Yamaha Tenere 700: ಯಮಹಾ ಟೆನೆರೆ 700 ಬೈಕ್ ಪ್ರದರ್ಶನ.. ಕಾರಿಗೂ ಮೀರಿಸುವಂತಿದೆ!
ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ-2025ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಯಮಹಾ (Yamaha), ಹೊಚ್ಚ ಹೊಸ ಟೆನೆರೆ 700 (Tenere 700) ಹೆಸರಿನ ಬೈಕ್‌ನ್ನು ಪ್ರದರ್ಶಿಸಿದೆ. ಈ ನೂತನ ಮೋಟಾರ್‌ಸೈಕಲ್, ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದೇ ಬೈಕ್‌ನ್ನು ಮೊದಲ ಬಾರಿಗೆ ಇಟಲಿಯ ಮಿಲನ್‌ನಲ್ಲಿ ಆಯೋಜಿಸಿದ್ದ ಮೋಟಾರ್‌ಸೈಕಲ್ ಶೋನಲ್ಲಿಯೂ ಅನಾವರಣಗೊಳಿಸಲಾಗಿತ್ತು.
ವಿನ್ಯಾಸ (Design): ನೂತನ ಯಮಹಾ ಟೆನೆರೆ 700 (Yamaha Tenere 700) ಬೈಕ್ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಹೊಸದಾದ ಎಲ್ಇಡಿ ಹೆಡ್‌ಲೈಟ್ & ಬ್ಲಿಂಕರ್‌ಗಳು, ಬಾಡಿ ಪ್ಯಾನೆಲ್‌ಗಳನ್ನು ಹೊಂದಿದೆ. ಬ್ಲ್ಯೂ ಬಣ್ಣದಲ್ಲಿರುವ ಈ ಮೋಟಾರ್‌ಸೈಕಲ್, ಸಿಂಗಲ್-ಪೀಸ್ ಸೀಟ್ ಆಯ್ಕೆಯನ್ನು ಪಡೆದಿದೆ.

ಕಾರ್ಯಕ್ಷಮತೆ (Performance): ಈ ಬೈಕ್ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. ಇದು 698 ಸಿಸಿ ಸಾಮರ್ಥ್ಯದ ಪ್ಯಾರಲಲ್-ಟ್ವಿನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72.4 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 68 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಎಕ್ಸ್‌ಪ್ಲೋರರ್ & ಸ್ಪೋರ್ಟ್ ಎಂಬ 2 ರೈಡಿಂಗ್ ಮೋಡ್‌ಗಳನ್ನು ತನ್ನದಾಗಿಸಿಕೊಂಡಿದೆ.
ವೈಶಿಷ್ಟ್ಯಗಳು (Features): ಹೊಸ ಯಮಹಾ ಟೆನೆರೆ 700 ಬೈಕ್ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. 6.3-ಇಂಚಿನ ವರ್ಟಿಕಲ್ ಟಿಎಫ್‌ಟಿ ಡಿಸ್‌ಪ್ಲೇ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹೊಂದಿದೆ. ಜೊತೆಗೆ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯನ್ನು ಒಳಗೊಂಡಿದೆ. ಇದು ಕಾಲ್/ಎಸ್ಎಂಎಸ್ ಅಲರ್ಟ್, ಮ್ಯೂಸಿಕ್ ಕಂಟ್ರೋಲ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಬೆಂಬಲಿಸುತ್ತದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ಈ ಮೋಟಾರ್‌ಸೈಕಲ್ ಮುಂಭಾಗ (ಫ್ರಂಟ್) 43 ಎಂಎಂ ಯುಎಸ್‌ಡಿ ಫೋರ್ಕ್ ಮತ್ತು ಹಿಂಭಾಗ (ರೇರ್) 210 ಎಂಎಂ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಹೊಂದಿದೆ. ಮುಂದೆ 282 ಎಂಎಂ ಮತ್ತು ಹಿಂದೆ 245 ಎಂಎಂ ಡಿಸ್ಕ್ ಬೈಕ್‌ಗಳನ್ನು ಪಡೆದಿದೆ.
ಮತ್ತೇನು ವಿಶೇಷತೆಗಳು (Other Features): ನೂತನ ಬೈಕ್ 211 ಕೆಜಿ ತೂಕವಿದ್ದು, 16 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಡುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಮುಂಭಾಗ (ಫ್ರಂಟ್) 21-ಇಂಚು ಮತ್ತು ಹಿಂಭಾಗ (ರೇರ್) 18-ಇಂಚಿನ ಸ್ಪೋಕ್ ವೀಲ್ ಸೆಟಪ್ ಅನ್ನು ತನ್ನದಾಗಿಸಿಕೊಂಡಿದೆ.

ಇನ್ನು, ಹೊಸ ಯಮಹಾ ಟೆನೆರೆ 700 ಮೋಟಾರ್‌ಸೈಕಲ್ ಅತ್ಯುತ್ತಮ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ರಾಹಕರಿಗೆ ಖಂಡಿತ ಇಷ್ಟವಾಗಲಿದೆ. ಸದ್ಯಕ್ಕೆ ಈ ಬೈಕ್ ಬಿಡುಗಡೆ ಹಾಗೂ ಬೆಲೆಯ ಕುರಿತಂತೆ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಇದು ಎರಡರಿಂದ ಮೂರು ತಿಂಗಳಲ್ಲಿ ಮಾರಾಟಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








