Bajaj Chetak: ಭಾರೀ ಕಡಿಮೆ ಬೆಲೆಗೆ ಬಜಾಜ್ ಚೇತಕ್ 3503 ಇ-ಸ್ಕೂಟರ್ ಬಿಡುಗಡೆ.. ಲೆಕ್ಕವಿಲ್ಲದಷ್ಟು ವೈಶಿಷ್ಟ್ಯಗಳು!

ಬಜಾಜ್ ಚೇತಕ್ (Bajaj Chetak) ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ದೊಡ್ಡ ಸಂಖ್ಯೆಯಲ್ಲಿಯೂ ಮಾರಾಟಗೊಳ್ಳುತ್ತಿದೆ. ಇದು ಹೆಚ್ಚು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ದೊರೆಯುತ್ತದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಬಜಾಜ್ ಕಂಪನಿಯು 'ಚೇತಕ್' ಸ್ಕೂಟರ್‌ನ '35 ಸೀರೀಸ್'ಗೆ ಹೊಸ ಮಾಡೆಲ್‌ನ್ನು ಸೇರ್ಪಡೆಗೊಳಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಬಜಾಜ್ ಚೇತಕ್ 3501 ಮತ್ತು 3502 ಮಾಡೆಲ್‌ಗಳನ್ನು ಪರಿಚಯಿಸಿ ಕೆಲವೇ ತಿಂಗಳ ಬಳಿಕ, ಹೊಚ್ಚ ಹೊಸ '3503' ಮಾಡೆಲ್ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದು ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಸಿಗಲಿದ್ದು, ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಖರೀದಿ ಮಾಡಲು ಸಾಧ್ಯವಾಗಲಿದೆ. ರೂ.1.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

Bajaj Chetak 3503 Electric Scooter Launched In India Rs 1 10 Lakh Price Details

ಹೊಸ ಬಜಾಜ್ ಚೇತಕ್ 3503 (Bajaj Chetak 3503) ಎಲೆಕ್ಟ್ರಿಕ್ ಸ್ಕೂಟರ್, ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇದು ಹಳೆಯ ರೆಟ್ರೋ ಶೈಲಿಯ ವಿನ್ಯಾಸವನ್ನೇ ಪಡೆದಿದೆ. ಅತ್ಯಾಧುನಿಕವಾದ ಎಲ್ಇಡಿ ಹೆಡ್‌ಲೈಟ್, ಕರ್ವಿ ಬಾಡಿ ಪ್ಯಾನೆಲ್‌ಗಳು ಹಾಗೂ ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ. ಇದರೊಟ್ಟಿಗೆ ದೊಡ್ಡ ಗಾತ್ರದ 35-ಲೀ.ನ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಬ್ರೂಕ್ಲಿನ್ ಬ್ಲ್ಯಾಕ್, ಇಂಡಿಗೊ ಬ್ಲೂ, ಮ್ಯಾಟ್ ಗ್ರೇ ಹಾಗೂ ಸೈಬರ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ ಬಜಾಜ್ ಚೇತಕ್ 3503 ಮಾಡೆಲ್, 3501 ಮತ್ತು 3502 ಮಾಡೆಲ್‌ಗಳಂತೆಯೇ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. ಇದು 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದ್ದು, ಭರ್ತಿ ಚಾರ್ಜ್‌ನಲ್ಲಿ 150 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

Bajaj Chetak 3503 Electric Scooter Launched In India Rs 1 10 Lakh Price Details

ಈ ಬಜಾಜ್ ಚೇತಕ್ 3503 ಇ-ಸ್ಕೂಟರ್ 63 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ ಮನೆಯ ವಿದ್ಯುತ್ ಬಳಕೆಯಲ್ಲಿ 0 ರಿಂದ 80% ಚಾರ್ಜ್ ಆಗಲು 3 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ. ಜೊತೆಗೆ ಇಕೋ (Eco) ಮತ್ತು ಸ್ಪೋರ್ಟ್ಸ್ (Sports) ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಹೊಸ ಬಜಾಜ್ ಚೇತಕ್ 3503 ಮಾಡೆಲ್ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಕಲರ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕಂಟ್ರೋಲ್ ಮತ್ತು ಮ್ಯೂಸಿಕ್ ಕಂಟ್ರೋಲ್‌ನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ ಮೊನೊಶಾಕ್ ಸಸ್ಪೆನ್ಷನ್ ಸೆಟಪ್, ಮುಂಭಾಗ (ಫ್ರಂಟ್) ಡಿಸ್ಕ್ ಮತ್ತು ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

Bajaj Chetak 3503 Electric Scooter Launched In India Rs 1 10 Lakh Price Details

ಬಜಾಜ್ ಚೇತಕ್ 2903 (Bajaj Chetak 2903) ಇ-ಸ್ಕೂಟರ್ ಕೂಡ ಖರೀದಿಗೆ ಲಭ್ಯ: ಇದು ರೂ.98,498 ರಿಂದ ರೂ.1.02 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 2.88 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 123 ಕಿಲೋಮೀಟರ್ ಓಡುತ್ತದೆ. 63 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 29, 2025, 8:30 [IST]
English summary
Bajaj chetak 3503 electric scooter launched in india rs 1 10 lakh price details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+