ಕರ್ನಾಟಕ ರಾಜ್ಯೋತ್ಸವದಂದು ಎಥರ್ ಬಂಪರ್ ಫೀಚರ್ ಘೋಷಣೆ: ವಾಹನ ಮಾಲೀಕರೆ ರೆಡಿಯಾಗಿ!

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ, ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಎಥರ್ ಎನರ್ಜಿ, ತನ್ನ ಪ್ರಮುಖ ಫ್ಯಾಮಿಲಿ ಸ್ಕೂಟರ್ ಆಗಿರುವ 'ರಿಜ್ಟಾ'ದ ಡ್ಯಾಶ್‌ಬೋರ್ಡ್‌ನಲ್ಲಿ ಕನ್ನಡ ಭಾಷೆಯನ್ನು ಪರಿಚಯಿಸುತ್ತಿದೆ. ಈ ನವೀಕರಣವು ರಿಜ್ಟಾ Z ಮಾಲೀಕರು ತಮ್ಮ ಡ್ಯಾಶ್‌ಬೋರ್ಡ್ ಇಂಟರ್ಫೇಸ್ ಭಾಷೆಯನ್ನು ಕನ್ನಡಕ್ಕೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಇದು ಕನ್ನಡ ಮಾತನಾಡುವ ರಿಜ್ಟಾ ಮಾಲೀಕರಿಗೆ ತನ್ನ ಪ್ರಯಾಣ ಅನುಭವವನ್ನು ಇನ್ನಷ್ಟು ಅರ್ಥಗರ್ಭಿತ ಮತ್ತು ಸುಗಮಗೊಳಿಸುತ್ತದೆ. 1 ನವೆಂಬರ್ 2025 ರಿಂದ ಹಂತ ಹಂತವಾಗಿ ಓವರ್-ದಿ-ಏರ್ (OTA) ನವೀಕರಣವಾಗಿ ಮಾಡಲಾಗುತ್ತದೆ ಎಂದು ಕಂಪನಿ ಘೋಷಿಸಿದೆ.

ಜನರು ತಮ್ಮ ಸ್ಥಳೀಯ ಭಾಷೆಗಳಲ್ಲಿ ಡಿಜಿಟಲ್ ವಿಷಯಗಳನ್ನು ಬಳಸಲು ಬಯಸುತ್ತಾರೆ, ಏಕೆಂದರೆ ಅವರು ಯೋಚಿಸುವ ಮತ್ತು ಮಾತನಾಡುವ ಭಾಷೆಯಲ್ಲಿ ತಂತ್ರಜ್ಞಾನದೊಂದಿಗೆ ತೊಡಗಿಸಿಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ. ಇದನ್ನು ಗುರುತಿಸಿರುವ ಎಥರ್ ಕಂಪನಿಯು, ಸವಾರರು ತಮ್ಮ ಸ್ಕೂಟರ್‌ಗಳನ್ನು ಅವರು ಹೆಚ್ಚು ಆರಾಮದಾಯಕವಾದ ಭಾಷೆಯಲ್ಲಿ ಬಳಸಲು ನಮ್ಯತೆಯನ್ನು ನೀಡುವತ್ತ ಕೆಲಸ ಮಾಡುತ್ತಿದೆ.

ather-brings-kannada-to-rizta-z-dashboard-on-karnataka-rajyotsava

ಈ ವರ್ಷದ ಆರಂಭದಲ್ಲಿ, ರಿಜ್ಟಾಗಾಗಿ ಬಹು - ಭಾಷಾ ಡ್ಯಾಶ್‌ಬೋರ್ಡ್ ಇಂಟರ್ಫೇಸ್ ಅನ್ನು ಎಥರ್ ಘೋಷಿಸಿತ್ತು, ಇದು ಎಂಟು ಪ್ರಾದೇಶಿಕ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಇದರಲ್ಲಿ ಹಿಂದಿ, ಮರಾಠಿ, ಗುಜರಾತಿ, ಬಂಗಾಳಿ, ತಮಿಳು, ತೆಲುಗು, ಮಲಯಾಳಂ, ಮತ್ತು ಕನ್ನಡ ಭಾಷಗಳಿವೆ. ಈ ಬಿಡುಗಡೆಯು ಹಿಂದಿಯೊಂದಿಗೆ ಪ್ರಾರಂಭವಾಗಿದ್ದು, ಈಗ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಹಾಗೂ ಉಳಿದ ಭಾಷೆಗಳನ್ನು ಮುಂಬರುವ ತಿಂಗಳುಗಳಲ್ಲಿ ಪರಿಚಯಿಸಲಾಗುವುದು.

ಈ ಘೋಷಣೆಯ ಕುರಿತು ಮಾತನಾಡಿದ ಎಥರ್ ಎನರ್ಜಿಯ ಸಿಟಿಒ ಮತ್ತು ಸಹ-ಸಂಸ್ಥಾಪಕ ಸ್ವಪ್ನಿಲ್ ಜೈನ್, "ಕರ್ನಾಟಕವು ಆರಂಭದಿಂದಲೂ ನಮಗೆ ನೆಲೆಯಾಗಿದೆ. ಎಥರ್‌ನ ಹೆಚ್ಚಿನ ಭಾಗವನ್ನು ನಿರ್ಮಿಸಿದ್ದು ಇಲ್ಲಿಯೇ. ನಮ್ಮ ತಂಡಗಳು ಮತ್ತು ನಮ್ಮ ಆರಂಭಿಕ ಸಮುದಾಯ ಎಲ್ಲವೂ ಇಲ್ಲಿಂದಲೇ ಆರಂಭವಾಗಿದೆ. ಹಾಗಾಗಿ ಈಗ ನಮ್ಮ ಕನ್ನಡವನ್ನು ಪರಿಚಯಿಸಲು ಸಜ್ಜಾಗಿದ್ದೇವೆ.

ather-brings-kannada-to-rizta-z-dashboard-on-karnataka-rajyotsava

ಕನ್ನಡ ಸಂಸ್ಕೃತಿ ಮತ್ತು ಭಾಷೆ ಆಳವಾಗಿ ಬೇರೂರಿರುವ ರಾಜ್ಯದಲ್ಲಿ, ರಿಜ್ಟಾ Z ಡ್ಯಾಶ್‌ಬೋರ್ಡ್‌ಗೆ ಕನ್ನಡವನ್ನು ಸೇರಿಸುವ ಮೂಲಕ ಅನುಭವವನ್ನು ಹೆಚ್ಚು ವೈಯಕ್ತಿಕ ಮತ್ತು ನಮ್ಮ ಸವಾರರಿಗೆ ಸುಲಭವಾಗಿ ಬಳಸುವಂತೆ ಮಾಡುವ ಗುರಿ ಹೊಂದಿದ್ದೇವೆ. ತಂತ್ರಜ್ಞಾನವು ದೈನಂದಿನ ಜೀವನದ ಭಾಗವಾಗುತ್ತಿದ್ದಂತೆ, ಅದು ಪರಿಚಿತ ಮತ್ತು ಬಳಸಲು ಸುಲಭವಾಗಿದೆ ಎಂದು ಭಾವಿಸಬೇಕು, ಈ ನವೀಕರಣವು ನಿಖರವಾಗಿ ಅದೇ ಗುರಿಯನ್ನು ಹೊಂದಿದೆ" ಎಂದರು.

ಎಥರ್ ರಿಜ್ಟಾ ವಿಶೇಷತೆಗಳು: ಎಥರ್‌ನ ಮೊದಲ ಫ್ಯಾಮಿಲಿ ಸ್ಕೂಟರ್ ರಿಜ್ಟಾ, ಎರಡು ಮಾಡಲ್‌ಗಳಲ್ಲಿ ಮತ್ತು ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ: ರಿಜ್ಟಾ ಎಸ್ ಮತ್ತು ರಿಜ್ಟಾ ಝಡ್, ಎರಡೂ ವೇರಿಯೆಂಟ್‌ಗಳು ಕ್ರಮವಾಗಿ ಸಿಂಗಲ್‌ ಚಾರ್ಜ್‌ನಲ್ಲಿ 123 ಕಿ.ಮೀ ಮತ್ತು 159 ಕಿ.ಮೀ ಐಡಿಸಿ ರೇಂಜ್ ನೀಡುತ್ತವೆ. ರಿಜ್ಟಾ ದೊಡ್ಡದಾದ, ಆರಾಮದಾಯಕವಾದ ಆಸನವನ್ನು ಹೊಂದಿರುವುದು ಇದರ ಪ್ರಮುಖ ಹೈಲೆಟ್ ಆಗಿದೆ.

ather-brings-kannada-to-rizta-z-dashboard-on-karnataka-rajyotsava

ಹಾಗೆಯೇ ಸಾಕಷ್ಟು ಸರಕುಗಳನ್ನು ಸಾಗಿಸಲು 56 ಲೀಟರ್ ಸಂಗ್ರಹಣಾ ಸ್ಥಳವನ್ನು ನೀಡುತ್ತದೆ - ಇದರಲ್ಲಿ 34 ಲೀಟರ್ ಅಂಡರ್-ಸೀಟ್ ಸ್ಟೋರೇಜ್ ಮತ್ತು ಐಚ್ಛಿಕ 22 ಲೀಟರ್ ಫ್ರಂಕ್ ಆಕ್ಸೆಸರಿ ಸೇರಿವೆ. ಜೊತೆಗೆ ಎಥರ್ ರಿಜ್ಟಾ ಸವಾರರಿಗೆ ಸಾಕಷ್ಟು ಲೆಗ್‌ರೂಮ್ ಅನ್ನು ಒದಗಿಸುವ ವಿಶಾಲವಾದ ಫ್ಲೋರ್‌ಬೋರ್ಡ್ ಅನ್ನು ಸಹ ಹೊಂದಿದೆ. ಬಿಡುಗಡೆಯಾದಾಗಿನಿಂದ, ರಿಜ್ಟಾ ದೇಶಾದ್ಯಂತ ಈ ವರ್ಷದ ಜೂನ್‌ ವೇಳೆಗೆ ಮಾರಾಟವು 1 ಲಕ್ಷ ಯುನಿಟ್‌ಗಳನ್ನು ದಾಟಿದೆ.

ಹೆಚ್ಚುವರಿಯಾಗಿ, ರಿಜ್ಟಾ ಸ್ಕಿಡ್‌ಕಂಟ್ರೋಲ್, ಲೈವ್ ಲೊಕೇಶನ್ ಶೇರಿಂಗ್, ಪಿಂಗ್ ಮೈ ಸ್ಕೂಟರ್ (ರಿಜ್ಟಾ ಝಡ್‌ನಲ್ಲಿ ಮಾತ್ರ ಲಭ್ಯ) ಹಾಗೂ ಫಾಲ್ ಸೇಫ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ಇಎಸ್‌ಎಸ್) ಮತ್ತು ಟೋ & ಥೆಫ್ಟ್ ಎಚ್ಚರಿಕೆಗಳಂತಹ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಎಥರ್ ಕಮ್ಯುನಿಟಿ ಡೇ 2025 ರಲ್ಲಿ, ಎಥರ್ ಟಚ್‌ಸ್ಕ್ರೀನ್ ಕಾರ್ಯಕ್ಷಮತೆಯೊಂದಿಗೆ ರಿಜ್ಟಾ ಝಡ್‌ಗಾಗಿ ಪ್ರಮುಖ ಅಪ್‌ಗ್ರೇಡ್ ಅನ್ನು ಸಹ ಘೋಷಿಸಿದೆ.

More from DriveSpark

Article Published On: Friday, October 31, 2025, 16:32 [IST]
English summary
Ather brings kannada to rizta z dashboard on karnataka rajyotsava
Read more on ather energy india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+