Ather: ಎಥರ್ ಫ್ಯಾಮಿಲಿ ಸ್ಕೂಟರ್ ಬಿಡುಗಡೆ: ಅಗ್ಗದ ಬೆಲೆ, 159 ಕಿ.ಮೀ ರೇಂಜ್, ಗರಿಷ್ಟ ಸುರಕ್ಷತೆ!

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾದ ಎಥರ್ ಎನರ್ಜಿ, 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ಹೊಸ 'ರಿಜ್ಟಾ ಎಸ್‌' (Rizta S) ವೇರಿಯೆಂಟ್ ಬಿಡುಗಡೆ ಮಾಡಿದೆ. ಇತ್ತೀಚಿನ ಹೊಸ ಅಪ್‌ಡೇಟ್‌ನಿಂದಾಗಿ ಸ್ಕೂಟರ್ ಸಿಂಗಲ್ ಚಾರ್ಜ್‌ನಲ್ಲಿ 159 ಕಿ.ಮೀ IDC ರೇಂಜ್ ನೀಡುತ್ತದೆ. ಹೊಸ ಎಥರ್ ರಿಜ್ಟಾ ಸ್ಕೂಟರ್ ಸೌಕರ್ಯ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಲ್ಲಿ ರಾಜಿ ಮಾಡಿಕೊಳ್ಳದೆ, ಅಗ್ಗದ ಬೆಲೆಯಲ್ಲಿ ಹೆಚ್ಚಿನ ರೇಂಜ್ ಬಯಸುವ ದೈನಂದಿನ ಪ್ರಯಾಣಿಕರಿಗೆ ಸೂಕ್ತ ಆಯ್ಕೆಯಾಗಿದೆ ಎಂದು ಕಂಪನಿ ಹೇಳಿದೆ.

ರಿಜ್ಟಾ ಸ್ಕೂಟರ್ ಅನ್ನು 2024 ರಲ್ಲಿ ಫ್ಯಾಮಿಲಿ ಸ್ಕೂಟರ್ ಆಗಿ ಬಿಡುಗಡೆ ಮಾಡಲಾಯಿತು. ಇದನ್ನು ದೈನಂದಿನ ಬಳಕೆಯ ಸುಲಭತೆ ಮತ್ತು ಸುರಕ್ಷತೆಯ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ. ರಿಜ್ಟಾ ಈಗ ಎಥರ್‌ನ ಒಟ್ಟು ಮಾರಾಟದಲ್ಲಿ ಶೇ 60 ಕ್ಕಿಂತ ಹೆಚ್ಚು ಮಾರಾಟದ ಪಾಲನ್ನು ಹೊಂದಿದೆ. ಬಿಡುಗಡೆಯಾದ ಒಂದು ವರ್ಷದೊಳಗೆ 1ಲಕ್ಷ ಯುನಿಟ್‌ ವಾಹನಗಳನ್ನು ದಾಟಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ather-energy-introduced-rizta-s-its-offering-159-km-range

ಇದೀಗ ಪರಿಚಯಿಸಲಾದ ಹೊಸ 3.7kWh ವೇರಿಯೆಂಟ್, ರೇಂಜ್ ಮತ್ತು ಕೈಗೆಟುಕುವಿಕೆಯ ವಿಷಯದಲ್ಲಿ ಕುಟುಂಬಗಳಿಗೆ ಬೆಸ್ಟ್ ಆಯ್ಕೆಯಾಗಿ ನಿಲ್ಲಲಿದೆ. ಈ ಬಿಡುಗಡೆಯೊಂದಿಗೆ, ರಿಜ್ಟಾ ಲೈನ್‌ಅಪ್ ಈಗ ನಾಲ್ಕು ವೇರಿಯೆಂಟ್‌ಗಳನ್ನು ಹೊಂದಿದೆ. ಇದು EV ವಿಭಾಗದಲ್ಲಿ ಅತ್ಯಂತ ಅನುಕೂಲಕರ, ಸ್ಮಾರ್ಟ್ ಮತ್ತು ಸುರಕ್ಷಿತ ಸ್ಕೂಟರ್‌ಗಳಲ್ಲಿ ಒಂದಾಗಿ ಗುರ್ತಿಸಿಕೊಳ್ಳಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ವಿನ್ಯಾಸ ಮತ್ತು ನಿರ್ಮಾಣ ಗುಣಮಟ್ಟ

ವಿಶಾಲವಾದ 34-ಲೀಟರ್ ಅಂಡರ್‌ಸೀಟ್ ಸ್ಟೋರೇಜ್ ದೈನಂದಿನ ಅಗತ್ಯಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಫ್ರಂಕ್ ಸೇರ್ಪಡೆಯೊಂದಿಗೆ 22 ಲೀಟರ್‌ಗಳಷ್ಟು ವಿಸ್ತರಿಸಬಹುದಾಗಿದೆ. ರಿಜ್ಟಾ ತನ್ನ ಸ್ಕೂಟರ್ ವಿಭಾಗದಲ್ಲಿ ಅತಿ ದೊಡ್ಡ ಸೀಟ್ ಹೊಂದಿದೆ. ಇದು ಸಾಕಷ್ಟು ಸ್ಥಳಾವಕಾಶ ಮತ್ತು ಪ್ರಾಯೋಗಿಕ ಫ್ಲೋರ್‌ಬೋರ್ಡ್ ವಿನ್ಯಾಸವನ್ನು ಹೊಂದಿದ್ದು, ಸವಾರ ಮತ್ತು ಹಿಂಬದಿ ಸವಾರ ಇಬ್ಬರಿಗೂ ಆರಾಮದಾಯಕ ಸವಾರಿಯನ್ನು ನೀಡುತ್ತದೆ.

ather-energy-introduced-rizta-s-its-offering-159-km-range

ವಿಭಾಗದಲ್ಲಿ ಆಕರ್ಷಕ ಮೌಲ್ಯ

ಹೊಸ 3.7kWh ವೇರಿಯೆಂಟ್ ಅತ್ಯುತ್ತಮ ದರ್ಜೆಯ ಸುರಕ್ಷತೆ, ಅನುಕೂಲತೆ ಮತ್ತು ಕನೆಕ್ಟೆಡ್ ಫೀಚರ್ಸ್ ನೀಡುವ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಕೂಟರ್ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ನೀಡುವ 7 - ಇಂಚಿನ ಡೀಪ್‌ವ್ಯೂ ಡಿಸ್ಪ್ಲೇಯೊಂದಿಗೆ ಬರುತ್ತದೆ. ಅನುಕೂಲತೆ ಮತ್ತು ಸುರಕ್ಷತೆಗಾಗಿ, ಸ್ಕೂಟರ್ ಆಟೋಹೋಲ್ಡ್, ಫಾಲ್ ಸೇಫ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಟೋ & ಥೆಫ್ಟ್ ಅಲರ್ಟ್‌ಗಳು, ಫೈಂಡ್ ಮೈ ಸ್ಕೂಟರ್ ಮತ್ತು ಅಲೆಕ್ಸಾ ಸ್ಕಿಲ್ಸ್‌ಗಳನ್ನು ಹೊಂದಿದೆ.

ಇವಿಷ್ಟೆ ಅಲ್ಲದೆ ಹೊಸ ವೇರಿಯೆಂಟ್ OTA ಅಪ್‌ಡೇಟ್‌ಗಳನ್ನು ಸಹ ಸ್ವೀಕರಿಸಲು ಸಾಧ್ಯವಾಗುತ್ತದೆ. ಈ ಸ್ಕೂಟರ್ ಎಥರ್‌ನ ಸಮಗ್ರ ವೇಗದ ಚಾರ್ಜಿಂಗ್ ನೆಟ್‌ವರ್ಕ್, ಎಥರ್ ಗ್ರಿಡ್‌ಗೆ ಸಪೋರ್ಟ್ ಮಾಡುತ್ತದೆ. ಮನೆ ಚಾರ್ಜಿಂಗ್‌ಗಾಗಿ, ಈ ವೇರಿಯೆಂಟ್ ಎಥರ್‌ನ ಪರಿಣಾಮಕಾರಿ ಚಾರ್ಜಿಂಗ್ ಪರಿಹಾರವನ್ನು ಒಳಗೊಂಡಿದೆ, ದೈನಂದಿನ ಬಳಕೆಗೆ ಅನುಕೂಲಕರವಾದ ರಾತ್ರಿಯ ಚಾರ್ಜಿಂಗ್ ಅನ್ನು ಖಚಿತಪಡಿಸುತ್ತದೆ.

ather-energy-introduced-rizta-s-its-offering-159-km-range

ಸಮಗ್ರ ಮಾಲೀಕತ್ವ ಬೆಂಬಲ

ಎಲ್ಲಾ ಎಥರ್ ಸ್ಕೂಟರ್‌ಗಳಂತೆ, 3.7kWh ಬ್ಯಾಟರಿ ಪ್ಯಾಕ್ ರೂಪಾಂತರವನ್ನು ಹೊಂದಿರುವ ರಿಜ್ಟಾ S, ಎಥರ್‌ನ ಸಮಗ್ರ ವಾರೆಂಟಿ ಕಾರ್ಯಕ್ರಮ 'ಎಥರ್ ಎಯಿಟ್70' (Ather Eight70) ಆಯ್ಕೆಯೊಂದಿಗೆ ಬರುತ್ತದೆ. ಇದು ಸಮಗ್ರ 8 ವರ್ಷ ಅಥವಾ 80,000 ಕಿ.ಮೀ (ಯಾವುದು ಮೊದಲು ಬರುತ್ತದೆಯೋ ಅದು) ವಾರೆಂಟಿಯನ್ನು ಒದಗಿಸುತ್ತದೆ.

ಲಭ್ಯತೆ ಮತ್ತು ಬುಕಿಂಗ್

ಹೊಸ ಎಥರ್ ರಿಜ್ಟಾ 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ರಿಜ್ಟಾ ಎಸ್ ಗಾಗಿ ಬುಕಿಂಗ್‌ಗಳು ಈಗ ಎಥರ್‌ನ ಡೀಲರ್ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಭಾರತದಾದ್ಯಂತ ತೆರೆದಿವೆ. ಈ ತಿಂಗಳು ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ, ಕಂಪನಿಯು ನಿರೀಕ್ಷಿತ ಬೇಡಿಕೆಯನ್ನು ಪೂರೈಸಲು ಉತ್ಪಾದನೆಯನ್ನು ಹೆಚ್ಚಿಸುತ್ತಿರುವುದಾಗಿ ತಿಳಿಸಿದೆ.

ಹೊಸ 3.7kWh ಬ್ಯಾಟರಿ ಪ್ಯಾಕ್ ಹೊಂದಿರುವ ಎಥರ್ 'ರಿಜ್ಟಾ ಎಸ್' ಸ್ಕೂಟರ್ ದೆಹಲಿಯಲ್ಲಿ 137,047 (ಎಕ್ಸ್-ಶೋರೂಂ), ಮುಂಬೈನಲ್ಲಿ ರೂ 137,258 (ಎಕ್ಸ್-ಶೋರೂಂ), ಬೆಂಗಳೂರಿನಲ್ಲಿ ರೂ. 137,999 (ಎಕ್ಸ್-ಶೋರೂಂ) ಮತ್ತು ಚೆನ್ನೈನಲ್ಲಿ ರೂ. 139,312 (ಎಕ್ಸ್-ಶೋರೂಂ) ದರದಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ.

More from DriveSpark

Article Published On: Wednesday, July 2, 2025, 12:32 [IST]
English summary
Ather energy introduced rizta s its offering 159 km range
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+