Auto Expo 2025: ಜುಪಿಟರ್ CNG ಸ್ಕೂಟರ್ ಅನಾವರಣ: ಮೈಲೇಜ್ ಕೇಳಿ ಆಕ್ಟೀವಾಗೆ ನಡುಕ ಶುರು!
ಟಿವಿಎಸ್ ಮೋಟಾರ್ ಕಂಪನಿಯು ಕೊನೆಗೂ ತನ್ನ ಜುಪಿಟರ್ ಸಿಎನ್‌ಜಿ ಸ್ಕೂಟರ್ (TVS Jupiter CNG Scooter) ಅನ್ನು ಆಟೋ ಎಕ್ಸ್‌ಪೋ 2025 (Auto Expo 2025) ರಲ್ಲಿ ಅನಾವರಣಗೊಳಿಸಲಾಗಿದೆ. ಈ ಸ್ಕೂಟರ್ ಅನ್ನು ಕಾನ್ಸೆಪ್ಟ್ ಮಾಡಲ್ ಆಗಿ ಪ್ರದರ್ಶಿಸಲಾಗಿದ್ದರೂ, ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಆಗಿದೆ. ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಈ ಸ್ಕೂಟರ್ ಸದ್ಯ ಎಕ್ಸ್‌ಪೋದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈಗಾಗಲೇ ಸಿಎನ್‌ಜಿ ಮೋಟಾರ್‌ಸೈಕಲ್ ವಿಭಾಗದಲ್ಲಿ ಬಜಾಜ್ ಫ್ರೀಡಂ ಬೈಕ್ ಬಿಡುಗಡೆಯಾಗಿದೆ. ಇದರ ನಂತರ ಸ್ಕೂಟರ್ ವಿಭಾಗದಲ್ಲಿ ಜುಪಿಟರ್ ಎಂಟ್ರಿ ಕೊಟ್ಟಿದೆ.
ಟಿವಿಎಸ್ ಜುಪಿಟರ್ ಸಿಎನ್‌ಜಿ ಟ್ಯಾಂಕ್ ಅನ್ನು 1.4 ಕೆ.ಜಿ ತುಂಬಿಸಬಹುದಾದ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಟ್ಯಾಂಕ್ ಅನ್ನು ಸಾಮಾನ್ಯ ಜುಪಿಟರ್ 125 ನಲ್ಲಿ ಕಾಣುವ ಅಂಡರ್ ಸೀಟ್ ಬೂಟ್ ಸ್ಥಳದಲ್ಲಿ ಇರಿಸಲಾಗಿದೆ. ಈ ಜಾಗವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿರುವ ಟಿವಿಎಸ್ ಕಂಪನಿಯು ಟ್ಯಾಂಕ್ ಅನ್ನು ಪ್ಲಾಸ್ಟಿಕ್ ಪ್ಯಾನಲ್‌ನಿಂದ ಮುಚ್ಚಿದೆ. ಸಿಎನ್‌ಜಿ ಪ್ರೆಶರ್ ಗೇಜ್ ಅನ್ನು ತೋರಿಸಲು ಐಲೆಟ್ ಮತ್ತು ಅದರ ಸುತ್ತಲೂ ಫಿಲ್ಲರ್ ನಾಜಿಲ್ ಅನ್ನು ಅಳವಡಿಸಲಾಗಿದೆ.

ಕಂಪನಿ ನೀಡಿರುವ ಮಾಹಿತಿಯ ಪ್ರಕಾರ ಜುಪಿಟರ್ ಸಿಎನ್‌ಜಿ ಒಂದು ಕೆ.ಜಿ ಸಿಎನ್ ಜಿಯಲ್ಲಿ 84 ಕಿ.ಮೀ ಮೈಲೇಜ್ ನಿಡುವುದಾಗಿ ಕಂಪನಿ ಹೇಳಿಕೊಂಡಿದೆ. ಇದರಲ್ಲಿ ಸಿಎನ್‌ಜಿ ಟ್ಯಾಂಕ್ ಜೊತೆಗೆ 2 ಲೀಟರ್‌ನ ಪೆಟ್ರೋಲ್ ಟ್ಯಾಂಕ್ ಕೂಡ ನೀಡಲಾಗಿದ್ದು, ಒಮ್ಮೆ ಎರಡೂ ಟ್ಯಾಂಕ್‌ಗಳನ್ನು ಸಂಪೂರ್ಣವಾಗಿ ತುಂಬಿಸಿದರೆ 226 ಕಿ.ಮೀ ಮೈಲೇಜ್ ಪಡೆಯಬಹುದು ಎಂದು ಕಂಪನಿ ಹೇಳಿದೆ.
ಎಂಜಿನ್ ವಿಷಯಕ್ಕೆ ಬಂದರೆ OBD2B ಮಾನದಂಡಗಳಿಗೆ ಅನುಸಾರವಾಗಿ 124.8cc ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 5.3Kw ಪವರ್ ಹಾಗೂ 9.4Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮುಂಬರಲಿರುವ ಹೊಸ ಟಿವಿಎಸ್ ಜುಪಿಟರ್ ಸಿಎನ್‌ಜಿ ಸ್ಕೂಟರ್ ಗಂಟೆಗೆ 84 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ಉಳಿದಂತೆ ಜುಪಿಟರ್ ಸಿಎನ್‌ಜಿ ಮಾದರಿಯು ಪೆಟ್ರೋಲ್ ಚಾಲಿತ ಜುಪಿಟರ್ 125 ಸ್ಕೂಟರ್‌ನಂತೆಯೇ ಇದೆ. ವಿನ್ಯಾಸ, ವೈಶಿಷ್ಟ್ಯಗಳು, ವೀಲ್‌ಗಳು ಅಥವಾ ಬ್ರೇಕ್ ಆಗಿರಲಿ ಎಲ್ಲವೂ ಒಂದಕ್ಕೊಂದು ಹೋಲುತ್ತವೆ. ಜುಪಿಟರ್ 125 ಸಿಎನ್‌ಜಿ ಕಾನ್ಸೆಪ್ಟ್ ಹಂತದಲ್ಲಿದ್ದು, ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇನ್ನು ಹೊರಬಂದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








