ಪೆಟ್ರೋಲ್ ಬೇಕಿಲ್ಲ: ಆಟೋ ಎಕ್ಸ್‌ಪೋದಲ್ಲಿ ಓಲಾ ಎಲೆಕ್ಟ್ರಿಕ್ ಬೈಕ್ ಪ್ರದರ್ಶನ, ಅತಿ ಶೀಘ್ರದಲ್ಲೇ ಮಾರಾಟಕ್ಕೆ!
ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ (Ola Electric), ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇ-ಸ್ಕೂಟರ್ ವಿಭಾಗದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಕಂಪನಿಯು, 2024ರ ಆಗಸ್ಟ್ 15ರಂದು ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ರೋಡ್‌ಸ್ಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಇದು ರೋಡ್‌ಸ್ಟರ್ ಎಕ್ಸ್ (Roadster X), ರೋಡ್‌ಸ್ಟರ್ (Roadster) ಮತ್ತು ರೋಡ್‌ಸ್ಟರ್ ಪ್ರೊ (Roadster Pro) ಎಂಬ 3 ವಿಧದಲ್ಲಿ ಖರೀದಿ ಲಭ್ಯವಾಗಲಿದೆ. ಆದರೆ, ಈವರೆಗೆ ನೂತನ ಮೋಟಾರ್‌ಸೈಕಲ್‌ನ ವಿತರಣೆಗಳು ಶುರುವಾಗಿಲ್ಲ.
ಓಲಾ ಕಂಪನಿಯು ನಾಳೆಯಿಂದ ನವದೆಹಲಿಯಲ್ಲಿ ಅದ್ದೂರಿಯಾಗಿ ಶುರುವಾಗುವ 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ, ಈ 'ರೋಡ್‌ಸ್ಟರ್' ಎಲೆಕ್ಟ್ರಿಕ್ ಬೈಕ್‌ನ್ನು ಮತ್ತೊಮ್ಮೆ ಪ್ರದರ್ಶಿಸಲು ಉದ್ದೇಶಿಸಿದೆ. ಆ ಬಳಿಕ, ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಇದರೊಟ್ಟಿಗೆ ನೂತನ ಎಸ್1 (S1) ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣ ಮಾಡಲಿದೆ ಎನ್ನಲಾಗಿದೆ. ಆದರೆ, ಈ ಕುರಿತಂತೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಪ್ರಕಟಣೆಗಳು ಹೊರಬಂದಿಲ್ಲ.

ಓಲಾ ರೋಡ್‌ಸ್ಟರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿಶೇಷತೆಗಳೇನು: ಮೊದಲಿಗೆ 'ರೋಡ್‌ಸ್ಟರ್ ಎಕ್ಸ್' ಮಾಡೆಲ್ ಬಗ್ಗೆ ಮಾತನಾಡೋಣ. ಇದು ರೂ.75,000 ದಿಂದ ರೂ.1 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 2.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್), 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 4.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಸಿಗುತ್ತದೆ.
ನೂತನ ಓಲಾ ರೋಡ್‌ಸ್ಟರ್ ಎಕ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್, ಸಂಪೂರ್ಣ ಚಾರ್ಜ್‌ನಲ್ಲಿ 200 ಕಿಲೋಮೀಟರ್‌ವರೆಗೂ ಓಡುತ್ತದೆ. 124 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. 4.3-ಇಂಚಿನ ಎಲ್‌ಸಿಡಿ ಸೆಗ್ಮೆಂಟ್ ಡಿಸ್‌ಪ್ಲೇ, ಓಲಾ ಮ್ಯಾಪ್ ನ್ಯಾವಿಗೇಷನ್ (ಟರ್ನ್- ಬೈ-ಟರ್ನ್) ಹಾಗೂ ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

'ಓಲಾ ರೋಡ್‌ಸ್ಟರ್' ಮಾಡೆಲ್ ಕುರಿತಂತೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಬೈಕ್ ರೂ.1.05 ಲಕ್ಷದಿಂದ ರೂ.1.40 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್), 4.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 6 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ.
ಈ ಓಲಾ ರೋಡ್‌ಸ್ಟರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್, ಭರ್ತಿ ಚಾರ್ಜ್‌ನಲ್ಲಿ 248 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡುತ್ತದೆ. 126 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಹೈಪರ್, ಸ್ಪೋರ್ಟ್ಸ್, ನಾರ್ಮಲ್ & ಇಕೋ ಎಂಬ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. 6.8-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್, ಪ್ರಾಕ್ಸಿಮಿಟಿ ಅನ್‌ಲಾಕ್ ಮತ್ತು ಕ್ರೂಸ್ ಕಂಟ್ರೋಲ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
'ಓಲಾ ರೋಡ್‌ಸ್ಟರ್ ಪ್ರೊ' ಮಾಡೆಲ್ ಬಗ್ಗೆ ಮಾತನಾಡುವುದಾದರೆ, ಇದು ರೂ.2 ಲಕ್ಷದಿಂದ ರೂ.2.50 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ. 8 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 16 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಗಳನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 579 ಕಿಲೋಮೀಟರ್‌ವರೆಗೆ ಓಡುತ್ತದೆ. 10-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಹಿಂದೆ, 'ಓಲಾ ರೋಡ್‌ಸ್ಟರ್ ಪ್ರೊ' ಮಾಡೆಲ್ ವಿತರಣೆಯು ಈ ವರ್ಷದ ದೀಪಾವಳಿಯಲ್ಲಿ ಆರಂಭವಾಗಲಿದೆ. ರೋಡ್‌ಸ್ಟರ್ ಎಕ್ಸ್ ಮತ್ತು ರೋಡ್‌ಸ್ಟರ್ ಮಾಡೆಲ್‌ಗಳು ಜನವರಿಯಿಂದ (2025) ಗ್ರಾಹಕರ ಮನೆ ಸೇರಲಿವೆ ಎಂದು ವರದಿಯಾಗಿತ್ತು. ಇದನ್ನು ಗಮನಿಸಿದರೆ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ ನಂತರ ನೂತನ ಎಲೆಕ್ಟ್ರಿಕ್ ಬೈಕ್ ಡೆಲಿವರಿಯಾಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications