ಯುವಕರ ಹಾಟ್-ಫೇವರೆಟ್ ಕವಾಸಕಿ ವರ್ಸಿಸ್ X-300 ಅಡ್ವೆಂಚರ್ ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಕವಾಸಕಿ, ತನ್ನ ವರ್ಸಿಸ್-ಎಕ್ಸ್ 300 (Kawasaki Versys X-300) ಬೈಕ್ ಅನ್ನು ಭಾರತದಲ್ಲಿ ಸಣ್ಣ ಸಾಮರ್ಥ್ಯದ ಅಡ್ವೆಂಚರ್ ಸೆಗ್ಮೆಂಟಿನಲ್ಲಿ ಬಿಡುಗಡೆ ಮಾಡಲಾಗಿದೆ. ಎಂಟ್ರಿ ಲೆವೆಲ್ ಅಡ್ವೆಂಚರ್ ಟೂರಿಂಗ್ ಸೆಗ್ಮೆಂಟಿನಲ್ಲಿ ಪ್ರೀಮಿಯಂ ಟಚ್ ನೀಡುವ ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.3.80 ಲಕ್ಷಗಳಾಗಿದೆ. ವರ್ಸಿಸ್-ಎಕ್ಸ್ 300 ತನ್ನ ದೊಡ್ಡ ವರ್ಸಿಸ್ ಮಾಡಲ್‌ ಡಿಸೈನ್‌ ಹೊಂದಿದ್ದರೂ, ಇದು ಕವಾಸಕಿಯ ಟ್ವಿನ್ ಪರ್ಫಾಮೆನ್ಸ್ ಮತ್ತು ತೀಕ್ಷ್ಣವಾದ ವಿನ್ಯಾಸವನ್ನು ಹೊಂದಿದೆ.

ವರ್ಸಿಸ್ ಬಗ್ಗೆ: 19 ವರ್ಷಗಳಿಗೂ ಹೆಚ್ಚು ಕಾಲ, ವರ್ಸಿಸ್ ಬ್ರ್ಯಾಂಡ್ ಅಡ್ವೆಂಚರ್ ಪ್ರವಾಸದ ಮೋಟಾರ್ ಸೈಕಲ್‌ಗಳನ್ನು ನೀಡುವ ಮೂಲಕ ಜಾಗತಿಕವಾಗಿ ವಿಶ್ವಾಸವನ್ನು ಗಳಿಸಿದೆ. ನಗರ ಪ್ರಯಾಣ ಮತ್ತು ದೀರ್ಘ-ದೂರ ಪ್ರವಾಸ ಎರಡರಲ್ಲೂ ಶ್ರೇಷ್ಠತೆಯನ್ನು ಸಾಧಿಸಲು ವಿನ್ಯಾಸಗೊಳಿಸಲಾದ ಈ ಮೋಟಾರ್‌ಸೈಕಲ್‌ಗಳು ಟೂರಿಂಗ್ ಬೈಕ್‌ನ ಸೌಕರ್ಯ, ಸ್ಪೋರ್ಟ್ ಬೈಕ್‌ನ ಚುರುಕುತನ ಮತ್ತು ಕಾರ್ಯಕ್ಷಮತೆಯೊಂದಿಗೆ ಬರುತ್ತವೆ.

all-new-kawasaki-versys-x-300-launched

ವರ್ಸಿಸ್ 650 ಮತ್ತು ವರ್ಸಿಸ್ 1100 ನಂತಹ ಮಾದರಿಗಳನ್ನು ಇತ್ತೀಚೆಗೆ ಬಿಡುಗಡೆ ಮಾಡುವ ಮೂಲಕ ಕವಾಸಕಿ ನೈಜ ಜಗತ್ತಿನ ರಸ್ತೆಗಳನ್ನು ಆತ್ಮವಿಶ್ವಾಸದಿಂದ ವಶಪಡಿಸಿಕೊಳ್ಳಲು ಈ ಮೋಟಾರ್‌ಸೈಕಲ್‌ಗಳನ್ನು ನಿರ್ಮಿಸಿದೆ. ಇದೀಗ ಭಾರತೀಯ ರಸ್ತೆಗಳಿಗಾಗಿ ವರ್ಸಿಸ್-ಎಕ್ಸ್ 300 ಈ ಪರಂಪರೆಯನ್ನು ಮುಂದುವರಿಸಲು ಸಜ್ಜಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ವರ್ಸಿಸ್ ಎಕ್ಸ್-300 ವಿಶೇಷತೆಗಳು: ಬೈಕ್ 300 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 11,500 ಆರ್‌ಪಿಎಂನಲ್ಲಿ 38.5 ಬಿಹೆಚ್ ಪವರ್ ಮತ್ತು 10,000 ಆರ್‌ಪಿಎಂನಲ್ಲಿ 26.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಅಳವಡಿಸಲಾಗಿದ್ದು, ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ನೀಡಲಾಗಿದೆ.

all-new-kawasaki-versys-x-300-launched

ವರ್ಸಿಸ್-ಎಕ್ಸ್ 300 ಬೈಕ್ 19 ಇಂಚಿನ ಮುಂಭಾಗ ಮತ್ತು 17 ಇಂಚಿನ ಹಿಂಭಾಗದ ವೈರ್-ಸ್ಪೋಕ್ ವ್ಹೀಲ್ ಗಳನ್ನು ಹೊಂದಿದೆ. ಈ ಬೈಕ್ 184 ಕೆ.ಜಿ ತೂಕ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ದೀರ್ಘ-ಪ್ರಯಾಣದ ಸಸ್ಪೆನ್ಷನ್ ಮತ್ತು ದೃಢವಾದ ಬೆನ್ನೆಲುಬು ಚೌಕಟ್ಟಿನೊಂದಿಗೆ ಸಜ್ಜುಗೊಂಡಿರುವ ವರ್ಸಿಸ್-ಎಕ್ಸ್ 300 ಸವಾರರಿಗೆ ರೋಮಾಂಚಕ ಅನುಭವವನ್ನು ನೀಡುತ್ತದೆ.

ಹೊಸ ವರ್ಸಿಸ್-ಎಕ್ಸ್ 300 ಅನ್ನು ದೈನಂದಿನ ಬಳಕೆಯ ಸುಲಭತೆ ಮತ್ತು ವೈಯಕ್ತಿಕ ಪ್ರವಾಸದ ಅಗತ್ಯಗಳ ಆಧಾರದ ಮೇಲೆ ಕಸ್ಟಮೈಸ್ ಮಾಡಬಹುದಾದ ಡಿಸೈನ್‌ನೊಂದಿಗೆ ನಿರ್ಮಿಸಲಾಗಿದೆ. ಸವಾರರು ಐಚ್ಛಿಕವಾಗಿ ಪ್ಯಾನಿಯರ್‌ಗಳು, ಫಾಗ್ ಲ್ಯಾಂಪ್‌ಗಳು, ಹ್ಯಾಂಡ್ ಗಾರ್ಡ್‌ಗಳು ಅಥವಾ ಸೆಂಟರ್ ಸ್ಟ್ಯಾಂಡ್‌ನಂತಹ ಒರಿಜಿನಲ್ ಟೂಲ್‌ಗಳನ್ನು ಪ್ರವಾಸದ ಸಾಮರ್ಥ್ಯವನ್ನು ಹೆಚ್ಚಿಸಲು ಸಜ್ಜುಗೊಳಿಸಬಹುದು.

all-new-kawasaki-versys-x-300-launched

ವರ್ಸಿಸ್-ಎಕ್ಸ್ 300 "ಮೆಟಾಲಿಕ್ ಓಷನ್ ಬ್ಲೂ / ಪರ್ಲ್ ರೋಬೋಟಿಕ್ ವೈಟ್ ಮತ್ತು ಕ್ಯಾಂಡಿ ಲೈಮ್ ಗ್ರೀನ್ / ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್" ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಬೆಲೆ ರೂ. 3,79,900/- (ಎಕ್ಸ್-ಶೋರೂಮ್) ನಿಂದ ಪ್ರಾರಂಭವಾಗುತ್ತದೆ. ಇದರ ಹಗುರವಾದ ತೂಕವು ಸವಾರರಿಗೆ ಎಂತಹ ರಸ್ತೆಗಳಲ್ಲಿಯೂ ಓಡಿಸಲು ಅನುವುಮಾಡಿಕೊಡುತ್ತದೆ.

ನಗರದ ಬೀದಿಗಳಿಂದ ಜಲ್ಲಿಕಲ್ಲು ಮಾರ್ಗಗಳವರೆಗೆ ಯಾವುದೇ ರಸ್ತೆಯಲ್ಲಿ ಸೌಕರ್ಯ ಮತ್ತು ವಿಶ್ವಾಸವನ್ನು ನೀಡಲು ವರ್ಸಿಸ್-ಎಕ್ಸ್ 300 ಅನ್ನು ನಿರ್ಮಿಸಲಾಗಿದೆ. ವರ್ಸಿಸ್-ಎಕ್ಸ್ 300 ಬಹುಮುಖ, ಸವಾರ-ಸ್ನೇಹಿ ಮಾದರಿಯಾಗಿದ್ದು, ಇದು ಕವಾಸಕಿಯ ಅಡ್ವೆಂಚರ್ ಡಿಎನ್‌ಎಯನ್ನು ಹೊಂದುವ ಮೂಲಕ ಭಾರತದಲ್ಲಿ ಖರೀದಿಸಬಹುದಾದ ಪ್ಯಾಕೇಜ್‌ಗೆ ದೊರೆಯುತ್ತಿದೆ ಎಂದು ಕಂಪನಿ ಹೇಳಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 22, 2025, 17:37 [IST]
English summary
All new kawasaki versys x 300 launched
Read more on kawasaki new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+