Ampere Magnus Neo: ಬೆಂಗಳೂರು-ದೆಹಲಿ ಯಶಸ್ವಿ ಪ್ರಯಾಣದ ಬಳಿಕ ಹೊಸ ಇವಿಗೆ ಫುಲ್ ಡಿಮ್ಯಾಂಡ್!

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಹೊಸದಾಗಿ ಬಿಡುಗಡೆ ಮಾಡಿರುವ ಎಲೆಕ್ಟ್ರಿಕ್ ಸ್ಕೂಟರ್ ಆಂಪಿಯರ್ ಮ್ಯಾಗ್ನಸ್ ನಿಯೋ (Ampere Magnus Neo), ಬೆಂಗಳೂರಿನಲ್ಲಿರುವ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರಧಾನ ಕಚೇರಿಯಿಂದ ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ್ ಗ್ಲೋಬಲ್ ಮೊಬಿಲಿಟಿ ಎಕ್ಸ್‌ಪೋ (Auto Expo 2025)ಗೆ ದಾಖಲೆಯ ಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 8 ದಿನಗಳ ಅವಧಿಯಲ್ಲಿ ಸುಮಾರು 2,300 ಕಿ.ಮೀ ದೂರವನ್ನು ಕ್ರಮಿಸಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಅಲ್ಲದೇ ಈ ಮಾಡಲ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ಕಂಪನಿ ತಿಳಿಸಿದೆ.

ಆಂಪಿಯರ್ ಮ್ಯಾಗ್ನಸ್‌ನ ಅಪ್‌ಡೇಟೆಡ್ ವೇರಿಯೆಂಟ್ ಆಗಿರುವ ಮ್ಯಾಗ್ನಸ್ ನಿಯೋ ಜನವರಿ 6, 2025 ರಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸಿ ಜನವರಿ 15, 2025 ರಂದು ಭಾರತ್ ಗ್ಲೋಬಲ್ ಮೊಬಿಲಿಟಿ ಎಕ್ಸ್‌ಪೋ 2025 ಅನ್ನು ತಲುಪಿ ದೆಹಲಿಯಲ್ಲಿ ಮುಕ್ತಾಯಗೊಳಿಸಿದೆ. ವೈವಿಧ್ಯಮಯ ಭೂಪ್ರದೇಶಗಳು ಮತ್ತು ಪರಿಸರಗಳ ಮೂಲಕ ಸುಮಾರು 2,300 ಕಿ.ಮೀ ದೂರವನ್ನು ಕ್ರಮಿಸಿದೆ.

bengaluru-delhi-ampere-magnus-neo-ev-scooter-ride-sets-record-for-longest-journey

ಮ್ಯಾಗ್ನಸ್ ನಿಯೋ, ಸ್ಟೈಲ್, ಪವರ್, ಉಳಿತಾಯ ಮತ್ತು ಸುರಕ್ಷತೆಯ ಅಂಶಗಳಲ್ಲಿ ಅದರ ಹಿಂದಿನದಕ್ಕಿಂತ ಹಲವಾರು ಅಪ್‌ಗ್ರೇಡ್‌ಗಳನ್ನು ಹೊಂದಿದೆ. ಇ-ಸ್ಕೂಟರ್ ಅತ್ಯಾಧುನಿಕ ಬ್ಯಾಟರಿ ತಂತ್ರಜ್ಞಾನದ LFP (ಲಿಥಿಯಂ ಐರನ್ ಫಾಸ್ಫೇಟ್) ಬ್ಯಾಟರಿಯನ್ನು ಒಳಗೊಂಡಿದೆ. ಇದು ವಿಸ್ತೃತ ಸವಾರಿಗಳಿಗಾಗಿ 100+ ಕಿ.ಮೀ ಪ್ರಮಾಣೀಕೃತ ರೇಂಜ್ ಒದಗಿಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ಹೊಸ ಮ್ಯಾಗ್ನಸ್ ನಿಯೋ ಎಲೆಕ್ಟ್ರಿಕ್ ಸ್ಕೂಟರ್ ಪೋರ್ಟಬಲ್ ಬ್ಯಾಟರಿಯನ್ನು ಕೂಡ ಸಪೋರ್ಟ್ ಮಾಡುವ ಜೊತೆಗೆ 5 ರಿಂದ 6 ಗಂಟೆಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ಸಂಪೂರ್ಣ ಚಾರ್ಜ್‌ಗೆ ಸಹಕರಿಸುತ್ತದೆ. ಇದಲ್ಲದೆ, ಇದು 65 ಕಿ.ಮೀ ವೇಗವನ್ನು ಸಾಧಿಸಬಹುದು, ವರ್ಧಿತ ಸ್ಥಿರತೆಗಾಗಿ 12 ಇಂಚಿನ ಅಲಾಯ್ ವೀಲ್‌ಗಳೊಂದಿಗೆ ನಿರ್ಮಿಸಲಾಗಿದೆ.

bengaluru-delhi-ampere-magnus-neo-ev-scooter-ride-sets-record-for-longest-journey

ವಿಶೇಷ ಪರಿಚಯಾತ್ಮಕ ಕೊಡುಗೆಯ ಭಾಗವಾಗಿ ಕೇವಲ 79,999 ರೂಪಾಯಿಗಳಿಗೆ ಬಿಡುಗಡೆಯಾದ ಮ್ಯಾಗ್ನಸ್ ನಿಯೋ ಮೆಟಾಲಿಕ್ ರೆಡ್, ಗ್ಲೇಶಿಯಲ್ ವೈಟ್, ಓಷನ್ ಬ್ಲೂ, ಗ್ಯಾಲಕ್ಟಿಕ್ ಗ್ರೇ ಮತ್ತು ಗ್ಲಾಸಿ ಬ್ಲ್ಯಾಕ್, ಪ್ರೀಮಿಯಂ ಡ್ಯುಯಲ್-ಟೋನ್ ಫಿನಿಶ್‌ನೊಂದಿಗೆ ಐದು ರೋಮಾಂಚಕ ಬಣ್ಣಗಳಲ್ಲಿ ಲಭ್ಯವಿದೆ. ಇದು 5 ವರ್ಷಗಳು ಅಥವಾ 75,000 ಕಿ.ಮೀ.ಗಳ ಗಮನಾರ್ಹ ಬ್ಯಾಟರಿ ವಾರೆಮಟಿ ಹೊಂದಿದೆ.

ಗ್ರೀವ್ಸ್ ಕಾಟನ್ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ಉಪಾಧ್ಯಕ್ಷ ನಾಗೇಶ್ ಬಸವನಹಳ್ಳಿ ಮಾತನಾಡಿ, ಬೆಂಗಳೂರಿನಲ್ಲಿ ಇ-ಸ್ಕೂಟರ್‌ಗೆ ಚಾಲನೆ ನೀಡಿದ ನಂತರ ಗೂಟಿ, ಶಮ್ಸಾಬಾದ್, ನಿರ್ಮಲ್, ನಾಗ್ಪುರ, ನರಸಿಂಗ್‌ಪುರ, ಲಲಿತ್‌ಪುರ ಮತ್ತು ಡೋಲ್ಪುರ್ ಸೇರಿದಂತೆ ಪ್ರಮುಖ ಪಟ್ಟಣಗಳು ​​ಮತ್ತು ನಗರಗಳ ಮೂಲಕ ಸಂಚರಿಸಿ, ಅಂತಿಮವಾಗಿ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಭಾರತ್ ಗ್ಲೋಬಲ್ ಮೊಬಿಲಿಟಿ ಎಕ್ಸ್‌ಪೋಗೆ ಸ್ಕೂಟರ್ ಆಗಮಿಸಿತು.

ರೇಂಜ್ ಆತಂಕವನ್ನು ನಿವಾರಿಸುವ ಮತ್ತು ಭಾರತದಲ್ಲಿ ಸುಸ್ಥಿರ ಚಲನಶೀಲತೆಗೆ ಪರಿವರ್ತನೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಯಶಸ್ವಿ ಸವಾರಿಯನ್ನು ಕೈಗೊಳ್ಳಲಾಯಿತು. ಭಾರತದಲ್ಲಿ ಇವಿ ಕ್ರಾಂತಿಯನ್ನು ಮುನ್ನಡೆಸಲು, ತಂತ್ರಜ್ಞಾನ, ಶೈಲಿ ಮತ್ತು ಕೈಗೆಟುಕುವಿಕೆಯ ಅತ್ಯುತ್ತಮತೆಯನ್ನು ಸಂಯೋಜಿಸುವ ಉನ್ನತ-ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ರಚಿಸುವ ಆಂಪಿಯರ್‌ನ ಬದ್ಧತೆಗೆ ಈ ಪ್ರವರ್ತಕ ಪ್ರಯಾಣವು ಸಾಕ್ಷಿಯಾಗಿದೆ ಎಂದರು.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, January 22, 2025, 10:00 [IST]
English summary
Bengaluru delhi ampere magnus neo ev scooter ride sets record for longest journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+