ಬೆಂಗಳೂರು ಮೂಲದ ಫ್ಯಾಮಿಲಿ ಸ್ಕೂಟರ್‌ಗೆ ಫುಲ್ ಡಿಮ್ಯಾಂಡ್: ನೇಪಾಳದಲ್ಲಿ ಬಿಡುಗಡೆ
ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಎಥರ್ ಎನರ್ಜಿ (Ather Energy), ಇಂದು ನೇಪಾಳದಲ್ಲಿ ತನ್ನ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ 'ಎಥರ್ ರಿಜ್ಟಾ' (Ather Rizta)ವನ್ನು ಬಿಡುಗಡೆ ಮಾಡಿದೆ. ಈಗಾಗಲೇ ಈ ಸ್ಕೂಟರ್ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನೇಪಾಳದಲ್ಲೂ ಈ ಸ್ಕೂಟರ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದು, ಕಂಪನಿ ಇದೀಗ ಬಿಡುಗಡೆ ಮಾಡಿದೆ. ಇದು ಎಥರ್‌ನ ಅಂತರರಾಷ್ಟ್ರೀಯ ವಿಸ್ತರಣಾ ಕಾರ್ಯತಂತ್ರದಲ್ಲಿ ಮುಂದಿನ ಹೆಜ್ಜೆಯಾಗಿದ್ದು, ತನ್ನ ನೆಟ್‌ವರ್ಕ್ ಬಲಪಡಿಸುವ ಮತ್ತು ಗ್ರಾಹಕರ ಅಗತ್ಯಗಳನ್ನು ಪೂರೈಸಲು ವ್ಯಾಪಕ ಸ್ಕೂಟರ್‌ಗಳನ್ನು ನೀಡುವತ್ತ ಗಮನಹರಿಸಿಲಾಗಿದೆ ಎಂದು ಎಥರ್ ತಿಳಿಸಿದೆ.
ಎಥರ್ ನವೆಂಬರ್ 2023 ರಲ್ಲಿ ಎಥರ್ 450 ಸರಣಿಯೊಂದಿಗೆ ನೇಪಾಳ ಮಾರುಕಟ್ಟೆಗೆ ಪ್ರವೇಶಿಸಿತು. ಇತ್ತೀಚೆಗೆ ಈ ಪ್ರದೇಶದಲ್ಲಿ 2025ರ ಎಥರ್ 450 ಅನ್ನು ಪರಿಚಯಿಸಿತು. ನೇಪಾಳದಲ್ಲಿ ಪ್ರಾರಂಭವಾದಾಗಿನಿಂದ, ಎಥರ್ ಆ ದೇಶಾದ್ಯಂತ 9 ಅನುಭವ ಕೇಂದ್ರಗಳು ಮತ್ತು 6 ಸೇವಾ ಕೇಂದ್ರಗಳನ್ನು ತೆರೆದಿದೆ. ಇವುಗಳನ್ನು ಎಥರ್‌ನ ರಾಷ್ಟ್ರೀಯ ವಿತರಕರಾದ ವೈದ್ಯ ಎನರ್ಜಿ ಪ್ರೈ. ಲಿಮಿಟೆಡ್ ನಿರ್ವಹಿಸುತ್ತದೆ. 22 ಎಥರ್ ಗ್ರಿಡ್ ಫಾಸ್ಟ್ ಚಾರ್ಜರ್‌ಗಳನ್ನು ಸಹ ಸ್ಥಾಪಿಸಿದೆ.

ನೇಪಾಳದಲ್ಲಿರುವ ತನ್ನ ಗ್ರಾಹಕರಿಂದ ಎಥರ್ 450 ಸ್ಕೂಟರ್‌ಗೆ ಪಡೆದ ಪ್ರತಿಕ್ರಿಯೆಯ ಆಧಾರದ ಮೇಲೆ ಈಗ ನೇಪಾಳದಲ್ಲಿ ಎಥರ್ ರಿಜ್ಟಾ ಸ್ಕೂಟರ್ ಅನ್ನು ಪರಿಚಯಿಸಲಾಗಿದೆ. ರಿಜ್ಟಾ ದೊಡ್ಡ ಮತ್ತು ಆರಾಮದಾಯಕವಾದ ಆಸನವನ್ನು ಹೊಂದಿದ್ದು, 34L ಅಂಡರ್ ಸೀಟ್ ಸ್ಟೋರೇಜ್ ಮತ್ತು ಐಚ್ಛಿಕ 22L ಫ್ರಂಕ್ ಸ್ಟೋರೇಜ್ ಒಳಗೊಂಡಂತೆ ಒಟ್ಟು 56L ಶೇಖರಣಾ ಸ್ಥಳವನ್ನು ನೀಡುತ್ತದೆ.
ಇದು ಫ್ಲೋರ್‌ಬೋರ್ಡ್ ಅನ್ನು ಸಹ ಹೊಂದಿದ್ದು, ಇದು ಸವಾರನಿಗೆ ಸಾಕಷ್ಟು ಲೆಗ್ ಸ್ಪೇಸ್ ಅನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ರಿಜ್ಟಾ ಸ್ಕಿಡ್ ಕಂಟ್ರೋಲ್ ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇವು ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಇದು 7-ಇಂಚಿನ TFT ಡಿಸ್ಪ್ಲೇ ಡ್ಯಾಶ್‌ಬೋರ್ಡ್‌ನೊಂದಿಗೆ ಬರುತ್ತದೆ. ಎಥರ್‌ಸ್ಟ್ಯಾಕ್‌ಟಿಎಂ ಪ್ರೊನೊಂದಿಗೆ ಲಭ್ಯವಿರುವ ಗೂಗಲ್ ಮ್ಯಾಪ್ಸ್, ಬ್ಲೂಟೂತ್ ಮ್ಯೂಸಿಕ್ ಮತ್ತು ಕಾಲ್ ಕಂಟ್ರೋಲ್‌ನಂತಹ ಫೀಚರ್ಸ್ ಹೊಂದಿದೆ.

ನೇಪಾಳ ಪ್ರಯಾಣ
ಎಥರ್ ನವೆಂಬರ್ 2023 ರಲ್ಲಿ ನೇಪಾಳದಲ್ಲಿ ತನ್ನ ಮೊದಲ ಅನುಭವ ಕೇಂದ್ರವನ್ನು ತೆರೆಯುವ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಡಿಸೆಂಬರ್ 2024 ರಲ್ಲಿ, ಎಥರ್ ತನ್ನ ಎರಡನೇ ಅಂತರರಾಷ್ಟ್ರೀಯ ಮಾರುಕಟ್ಟೆ ಶ್ರೀಲಂಕಾವನ್ನು ಪ್ರವೇಶಿಸಿತು. ಅಲ್ಲಿ ಅದು ದೇಶಾದ್ಯಂತ 19 ಅನುಭವ ಕೇಂದ್ರಗಳು ಮತ್ತು 9 ಸೇವಾ ಕೇಂದ್ರಗಳಿಗೆ ವಿಸ್ತರಿಸಿದೆ.
"ನೇಪಾಳ ನಮ್ಮ ಮೊದಲ ಅಂತರರಾಷ್ಟ್ರೀಯ ಮಾರುಕಟ್ಟೆಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ನಾವು ಬಲವಾದ ಗ್ರಾಹಕರ ಆಸಕ್ತಿ ಮತ್ತು ಎಥರ್ 450 ಸಿರೀಸ್ ಸ್ಕೂಟರ್‌ಗೆ ಬಹಳ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯನ್ನು ಕಂಡಿದ್ದೇವೆ. ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು, ನಾವು ನೇಪಾಳ ದೇಶಾದ್ಯಂತ ನಮ್ಮ ಮಳಿಗೆಗಳನ್ನು ಸ್ಥಿರವಾಗಿ ವಿಸ್ತರಿಸಿದ್ದೇವೆ.

ಈಗ ಎಥರ್ ರಿಜ್ಟಾ ಬಿಡುಗಡೆಯೊಂದಿಗೆ, ನಾವು ತಮ್ಮ ದೈನಂದಿನ ಸವಾರಿಗಳಲ್ಲಿ ಸೌಕರ್ಯ ಮತ್ತು ಅನುಕೂಲತೆಗೆ ಆದ್ಯತೆ ನೀಡುವ ಕುಟುಂಬ ಖರೀದಿದಾರರ ಹೊಸ ವಿಭಾಗವನ್ನು ಬಳಸಿಕೊಳ್ಳುತ್ತಿದ್ದೇವೆ. 450 ಸಿರೀಸ್‌ಗೆ ನಾವು ಕಂಡಂತೆಯೇ ರಿಜ್ಟಾಗೂ ಅದೇ ಬಲವಾದ ಪ್ರತಿಕ್ರಿಯೆಯನ್ನು ಆಶಿಸುತ್ತೇವೆ" ಎಂದು ಕಂಪನಿಯ ಮುಖ್ಯ ವ್ಯವಹಾರ ಅಧಿಕಾರಿ ರವನೀತ್ ಸಿಂಗ್ ಫೋಕೆಲಾ ಹೇಳಿದರು.
ಬೆಂಗಳೂರು ಮೂಲದ ಕಂಪನಿ: ಎಥರ್ ಎನರ್ಜಿ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ. ಬೆಂಗಳೂರಿನ ವೈಟ್‌ಫೀಲ್ಡ್ ಮತ್ತು ತಮಿಳುನಾಡಿನ ಹೊಸೂರಿನಲ್ಲಿ ವಾಹನ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ. ಭಾರತದಲ್ಲಿ ಎಥರ್ 446 ಅನುಭವ ಕೇಂದ್ರಗಳು ಮತ್ತು 3,997 ಎಥರ್ ಗ್ರಿಡ್ ಫಾಸ್ಟ್ ಚಾರ್ಜರ್‌ಗಳು ಮತ್ತು ದೇಶಾದ್ಯಂತ ಮಾರಾಟ ಜಾಲವನ್ನು ಹೊಂದಿದೆ.


Click it and Unblock the Notifications








