ಬಜಾಜ್‌ಗೆ ಸೆಡ್ಡು ಹೊಡೆಯಲಿದೆಯೇ ಟಿವಿಎಸ್? 200 ಸಿಸಿ ಸೆಗ್ಮೆಂಟಿನಲ್ಲಿ ಶುರುವಾಯ್ತು ಪೈಪೋಟಿ

ಭಾರತದಲ್ಲಿ ಬಜಾಜ್ ಹಾಗೂ ಟಿವಿಎಸ್ ಮೋಟಾರ್‌ಸೈಕಲ್‌ಗಳ ನಡುವೆ ಮೊದಲಿನಿಂದಲೂ ತೀವ್ರ ಪೈಪೋಟಿಯಿದೆ. ವಿಶೇಷವಾಗಿ 200 ಸಿಸಿ ಸೆಗ್ಮೆಂಟಿನಲ್ಲಿ ಇನ್ನೂ ಹೆಚ್ಚು ಎಂದು ಹೇಳಬಹುದು, ಈ ವಿಭಾಗದಲ್ಲಿ ಬಜಾಜ್ ಪಲ್ಸರ್ ಸಿರೀಸ್ ಹಾಗೂ ಟಿವಿಎಸ್ ಆರ್‌ಟಿಆರ್ ಸಿರೀಸ್ ತುಂಬಾ ಜನಪ್ರಿಯವಾಗಿವೆ. ಇತ್ತೀಚೆಗೆ ಟಿವಿಎಸ್ ಕಂಪನಿ ಹೊಸ ಅಪ್‌ಡೇಟ್‌ಗಳೊಂದಿಗೆ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಮೊದಲಿನಿಂದಲೂ ಈ ಬೈಕ್‌ಗೆ ನೇರ ಪ್ರತಿಸ್ಪರ್ಧಿಯಾಗಿರುವ ಪಲ್ಸರ್ ಎನ್‌ಎಸ್ 200 ಬೈಕ್ ಅನ್ನು ಹೊಸ ಅಪಾಚಿಗೆ ಹೋಲಿಕೆ ಮಾಡಿದ್ದೇವೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೆಲೆಯು ರೂ. 1,53,990 (ಎಕ್ಸ್-ಶೋರೂಂ) ರಿಂದ ಪ್ರಾರಂಭವಾಗುತ್ತದೆ. ಪಲ್ಸರ್ ಎನ್ಎಸ್200 ಬೆಲೆಯು ರೂ. 1.58 ಲಕ್ಷ (ಎಕ್ಸ್-ಶೋರೂಂ) ಇದೆ. ಪಲ್ಸರ್ ಎನ್‌ಎಸ್ 200 ಬೈಕ್ 199.5 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ 9,750 ಆರ್‌ಪಿಎಂನಲ್ಲಿ 24.13 ಬಿಹೆಚ್ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 18.74 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

bajaj-pulsar-ns200-vs-tvs-apache-rtr-200-4v-comparison

ಅಪಾಚೆ ಆರ್‌ಟಿಆರ್ 200 4ವಿ ಬೈಕಿನಲ್ಲಿ 197.75 ಸಿಸಿ ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಇದು 9,000 ಆರ್‌ಪಿಎಂನಲ್ಲಿ 20.5 ಬಿಹೆಚ್ ಪವರ್ ಮತ್ತು 7,250 ಆರ್‌ಪಿಎಂನಲ್ಲಿ 17.25 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸ್ಲಿಪ್ಪರ್ ಕ್ಲಚ್ ಮೂಲಕ 5 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಬಜಾಜ್ ಪಲ್ಸರ್ ಎನ್‌ಎಸ್ 200 ಬೈಕಿನಲ್ಲಿ ಸಂಪೂರ್ಣ ಎಲ್ಇಡಿ ಲೈಟ್ ಸೆಟಪ್ ಅಳವಡಿಸಲಾಗಿದೆ. ಇನ್ಸ್ಟ್ರುಮೆಂಟ್ ಕನ್ಸೋಲ್ ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಗೇರ್ ಪೊಸಿಷನ್ ಇಂಡಿಕೇಟರ್, ಫ್ಯೂಲ್ ಎಕಾನಮಿ ಮತ್ತು ಆವರೇಜ್ ಫ್ಯೂಲ್ ಎಕಾನಮಿ ಹೊಂದಿದೆ.

bajaj-pulsar-ns200-vs-tvs-apache-rtr-200-4v-comparison

ಇವಿಷ್ಟೇ ಅಲ್ಲದೇ ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಅಪ್ ಸೈಡ್ ಡೌನ್ ಫ್ರಂಟ್ ಫೋರ್ಕ್ ಗಳು ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಅನ್ನು ಅಳವಡಿಸಲಾಗಿದೆ. ಇದು ರೋಡ್, ರೈನ್ ಮತ್ತು ಆಫ್-ರೋಡ್ ಎಂಬ ಮೂರು ರೈಡ್ ಮೋಡ್ ಗಳೊಂದಿಗೆ ಬರುತ್ತದೆ. ಈ ಬೈಕಿನ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಮುಂಭಾಗದಲ್ಲಿ 230 ಎಂಎಂ ಡಿಸ್ಕ್ ಅನ್ನು ಅಳವಡಿಸಲಾಗಿದೆ.

ಅಪಾಚೆ ಆರ್‌ಟಿಆರ್ 200 4ವಿ ಬೈಕಿನಲ್ಲಿ ರೆಡ್ ಅಲಾಯ್ ವೀಲ್‌ಗಳು, ಸಂಪೂರ್ಣ ಎಲ್‌ಇಡಿ ಲೈಟಿಂಗ್ ನೀಡಲಾಗಿದೆ. ರೇಸ್ ಅನಾಲಿಟಿಕ್ಸ್, ಲೀನ್ ಆಂಗಲ್ ಮೋಡ್, ಕ್ರ್ಯಾಶ್ ಅಲರ್ಟ್, ಕರೆ ಮತ್ತು ಎಸ್‌ಎಂಎಸ್ ನೋಟಿಫಿಕೇಷನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ವಾಯ್ಸ್ ಅಸಿಸ್ಟೆನ್ಸ್ ಹೊಂದಿರುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಹೊಂದಿದೆ.

ಇವಿಷ್ಟೇ ಅಲ್ಲದೇ ಅಪಾಚೆ ಆರ್‌ಟಿಆರ್ 200 4ವಿ ಬೈಕಿನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್, ಮೂರು ರೈಡ್ ಮೋಡ್ ಗಳು (ಅರ್ಬನ್, ಸ್ಪೋರ್ಟ್ ಮತ್ತು ರೈನ್) ಮತ್ತು ಅಡ್ಜಸ್ಟ್ ಮಾಡಬಹುದಾದ ಕ್ಲಚ್ ಮತ್ತು ಬ್ರೇಕ್ ಲಿವರ್‌ಗಳನ್ನು ನೀಡಲಾಗಿದೆ. ಬೈಕಿನ ಮುಂಭಾಗದಲ್ಲಿ 270 ಎಂಎಂ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, June 11, 2025, 10:20 [IST]
English summary
Bajaj pulsar ns200 vs tvs apache rtr 200 4v comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+