AlphaVector: ಹೊಸ ವೊಲ್ವೆರಿನ್ X 27.5T ಇ-ಬೈಕ್ ಬಿಡುಗಡೆ: ಅಗ್ಗದ ಬೆಲೆ, 5 ವರ್ಷ ವಾರೆಂಟಿ!

ಆಲ್ಫಾವೆಕ್ಟರ್ಸ್ (AlphaVector) ಪ್ರೈವೇಟ್ ಲಿಮಿಟೆಡ್ ಬ್ರ್ಯಾಂಡ್, ತನ್ನ ಅತ್ಯಾಧುನಿಕ ತಂತ್ರಜ್ಞಾನ, ಉನ್ನತ ವಿನ್ಯಾಸದೊಂದಿಗೆ ವೊಲ್ವೆರಿನ್ X 27.5T (Wolverine X 27.5T) ಸಿಂಗಲ್-ಸ್ಪೀಡ್ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡಿದೆ. ನಗರ ಪ್ರಯಾಣಿಕರು, ಅಡ್ವೆಂಚರ್ ಅನ್ವೇಷಕರು ಮತ್ತು ಪರಿಸರ ಪ್ರಜ್ಞೆಯ ಸವಾರರಿಗಾಗಿ ಹೊಸ ಇ-ಸೈಕಲ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಸುಧಾರಿತ ವೈಶಿಷ್ಟ್ಯಗಳೊಂದಿಗೆ ನಿರ್ಮಾಣಗೊಂಡಿರುವ ವೊಲ್ವೆರಿನ್ X 27.5T ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪರಿಸರ ಪ್ರೇಮಿಗಳಿಗಳಿಗೆ ಆಲ್ಫಾವೆಕ್ಟರ್ಸ್ ಕಂಪನಿ ಭರವಸೆ ನೀಡಿದೆ.

ವೊಲ್ವೆರಿನ್ X 27.5T ವಿಶೇತೆಗಳು: ಈ ಎಲೆಕ್ಟ್ರಿಕ್ ಬೈಸಿಕಲ್ ಬ್ಯಾಟರಿ ಮತ್ತು ರೇಂಜ್ ಬಗ್ಗೆ ಮಾತನಾಡುವುದಾದ್ರೆ, ದೃಢವಾದ 7.8Ah ಲಿಥಿಯಂ ಐಯಾನ್ ಬ್ಯಾಟರಿಯೊಂದಿಗೆ ಸಜ್ಜುಗೊಂಡಿರುವ ಈ ಸೈಕಲ್, ಪೆಡಲ್ ಅಸಿಸ್ಟ್‌ನಲ್ಲಿ 40+ ಕಿ.ಮೀ ಮತ್ತು ಥ್ರೊಟಲ್ ಮೋಡ್‌ನಲ್ಲಿ 25+ ಕಿ.ಮೀ ಪ್ರಭಾವಶಾಲಿ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.

alphavector-91-cycles-introduces-wolverine-x-27-5t-single-speed-electric-cycle

ವರ್ಧಿತ ಸುರಕ್ಷತೆ & ಪವರ್‌ಫುಲ್ ಮೋಟಾರ್: ಹೆಚ್ಚಿನ ಟಾರ್ಕ್, ಜಲನಿರೋಧಕ (Waterproof) 36V 250W ಮೋಟಾರ್‌ನಿಂದ ಚಾಲಿತವಾಗಿದ್ದು, ಸುಗಮ ಮತ್ತು ವಿಶ್ವಾಸಾರ್ಹ ಸವಾರಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಆಟೋಮ್ಯಾಟಿಕ್ ಕಟ್-ಆಫ್‌ಗಾಗಿ ಇ-ಬ್ರೇಕ್ ಸಿಸ್ಟಮ್‌ನೊಂದಿಗೆ ಮುಂಭಾಗ ಮತ್ತು ಹಿಂಭಾಗದ ಮೆಕ್ಯಾನಿಕಲ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ, ಇದು ಸವಾರರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ಸವಾರಿ ಸೌಕರ್ಯ & ಸ್ಮಾರ್ಟ್ ಡಿಸ್ಪ್ಲೇ: ಸಾಟಿಯಿಲ್ಲದ ಸವಾರಿ ಅನುಭವಕ್ಕಾಗಿ 91 ಟಫ್ ಶಾಕ್ಸ್ ಸಸ್ಪೆನ್ಷನ್ ಫೋರ್ಕ್‌ಗಳು ಮತ್ತು 27.5" x 2.1" ಹೈ-ಟ್ರಾಕ್ಷನ್ ನೈಲಾನ್ ಟೈರ್‌ಗಳನ್ನು ಒಳಗೊಂಡಿದೆ. ಬ್ಯಾಟರಿ ಸ್ಥಿತಿ ಮತ್ತು ಪೆಡಲ್ ಅಸಿಸ್ಟ್ ಮಟ್ಟವನ್ನು ಪ್ರದರ್ಶಿಸುವ LCD ಡಿಸ್ಪ್ಲೇ (IP66 ರೇಟಿಂಗ್) ನೊಂದಿಗೆ ಬರುತ್ತದೆ, ಇದು ಸವಾರರು ಒಂದು ನೋಟದಲ್ಲಿ ಮಾಹಿತಿ ಪಡೆಯಲು ಅನುವು ಮಾಡಿಕೊಡುತ್ತದೆ.

ಬೆಲೆ: ಹೊಸ ವೊಲ್ವೆರಿನ್ X 27.5T ಎಲೆಕ್ಟ್ರಿಕ್ ಸೈಕಲ್ ಭಾರತದಲ್ಲಿ ರೂ. 24,999 ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. GST ಸೇರಿದಂತೆ ರೂ. 29,999 ದರದಲ್ಲಿ ಶೇ17 ರಿಯಾಯಿತಿಯನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಅಧಿಕೃತ ವೆಬ್‌ಸೈಟ್: Outdoors91.com ನಿಂದ ನೇರವಾಗಿ ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ.

ಹೊಸ ವೊಲ್ವೆರಿನ್ X 27.5T ಎಲೆಕ್ಟ್ರಿಕ್ ಸೈಕಲ್ ಬ್ಯಾಟರಿ ಮೇಲೆ 2 ವರ್ಷಗಳು, ಮೋಟಾರ್‌ಗೆ 1 ವರ್ಷ, ಫ್ರೇಮ್‌ಗೆ 5 ವರ್ಷಗಳು ಮತ್ತು ಎಲೆಕ್ಟ್ರಿಕ್ ಯೂನಿಟ್‌ಗಳಿಗೆ 6 ತಿಂಗಳುಗಳು ಸೇರಿದಂತೆ ಸಮಗ್ರ ಖಾತರಿ ಪ್ಯಾಕೇಜ್‌ನೊಂದಿಗೆ ಬರುತ್ತದೆ. ಇದು ಗ್ರಾಹಕರಿಗೆ ಯಾವುದೇ ಆತಂಕವಿಲ್ಲದೆ ದೀರ್ಘಾವಧಿಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ ಎಂದು ಕಂಪನಿ ತಿಳಿಸಿದೆ.

ವೊಲ್ವೆರಿನ್ X 27.5T ನಗರ ಪ್ರಯಾಣಿಕರು, ಅಡ್ವೆಂಚರ್ ಪ್ರಿಯರು ಮತ್ತು ಫಿಟ್‌ನೆಸ್ ಉತ್ಸಾಹಿಗಳಿಗೆ ಬೆಸ್ಟ್ ಆಯ್ಕೆಯಾಗಿದ್ದು, ಅನುಕೂಲವನ್ನು ಸವಾರಿ ನೀಡಡುತ್ತದೆ. ಇದರ ಬಹು ಸವಾರಿ ವಿಧಾನಗಳು, ಉತ್ತಮ ವಿನ್ಯಾಸ ಮತ್ತು ಪರಿಸರ ಸ್ನೇಹಿ ವಿಧಾನವು ಪರಿಸರಕ್ಕೆ ಮಾಲಿನ್ಯ ಮುಕ್ತ ಕೊಡುಗೆ ನೀಡುತ್ತದೆ. ಸೈಕ್ಲಿಂಗ್ ಅನುಭವವನ್ನು ಉನ್ನತೀಕರಿಸಲು ಬಯಸುವವರಿಗೆ ಸೂಕ್ತ ಆಯ್ಕೆಯಾಗಿದೆ ಎಂದು ಕಂಪನಿ ಭರವಸೆ ನೀಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, January 17, 2025, 10:29 [IST]
English summary
Alphavector 91 cycles introduces wolverine x 27 5t single speed electric cycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+