bajaj Chetak 3001: ಹೊಸ ದೈನಂದಿನ ಎಲೆಕ್ಟ್ರಿಕ್ ಸ್ಕೂಟರ್ ಈಗ ಕೈಗೆಟುಕುವ ಬೆಲೆಯಲ್ಲಿ ಲಭ್ಯ
ಚೇತಕ್ 3001 ಇವಿ ಸ್ಕೂಟರ್ ಇತ್ತೀಚೆಗೆ ಬಿಡುಗಡೆಯಾಗಿರುವ ಬಜಾಜ್ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಸ್ಕೂಟರ್ ದೇಶಾದ್ಯಂತ ಈಗ ರೂ. 99,990 ಎಕ್ಸ್-ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಚೇತಕ್ 3001 ನಲ್ಲಿನ ಗಮನಾರ್ಹ ನವೀಕರಣವೆಂದರೆ ಬ್ಯಾಟರಿಯನ್ನು ಫ್ಲೋರ್ ಬೋರ್ಡ್‌ಗೆ ಸ್ಥಳಾಂತರಿಸಿರುವುದು. ಈ ಬದಲಾವಣೆಯು ಸೀಟಿನ ಕೆಳಗೆ ಹೆಚ್ಚಿನ ಸ್ಥಳವನ್ನು ನೀಡುತ್ತದೆ, ಇದು ನಿಯಮಿತವಾಗಿ ದಿನಸಿ ಅಥವಾ ಹೆಲ್ಮೆಟ್‌ಗಳನ್ನು ಸಾಗಿಸುವವರಿಗೆ ಪ್ರಮುಖ ಸುಧಾರಣೆಯಾಗಿದೆ. ಹಾಗೆಯೇ ಭಾರತೀಯ ಸ್ಕೂಟರ್ ಸವಾರರು ಬಯಸುವ ರೇಂಜ್ ಮತ್ತು ಪರ್ಫಾಮೆನ್ಸ್ ನೀಡುತ್ತದೆ. ಇದರ ಇತರ ಪ್ರಾಯೋಗಿಕ ಮುಖ್ಯಾಂಶಗಳನ್ನು ನೋಡೋಣ.
ಹಿಂದಿನ ಚೇತಕ್ ಮಾದರಿಗಳಂತೆ, 3001 ಸ್ಟೀಲ್ ಮೆಟಲ್ ಬಾಡಿಯೊಂದಿಗೆ ನಿರ್ಮಾಣವಾಗಿದೆ. ಇದು ನೀರಿನ ಪ್ರತಿರೋಧಕ್ಕಾಗಿ ಐಪಿ 67-ರೇಟಿಂಗ್ ಆಗಿದೆ, ಬಜಾಜ್‌ನ ವ್ಯಾಪಕ ಡೀಲರ್ ಶಿಪ್ ಮತ್ತು ಸರ್ವಿಸ್ ನೆಟ್‌ವರ್ಕ್ (3,800 ಕ್ಕೂ ಹೆಚ್ಚು ಕೇಂದ್ರಗಳು) ಬೆಂಬಲಿತವಾಗಿರುವ ಚೇತಕ್ 3001 ದೀರ್ಘಾಯುಷ್ಯ ಮತ್ತು ಸೇವೆಯ ಸುಲಭತೆಯನ್ನು ಬಯಸುವ ಸವಾರರಿಗೆ ಪ್ರಾಯೋಗಿಕ ಆಯ್ಕೆಯಾಗಿದೆ.

ಸ್ಟೋರೇಜ್ ಅನ್ನು 35-ಲೀಟರ್ ಅಂಡರ್-ಸೀಟ್ ಕಂಪಾರ್ಟ್‌ಮೆಂಟ್‌ನೊಂದಿಗೆ ಸುಧಾರಿಸಲಾಗಿದೆ. ಇದು ಪೂರ್ಣ-ಮುಖದ ಹೆಲ್ಮೆಟ್ ಅಥವಾ ಹಲವಾರು ಬ್ಯಾಗ್‌ಗಳಿಗೆ ಸ್ಥಳಾವಕಾಶ ನೀಡುವಷ್ಟು ದೊಡ್ಡದಾಗಿದ್ದು, ಬೃಹತ್ 35L ಬೂಟ್ ಸ್ಪೇಸ್ ನೀಡಲಾಗಿದೆ. ಇದರ 750 ವ್ಯಾಟ್ ಚಾರ್ಜರ್ ಸುಮಾರು 3 ಗಂಟೆ 50 ನಿಮಿಷಗಳಲ್ಲಿ ಬ್ಯಾಟರಿಯನ್ನು ಶೇ80 ರವರೆಗೆ ಜಾರ್ಜ್ ಮಾಡುತ್ತದೆ.
ಚೇತಕ್ 3001 ನಿಜವಾದ ಭಾರತೀಯ ಸವಾರರಿಗೆ ನಾವೀನ್ಯತೆಯನ್ನು ನೀಡುವ ವೇದಿಕೆಯ ವಿಕಸನವಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 127 ಕಿಲೋಮೀಟರ್ ಎಆರ್ಎಐ-ರೇಟೆಡ್ ರೇಂಜ್ ನೀಡುತ್ತದೆ. ದೈನಂದಿನ ಪ್ರಯಾಣದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ. ಈ ವಿಸ್ತೃತ ಶ್ರೇಣಿಯು ಪೆಟ್ರೋಲ್ ಚಾಲಿತ ಸ್ಕೂಟರ್ ಗಳಿಂದ ಪರಿವರ್ತನೆಗೊಳ್ಳುವ ಬಳಕೆದಾರರ ಆತಂಕವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಹೊಸ ಫ್ಲೋರ್‌ಬೋರ್ಡ್ ಬ್ಯಾಟರಿ ಆರ್ಕಿಟೆಕ್ಚರ್ ಹೊಂದಿರುವ ಈ ಸ್ಕೂಟರ್, ವಾರಾಂತ್ಯದ ವಿಹಾರ, ಕಚೇರಿ, ಪ್ರವಾಸ ಮತ್ತು ಕಾಲೇಜುಗಳಿಗೆ ಸೂಕ್ತವಾದ ಕುಟುಂಬ ಇವಿ ಆಗಿದೆ. ವೈಶಿಷ್ಟ್ಯಗಳ ಭಾಗವಾಗಿ ಕರೆ ಸ್ವೀಕರಿಸುವುದು/ತಿರಸ್ಕರಿಸುವುದು, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಲೈಟ್, ಆಟೋ - ಫ್ಲಾಶಿಂಗ್ ಸ್ಟಾಪ್ ಲ್ಯಾಂಪ್, ಮ್ಯೂಸಿಕ್ ಕಂಟ್ರೋಲ್, ಗೈಡ್ ಮಿ ಹೋಮ್ ಲೈಟ್‌ಗಳಂತಹ ಫೀಚರ್ಸ್ ನೀಡಲಾಗಿದೆ.
ಬಜಾಜ್ ಚೇತಕ್ ಇವಿ ಶ್ರೇಣಿ: ಚೇತಕ್‌ನ ಅತ್ಯಂತ ಕೈಗೆಟುಕುವ ಟ್ರಿಮ್ 2903, ಚೇತಕ್ 3503, ಚೇತಕ್ 3502 ಮತ್ತು ಟಾಪ್-ಆಫ್-ಲೈನ್ ಮಾದರಿಯಾಗಿ ಚೇತಕ್ 3501 ಇದ್ದವು. ಎರಡನೇ ತಲೆಮಾರಿನ ಚೇತಕ್ ಲೈನ್ 3503 ಸ್ಕೂಟರ್ ಬೆಲೆಯು 1.10 ಲಕ್ಷ ರೂ., 3502 ಸ್ಕೂಟರ್ ಬೆಲೆಯು 1.22 ಲಕ್ಷ ರೂ., 3501 ಸ್ಕೂಟರ್ ಬೆಲೆಯು 1.34 ಲಕ್ಷ ರೂ. ಇದೆ.
ಈಗ ಅತ್ಯಂತ ಜನಪ್ರಿಯ ಚೇತಕ್ 2903 ಮಾಡಲ್‌ಗೆ ಅಪ್‌ಗ್ರೇಡ್ ಮಾದರಿಯಾಗಿ ಚೇತಕ್ ಇವಿ 3001 ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಓಲಾ ಎಸ್ 1 ಝಡ್ ಹಾಗೂ ಟಿವಿಎಸ್ ಐಕ್ಯೂಬ್‌ಗೆ ಪೈಪೋಟಿ ನೀಡಲಿದೆ. ಹೊಸ ಚೇತಕ್ 3001 ಶೀಘ್ರದಲ್ಲೇ ಅಮೆಜಾನ್‌ನಲ್ಲಿಯೂ ಲಭ್ಯವಿರುತ್ತದೆ ಎಂದು ಬಜಾಜ್ ಕಂಪನಿ ತಿಳಿಸಿದೆ.
ಹೊಸ ಇವಿ ಸ್ಕೂಟರ್‌ಗಳ ಮೂಲಕ ಭಾರತದಲ್ಲಿ ಹೊಸ ಅಲೆ ಎಬ್ಬಿಸಿರುವ ಬಜಾಜ್, ಭಾರತದ ನಂ.1 ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಆಗಿ FY25 Q4 (ಜನವರಿ-ಮಾರ್ಚ್) ಅನ್ನು ಕೊನೆಗೊಳಿಸಿದೆ. ಚೇತಕ್‌ನ ಇತರ ಮಾಡಲ್‌ಗಳಾದ 3501, 3502 ನೇತೃತ್ವದ 35 ಸಿರೀಸ್ ಈಗಾಗಲೇ EV ಕ್ಷೇತ್ರದಲ್ಲಿನ ಎಲ್ಲಾ ಸ್ಕೂಟರ್‌ಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವುದಾಗಿ ಬಜಾಜ್ ಹೇಳಿಕೊಂಡಿದೆ.


Click it and Unblock the Notifications








