಕೆಯನ್ನು ಮಾತ್ರವಲ್ಲ, ವಿಶ್ವಾಸಾರ್ಹತೆ, ಮೈಲೇಜ್ ಮತ್ತು ದೀರ್ಘಕಾಲೀನ ಮೌಲ್ಯವನ್ನು ಸಹ ಬಯಸುತ್ತಾರೆ. ಇಂತಹ ಗ್ರಾಹಕರಿಗಾಗಿಯೇ ಹೀರೋ, ಟಿವಿಎಸ್, ಹೋಂಡಾ, ಬಜಾಜ್ ನಂತಹ ಪ್ರಮುಖ ದ್ವಿಚಕ್ರ ವಾಹನ ತಯಾರಕರು ಹಲವು ಬಜೆಟ್ ಬೈಕ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ್ದಾರೆ. ಮಿತವ್ಯಯದ ಮತ್ತು ವಿಶ್ವಾಸಾರ್ಹ ಬೈಕುಗಳನ್ನು ಗಮನಾರ್ಹವಾಗಿ ಕಡಿಮೆ ಬೆಲೆಗೆ ನೀಡುತ್ತಿದ್ದಾರೆ. ಸದ್ಯ ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe)
ಹೀರೋ ಹೆಚ್ ಎಫ್ ಡೀಲಕ್ಸ್ ಬೈಕ್ ಬೆಂಗಳೂರಿನಲ್ಲಿ ಆರಂಭಿಕ ಆನ್ ರೋಡ್ ಬೆಲೆಯು ರೂ.65,626ಗಳಾಗಿದೆ. 10 ವೆರಿಯೆಂಟ್‌ಗಳನ್ನು ಹೊಂದಿದ್ದು, 8 ಬಣ್ಣಗಳಲ್ಲಿ ಸಿಗಲಿದೆ. ಟಾಪ್ ಎಂಡ್ ವೇರಿಯೆಂಟ್ ಆನ್ ರೋಡ್ ಬೆಲೆಯು ರೂ.90,027ಗಳಾಗಿದೆ. ಬೆಂಗಳೂರಿನಲ್ಲಿ ರೂ. 2,251 ರಿಂದ ಪ್ರಾರಂಭವಾಗುವ ಇಎಂಐ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ಬಜಾಜ್ ಪ್ಲಾಟಿನಾ 100 (Bajaj Platina 100)
ಬಜಾಜ್ ಪ್ಲಾಟಿನಾ 100 ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೈಕುಗಳಲ್ಲಿ ಒಂದಾಗಿದೆ. ಬೆಂಗಳೂರಿನಲ್ಲಿ ಬಜಾಜ್ ಪ್ಲಾಟಿನಾ 100 ಬೈಕಿನ ಆನ್ ರೋಡ್ ಬೆಲೆ ರೂ.86,600ಗಳಾಗಿದೆ. ಪ್ಲಾಟಿನಾ 100 ಪ್ರಸ್ತುತ 1 ವೆರಿಯೆಂಟ್ ಹೊಂದಿದ್ದು, 4 ಬಣ್ಣಗಳಲ್ಲಿ ಸಿಗಲಿದೆ. ಪ್ಲಾಟಿನಾ 100 ಬೆಂಗಳೂರಿನಲ್ಲಿ 2,971 ರೂ.ಗಳಿಂದ ಪ್ರಾರಂಭವಾಗುವ ಇಎಂಐ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.
ಟಿವಿಎಸ್ ಸ್ಪೋರ್ಟ್ (TVS Sport)
ಬೆಂಗಳೂರಿನಲ್ಲಿ ಟಿವಿಎಸ್ ಸ್ಪೋರ್ಟ್ ಆನ್ ರೋಡ್ ಬೆಲೆ 85,223 ರೂ. ಇದೆ. ಸ್ಪೋರ್ಟ್ ಪ್ರಸ್ತುತ 2 ಆವೃತ್ತಿಗಳನ್ನು ಹೊಂದಿದ್ದು, 10 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಟಾಪ್ ವೇರಿಯೆಂಟ್ ಬೆಲೆಯು ರೂ.88,059ಗಳಾಗಿದೆ. ಬೆಂಗಳೂರಿನಲ್ಲಿ ರೂ. 2,924 ರಿಂದ ಪ್ರಾರಂಭವಾಗುವ ಇಎಂಐ ಆಯ್ಕೆಯೊಂದಿಗೆ ಖರೀದಗೆ ಲಭ್ಯವಿದೆ.

ಬಜಾಜ್ ಸಿಟಿ 110ಎಕ್ಸ್ (Bajaj CT110X)
ಬೆಂಗಳೂರಿನಲ್ಲಿ ಬಜಾಜ್ ಸಿಟಿX 110 ಬೈಕಿನ ಆನ್ ರೋಡ್ ಬೆಲೆಯು ರೂ.92,456ಗಳಾಗಿದೆ. ಸಿಟಿX 110 ಪ್ರಸ್ತುತ 1 ವೆರಿಯೆಂಟ್ ಹೊಂದಿದ್ದು, 10 ಬಣ್ಣಗಳಲ್ಲಿ ಲಭ್ಯವಿದೆ. ಸಿಟಿ 110 ಬೆಂಗಳೂರಿನಲ್ಲಿ 3,172 ರೂ.ಗಳಿಂದ ಪ್ರಾರಂಭವಾಗುವ ಇಎಂಐ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.
ಹೋಂಡಾ ಶೈನ್ 100 (Honda Shine 100)
ಬೆಂಗಳೂರಿನಲ್ಲಿ ಹೋಂಡಾ ಶೈನ್ 100 ಬೈಕಿನ ಆನ್ ರೋಡ್ ಬೆಲೆಯು ರೂ.89,767ಗಳಾಗಿದೆ. ಶೈನ್ 100 ಪ್ರಸ್ತುತ 1 ವೇರಿಯೆಂಟ್ ಮತ್ತು 5 ಬಣ್ಣಗಳಲ್ಲಿ ಲಭ್ಯವಿದೆ. ಶೈನ್ 100 ಬೆಂಗಳೂರಿನಲ್ಲಿ 3,080 ರೂ.ಗಳಿಂದ ಪ್ರಾರಂಭವಾಗುವ ಇಎಂಐ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯು ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಮತ್ತು ವೆಚ್ಚ ಪ್ರಜ್ಞೆಯುಳ್ಳ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಬೈಕ್ ಕೊಳ್ಳುವವರಿಗೆ ಈ ಮೇಲಿನ ಆಯ್ಕೆಗಳು ಲಭ್ಯವಿದ್ದು, ಪ್ರತಿಯೊಂದು ಬೈಕ್ ಕೂಡ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. ನಿಮ್ಮ ಅಗತ್ಯತೆಗಳು ಮತ್ತು ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ನೀವು ಸೂಕ್ತವಾದ ಬೈಕ್ ಅನ್ನು ಆಯ್ಕೆ ಮಾಡಬಹುದು.
ಬಹುಬೇಡಿಕೆಯ ಹೀರೋ ಸ್ಪ್ಲೆಂಡರ್ ಕಳೆದ ಎರಡು ದಶಕಗಳಿಂದ ಮಾರುಕಟ್ಟೆಯನ್ನು ಆಳುತ್ತಿದೆ. ಇದು ಒಂದು ಕಾಲದಲ್ಲಿ ಕೈಗೆಟುಕುವ ಬೆಲೆಯಲ್ಲಿ ಮುಂಚೂಣಿಯಲ್ಲಿತ್ತು, ಆದರೆ ಈಗ ಅಗ್ಗದ ಮಾದರಿಗಳಿಂದ ಹಿಂದಿಕ್ಕಲ್ಪಟ್ಟಿದೆ. ಸದ್ಯ ಈ ಬೈಕ್ ಅನ್ನು ಹಿಂದಿಕ್ಕುವಂತಹ ಮಿತವ್ಯಯದ ಮತ್ತು ವಿಶ್ವಾಸಾರ್ಹತೆಯನ್ನು ನೀಡುವ ಬೈಕುಗಳನ್ನು ನಿಮಗೆ ತಿಳಿಸಿದ್ದೇವೆ.


Click it and Unblock the Notifications