ಸದ್ಯ 330 ಕಿ.ಮೀ ಮೈಲೇಜ್.. 90,000 ಬೆಲೆ.. ಶಕ್ತಿಯುತ ಹೊಸ 'ಬಜಾಜ್ ಫ್ರೀಡಂ' CNG ಬೈಕ್ ಶೀಘ್ರ ಮಾರಾಟಕ್ಕೆ!
ಬಜಾಜ್ ಫ್ರೀಡಂ 125 (Bajaj Freedom 125) ಜನಪ್ರಿಯ ಸಿಎನ್‌ಜಿ ಬೈಕ್ ಆಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಈ ಮೋಟಾರ್‌ಸೈಕಲ್ ಮಾರಾಟದಲ್ಲೂ ಕಂಪನಿಯು ಐತಿಹಾಸಿಕ ದಾಖಲೆಯೊಂದನ್ನು ಬರೆದಿದೆ. ನೂತನ ಬಜಾಜ್ ಫ್ರೀಡಂ ಬೈಕ್ ಬಿಡುಗಡೆಗೊಂಡು 9 ತಿಂಗಳು ಕಳೆಯುವ ಮೊದಲೇ ಸರಿ ಸುಮಾರು 50,047 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಸದ್ಯ, ಇದೇ ಮೋಟಾರ್‌ಸೈಕಲ್‌ನ್ನು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿಸಲು ಕಂಪನಿಯು ಮುಂದಾಗಿದೆ.
ನೂತನ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ಕನಿಷ್ಠ ರೂ.90,272 ಹಾಗೂ ಗರಿಷ್ಠ ರೂ.1.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಡ್ರಮ್, ಡ್ರಮ್ ಎಲ್ಇಡಿ ಮತ್ತು ಡಿಸ್ಕ್ ಎಲ್ಇಡಿ ಎಂಬ ಮೂರು ವಿಧದಲ್ಲಿ ಆಯ್ಕೆಯಲ್ಲಿ ದೊರೆಯುತ್ತದೆ. ಮೂಲಗಳ ಪ್ರಕಾರ, ಈ ಮೋಟಾರ್‌ಸೈಕಲ್‌ನ ಹೊಸ ಮಾದರಿ (ಮಾಡೆಲ್) ಅತಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಗರಿಷ್ಠ-ಶ್ರೇಣಿ ಮಾದರಿ (ಟಾಪ್- ಎಂಡ್ ಮಾಡೆಲ್) ಆಗಿರಲಿದೆ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ ಬಜಾಜ್ ಫ್ರೀಡಂ ಬೈಕ್ '125 ಸಿಸಿ' ಸಿಎನ್‌ಜಿ ಟೆಕ್ನಾಲಜಿಯ ಎಂಜಿನ್‌ನ್ನು ಹೊಂದಿದೆ. ಇದೇ ರೀತಿಯ ಸಿಎನ್‌ಜಿ ಟೆಕ್ನಾಲಜಿಯನ್ನು ಪಡೆದುಕೊಂಡಿರುವ 150 ಸಿಸಿ 'ಫ್ರೀಡಂ' ಮೋಟಾರ್‌ಸೈಕಲ್ ಕೂಡ ಮಾರಾಟಕ್ಕೆ ಬರಬಹುದು ಎಂದು ಹೇಳಲಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಮುಂದಿನ 12 ರಿಂದ 18 ತಿಂಗಳಲ್ಲಿ ನೂತನ 150 ಸಿಸಿ ಸಿಎನ್‌ಜಿ ಬೈಕ್ ಅದ್ದೂರಿಯಾಗಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಆದರೆ, ಈ ಕುರಿತಂತೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಬಜಾಜ್ ಫ್ರೀಡಂ 125 ಮೋಟಾರ್‌ಸೈಕಲ್ ವಿಶೇಷತೆಗಳೇನು: ಇದು 125 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 9.4 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 9.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಇದರೊಟ್ಟಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

ಹೊಸ ಬಜಾಜ್ ಫ್ರೀಡಂ 125 ಬೈಕ್ ಗರಿಷ್ಠ ಇಂಧನ ದಕ್ಷತೆ (Fuel efficiency) ಹೊಂದಿದೆ. ಇದು ತಲಾ 2 ಲೀಟರ್/ ಕೆಜಿಯ ಪೆಟ್ರೋಲ್ ಮತ್ತು ಸಿಎನ್‌ಜಿ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಪೆಟ್ರೋಲ್ ಮೋಡ್‌ನಲ್ಲಿ 130 ಕಿಲೋಮೀಟರ್ ಹಾಗೂ ಸಿಎನ್‌ಜಿ ಮೋಡ್‌ನಲ್ಲಿ 200 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಒಟ್ಟಾರೆಯಾಗಿ 330 ಕಿಲೋಮೀಟರ್ ಇಂಧನ ದಕ್ಷತೆಯನ್ನು ಒಳಗೊಂಡಿದೆ.
ಈ ಮೋಟಾರ್‌ಸೈಕಲ್ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಬಹುಮುಖ್ಯವಾಗಿ ಎಲ್ಇಡಿ ಹೆಡ್‌ಲೈಟ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಎಲ್‌ಸಿಡಿ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕೆರಿಬಿಯನ್ ಬ್ಲೂ, ಎಬೊನಿ ಬ್ಲ್ಯಾಕ್-ಗ್ರೇ, ಪ್ಯೂಟರ್ ಗ್ರೇ-ಬ್ಲ್ಯಾಕ್ ಮತ್ತು ರೇಸಿಂಗ್ ರೆಡ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.

ನೂತನ ಬಜಾಜ್ ಫ್ರೀಡಂ ಬೈಕ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ & ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಪಡೆದಿದೆ. ಸವಾರರ ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಈ ಮೋಟಾರ್‌ಸೈಕಲ್ 147 ಕೆಜಿ ತೂಕವಿದ್ದು, ರಸ್ತೆ ಮೇಲೆ ಬಿಗಿಯಾದ ಹಿಡಿತ ಒದಗಿಸಲು ವೀಲ್‌ಗಳು & ಟೈರ್‌ಗಳನ್ನು ತನ್ನದಾಗಿದಿಸಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








