ಮೊನ್ನೆಯಷ್ಟೆ ಬಿಡುಗಡೆಯಾದ ಹೊಸ ರಿವರ್ಸ್ ಗೇರ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು!
'ಆಂಪಿಯರ್ ಮ್ಯಾಗ್ನಸ್ ನಿಯೋ' (Ampere Magnus Neo) ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊನ್ನೆಯಷ್ಟೆ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಬಿಡುಗಡೆ ಮಾಡಿದೆ. ಈ ಹೊಸ ಇವಿ ಸ್ಕೂಟರ್ ರೂ. 79,999 (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ಹೊಸ ಮ್ಯಾಗ್ನಸ್ ನಿಯೋವನ್ನು ಪರಿಸರ ಸ್ನೇಹಿ, ಸೊಗಸಾದ ಮತ್ತು ಎಲ್ಲರಿಗೂ ಕೈಗೆಟುಕುವಂತೆ ಮಾಡಲು ವಿನ್ಯಾಸಗೊಳಿಸಲಾಗಿದ್ದು, ಹಣ ಉಳಿತಾಯಕ್ಕೆ ಈ ಸ್ಕೂಟರ್ ಬೆಸ್ಟ್ ಆಯ್ಕೆಯಾಗಿದೆ ಎಂದು ಕಂಪನಿ ಭರವಸೆ ನೀಡಿದೆ.
ಹೊಸ ಆಂಪಿಯರ್ ಮ್ಯಾಗ್ನಸ್ ನಿಯೋ ಇವಿ ಸ್ಕೂಟರ್ ಮೇಲೆ 5 ವರ್ಷಗಳು ಅಥವಾ 75,000 ಕಿ.ಮೀ.ಗಳ ಬ್ಯಾಟರಿ ವಾರೆಂಟಿ (ಯಾವುದು ಮೊದಲೋ ಅದು) ನೀಡಲಾಗಿದೆ. ಪ್ರೀಮಿಯಂ ಡ್ಯುಯಲ್ - ಟೋನ್ ಫಿನಿಶ್‌ನೊಂದಿಗೆ ಮೆಟಾಲಿಕ್ ರೆಡ್, ಗ್ಲೇಶಿಯಲ್ ವೈಟ್, ಓಷನ್ ಬ್ಲೂ, ಗ್ಯಾಲಕ್ಟಿಕ್ ಗ್ರೇ ಮತ್ತು ಗ್ಲಾಸಿ ಬ್ಲ್ಯಾಕ್ ಎಂಬ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಿಸಲಾಗಿದೆ.

ಅತ್ಯಾಧುನಿಕ ಬ್ಯಾಟರಿ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಮೊಬೈಲ್ ಚಾರ್ಜಿಂಗ್‌ಗಾಗಿ USB ಚಾರ್ಜಿಂಗ್ ಪೋರ್ಟ್ ಸಹ ನೀಡಲಾಗಿದೆ. ಜೊತೆಗೆ ಕುಟುಂಬ ಸವಾರರಿಗೆ ಸ್ಮಾರ್ಟ್ ಮತ್ತು ಕಂಫರ್ಟ್ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಸುಲಭ ಕುಶಲತೆಗಾಗಿ ರಿವರ್ಸ್ ಮೋಡ್‌ನೊಂದಿಗೆ 3 ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.
ಮ್ಯಾಗ್ನಸ್ ನಿಯೋ ಎಲೆಕ್ಟ್ರಿಕ್ ಸ್ಕೂಟರ್ ಇದೇ ತಿಂಗಳಿನಿಂದ ದೇಶಾದ್ಯಂತ ಆಂಪಿಯರ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಗ್ರಾಹಕರು ವರ್ಧಿತ ಮಟ್ಟದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖುಷಿಯಿಂದ ಖರೀದಿಸಬಹುದು, ಚುರುಕಾದ, ಹೆಚ್ಚು ಸುಸ್ಥಿರ ಪ್ರಯಾಣಕ್ಕಾಗಿ ಹೊಸ ಮ್ಯಾಗ್ನಸ್ ನಿಯೋ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬಹುದಾಗಿದೆ ಎಂದು ಬ್ರಾಂಡ್ ಹೇಳಿದೆ.
ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಸಿಇಒ ಕುನ್ನಕವಿಲ್ ವಿಜಯ ಕುಮಾರ್ ಮಾತನಾಡಿ, ಈ ಹೊಸ ಸ್ಕೂಟರ್ ನಮ್ಮ ಗ್ರಾಹಕರ ಬದಲಾಗುತ್ತಿರುವ ಬೇಡಿಕೆಗಳನ್ನು ಪೂರೈಸಲಿದೆ. ಭವಿಷ್ಯಕ್ಕೆ ಕೊಡುಗೆ ನೀಡುವ ಪರಿಸರ ಸ್ನೇಹಿ ಸಾರಿಗೆ ಆಯ್ಕೆಗಳನ್ನು ಗೆಲ್ಲಲು ಇದನ್ನು ರಚಿಸಲಾಗಿದೆ. ನಮ್ಮ ಮ್ಯಾಗ್ನಸ್ ಇಎಕ್ಸ್‌ನ ಯಶಸ್ಸಿನ ಮೇಲೆ ನಿರ್ಮಿಸಲಾದ ಮ್ಯಾಗ್ನಸ್ ನಿಯೋ ದೈನಂದಿನ ಪ್ರಯಾಣಿಕರಿಗೆ ವರ್ಧಿತ ವೈಶಿಷ್ಟ್ಯಳು, ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.
ಸುಧಾರಿತ LFP (ಲಿಥಿಯಂ ಐರನ್ ಫಾಸ್ಫೇಟ್) ಬ್ಯಾಟರಿಯೊಂದಿಗೆ ಸಜ್ಜುಗೊಂಡಿರುವ ಮ್ಯಾಗ್ನಸ್ ನಿಯೋವನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 100 ಕ್ಕೂ ಹೆಚ್ಚು ಕಿ.ಮೀ. ಪ್ರಯಾಣಿಸಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡಲು 5 ರಿಂದ 6 ಗಂಟೆಗಳ ಸಮಯ ಬೇಕಾಗುತ್ತದೆ. ಚಾರ್ಜಿಂಗ್ ಮಾಡುವಾಗ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
ಕಂಪನಿಯು ಮ್ಯಾಗ್ನಸ್ ಸಿರೀಸ್ ಪರಂಪರೆಯನ್ನು ಆಧರಿಸಿ ಹೊಸ ಮ್ಯಾಗ್ನಸ್ ನಿಯೋವನ್ನು ಪರಿಸರ ಸ್ನೇಹಿ, ಸೊಗಸಾದ ಮತ್ತು ಎಲ್ಲರಿಗೂ ಕೈಗೆಟುಕುವಂತೆ ಮಾಡಿದ್ದು, ಹೊಸ ಮ್ಯಾಗ್ನಸ್ ನಿಯೋ ಆಕರ್ಷಕ ಡಿಸೈನ್, ಹೆಚ್ಚಿನ ಪವರ್, ಸುರಕ್ಷತೆ ಮತ್ತು ಹಣ ತಕ್ಕ ಬೆಸ್ಟ್ ಮಾಡಲ್ ಆಗಿದೆ. ಹೇಗೂ ಮ್ಯಾಗ್ನಸ್ ನಿಯೋ ಇವಿ ಸ್ಕೂಟರ್ ಮೇಲೆ 5 ವರ್ಷ ವಾರೆಂಟಿ ಇರುವುದರಿಂದ ಇದನ್ನು ಕಣ್ಣುಮುಚ್ಚಿ ಖರೀದಿಸಬಹುದು.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








