Ather: ಬೆಂಗಳೂರಿನ ಎಥರ್‌ನಿಂದ ಗ್ರಾಹಕರಿಗೆ ಶಾಕ್.. ಯಾಕೆ?

ಭಾರತದ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ತಯಾರಕ ಕಂಪನಿಯಾಗಿ, ಎಥರ್ ಎನರ್ಜಿ (Ather Energy) ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ರಿಜ್ಟಾ ಹಾಗೂ 450 ಸೀರೀಸ್‌ನ ವಿವಿಧ ಇ-ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಖರೀದಿದಾರರು ಕೂಡ ಮನಸೊತ್ತಿದ್ದಾರೆ. ಇದೀಗ, ಸದ್ದಿಲ್ಲದೇ 'ಎಥರ್' ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

'ಎಥರ್ ಎನರ್ಜಿ' ಸೋಮವಾರ ತನ್ನೆಲ್ಲ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯನ್ನು ರೂ.3,000 ವರೆಗೆ ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ. ನೂತನ ದರಗಳು ಜನವರಿ 01, 2026 ರಿಂದ ಜಾರಿಗೆ ಬರಲಿವೆ. ವಿದೇಶಿ ವಿನಿಮಯ, ಕಚ್ಚಾ ವಸ್ತು ಹಾಗೂ ಎಲೆಕ್ಟ್ರಾನಿಕ್ಸ್ ಬಿಡಿ ಭಾಗಗಳ ವೆಚ್ಚವು ಅಧಿಕಗೊಂಡ ಹಿನ್ನೆಲೆ, ಬೆಲೆ ಏರಿಕೆಯಾಗಿದೆ ಕಂಪನಿಯು ಹೇಳಿದೆ.

Ather Electric Scooters Price Hike From 1 January 2026 Details

ಆದರೆ, ಈ ಡಿಸೆಂಬರ್ 31 ರವರೆಗೆ ಪ್ರಸ್ತುತವಿರುವ ದರಕ್ಕೆ ಹೊಸ 'ಎಥರ್' ಎಲೆಕ್ಟ್ರಿಕ್ ಸ್ಕೂಟರ್‌ಗಳು ಖರೀದಿಗೆ ಲಭ್ಯವಾಗಲಿವೆ. ಸದ್ಯ ಕಂಪನಿಯ 'ಎಲೆಕ್ಟ್ರಿಕ್ ಡಿಸೆಂಬರ್' ಆಫರ್ ಚಾಲ್ತಿಯಲ್ಲಿದ್ದು, ಆಯ್ದ ನಗರಗಳಲ್ಲಿ ರೂ. 20,000 ವರೆಗಿನ ಹಣಕಾಸು ಪ್ರಯೋಜನಗಳು ಸಿಗಲಿದೆ. ಇದು ಇನ್‌ಸ್ಟಂಟ್ ಕ್ರೆಡಿಟ್ ಕಾರ್ಡ್ ಇಎಂಐ ರಿಯಾಯಿತಿಗಳು ಹಾಗೂ ಬ್ಯಾಟರಿ ವಾರಂಟಿಯಂತಹ ವಿವಿಧ ಸೌಲಭ್ಯಗಳನ್ನು ಒಳಗೊಂಡಿದೆ.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ 'ಎಥರ್ ಎನರ್ಜಿ' ವಿದೇಶಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೇಪಾಳ ಹಾಗೂ ಶ್ರೀಲಂಕಾದಲ್ಲಿ ಹಲವು ಇ-ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಅದೇ ರೀತಿಯಲ್ಲಿ ಈ ವರ್ಷದ ಮೇನಲ್ಲಿ ಷೇರುಪೇಟೆಗೂ ಕಂಪನಿಯು ಪ್ರವೇಶಿಸಿದೆ. ಕೇವಲ 7 ತಿಂಗಳಲ್ಲಿ ಷೇರುಗಳ ಮೌಲ್ಯ ಶೇಕಡ 118%ಗೆ ಹೆಚ್ಚಳಗೊಂಡಿದೆ.

ಎಥರ್‌ಗೆ ವರವಾದ ನವೆಂಬರ್:

ಕಳೆದ ತಿಂಗಳು ಎಥರ್‌ ಎನರ್ಜಿಗೆ ಅದೃಷ್ಟದ ಬಾಗಿಲು ತೆರೆದಿದೆ. ದೇಶೀಯವಾಗಿ ಒಟ್ಟು 20,323 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸಿದೆ. ಈ ಮೂಲಕ ಶೇಕಡ 18% ಮಾರುಕಟ್ಟೆ ಪಾಲನ್ನು ಹೊಂದಿದ್ದು, ಮೂರನೇ ಸ್ಥಾನದಲ್ಲಿದೆ. ಟಿವಿಎಸ್ ಮೋಟಾರ್ (30,309 ಯುನಿಟ್) ಮೊದಲ ಸ್ಥಾನದಲ್ಲಿದ್ದರೆ, ಬಜಾಜ್ ಆಟೋ (25,526 ಯುನಿಟ್) ಎರಡನೇ ಸ್ಥಾನದಲ್ಲಿದೆ.

ಎಥರ್ ರಿಜ್ಟಾ (Ather Rizta) ಮಾರಾಟದಲ್ಲಿ ಹೊಸ ದಾಖಲೆ:

ಈಚೆಗೆ ನೂತನ 'ಎಥರ್ ರಿಜ್ಟಾ' ಇ-ಸ್ಕೂಟರ್‌ನ್ನು ಮಾರಾಟದಲ್ಲಿ ಹೊಸದೊಂದು ಇತಿಹಾಸ ಬರೆಯಲಾಗಿದೆ. ಇದನ್ನು ಮೊದಲ ಬಾರಿಗೆ 2024ರ ಏಪ್ರಿಲ್‌ನಲ್ಲಿ ಪರಿಚಯಿಸಲಾಯಿತು. ಈವರೆಗೆ, ಬರೀ 20 ತಿಂಗಳಲ್ಲಿ 2 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಮೊದಲು, ಇದೇ ವರ್ಷದ ಜೂನ್‌ವರೆಗೆ 1 ಲಕ್ಷ ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು.

'ಎಥರ್ ರಿಜ್ಟಾ' ವಿಶೇಷತೆಗಳೇನು:

ಇದು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಕನಿಷ್ಠ ರೂ.1.15 ಲಕ್ಷ ಮತ್ತು ಗರಿಷ್ಠ ರೂ.1.32 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ರಿಜ್ಟಾ ಎಸ್ ಮತ್ತು ರಿಜ್ಟಾ ಝಡ್ ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಸಿಯಾಚಿನ್ ವೈಟ್, ಡೆಕ್ಕನ್ ಗ್ರೇ, ಟೆರಾಕೋಟಾ ರೆಡ್ ಮತ್ತು ಪ್ಯಾಂಗೊಂಗ್ ಬ್ಲೂ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 150 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,285 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ 2.9 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 3.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ಗಳನ್ನು ತನ್ನದಾಗಿಸಿಕೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 123 ರಿಂದ 160 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 7-ಇಂಚಿನ ಎಲ್‌ಸಿಡಿ ಸ್ಕ್ರೀನ್ ಮತ್ತು ಮಲ್ಟಿ ಪರ್ಪಸ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್/ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

More from DriveSpark

Article Published On: Monday, December 22, 2025, 18:42 [IST]
English summary
Ather electric scooters price hike from 1 january 2026 details
Read more on ather energy india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+