ಮಂಗಳವಾರವಷ್ಟೇ ಬಿಡುಗಡೆ.. 49 Km ಮೈಲೇಜ್, ಹೊಸ ಯಮಹಾ XSR 155ಗೆ ಪರ್ಯಾಯ ಬೈಕ್‌ಗಳಿವು.. ಬೆಲೆ ಎಷ್ಟು?

ಹೊಚ್ಚ ಹೊಸ ಯಮಹಾ ಎಕ್ಸ್ಎಸ್ಆರ್ 155 (Yamaha XSR 155) ಮೋಟಾರ್‌ಸೈಕಲ್, ಮಂಗಳವಾರ ಬಿಡುಗಡೆಗೊಂಡಿತ್ತು. ಇದು ರೂ.1.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 155-ಸಿಸಿ ಲಿಕ್ವಿಡ್-ಕೂಲ್ಡ್, 4-ವಾಲ್ವ್ ಪೆಟ್ರೋಲ್ ಎಂಜಿನ್‌ ಹಾಗೂ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 49 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಮೆಟಾಲಿಕ್ ಗ್ರೇ, ವಿವಿಡ್ ರೆಡ್, ಗ್ರೇಯಿಶ್ ಗ್ರೀನ್ ಮೆಟಾಲಿಕ್ ಹಾಗೂ ಮೆಟಾಲಿಕ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್‌ ಮತ್ತು ಬ್ಲ್ಯೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ನೀವು ಇದೇ 'ಯಮಹಾ ಎಕ್ಸ್ಎಸ್ಆರ್ 155'ಗೆ ಬದಲಾಗಿ ಟಿವಿಎಸ್ ರೋನಿನ್, ಬಜಾಜ್ ಪಲ್ಸರ್ 150 ಹಾಗೂ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್‌ಗಳನ್ನು ಖರೀದಿ ಮಾಡಬಹುದು. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

Best 3 alternative bikes for New Yamaha XSR 155 Ronin Pulsar 150 And Hunter 350

ಟಿವಿಎಸ್ ರೋನಿನ್ (TVS Ronin):

ಇದೊಂದು ಜನಪ್ರಿಯ ಬೈಕ್ ಎಂದೇ ಹೆಸರುವಾಸಿಯಾಗಿದೆ. 'ಯಮಹಾ ಎಕ್ಸ್ಎಸ್ಆರ್ 155'ಗೆ ಅತ್ಯುತ್ತಮವಾದ ಪರ್ಯಾಯ ಆಯ್ಕೆಯಾಗಲಿದೆ. ರೂ.1.25 ಲಕ್ಷದಿಂದ ರೂ.1.59 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಪಡೆದಿದೆ. ಲೈಟ್ನಿಂಗ್ ಬ್ಲ್ಯಾಕ್, ಮಿಡ್‌ನೈಟ್ ಬ್ಲೂ, ನಿಂಬಸ್ ಗ್ರೇ, ಮ್ಯಾಗ್ಮಾ ರೆಡ್, ಗ್ಲೇಸಿಯರ್ ಸಿಲ್ವರ್ ಹಾಗೂ ಚಾರ್ಕೋಲ್ ಎಂಬರ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ನೂತನ 'ರೋನಿನ್' 225.9-ಸಿಸಿ ಸಿಂಗಲ್-ಸಿಲಿಂಡರ್, 4-ಸ್ಟ್ರೋಕ್ ಪೆಟ್ರೋಲ್ ಎಂಜಿನ್‌ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 42.95 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್, ಎಂಜಿನ್ ಕಿಲ್ ಸ್ವಿಚ್ ಹಾಗೂ ಸರ್ವಿಸ್ ಡ್ಯೂ ಇಂಡಿಕೇಟರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

Best 3 alternative bikes for New Yamaha XSR 155 Ronin Pulsar 150 And Hunter 350

ಬಜಾಜ್ ಪಲ್ಸರ್ 150 (Bajaj Pulsar 150):

ಈ ಮೋಟಾರ್‌ಸೈಕಲ್‌ನ್ನು 'ಯಮಹಾ ಎಕ್ಸ್ಎಸ್ಆರ್ 155'ಗೆ ಬದಲಾಗಿ ಕೊಂಡುಕೊಳ್ಳಬಹುದಾಗಿದೆ. ರೂ.1.05 ಲಕ್ಷದಿಂದ ರೂ.1.12 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಸ್ಪಾರ್ಕಲ್ ಬ್ಲ್ಯಾಕ್ ರೆಡ್, ಸ್ಪಾರ್ಕಲ್ ಬ್ಲ್ಯಾಕ್ ಸಿಲ್ವರ್, ಸ್ಯಾಫೈರ್ ಬ್ಲ್ಯಾಕ್ ಬ್ಲೂ ಹಾಗೂ ಸ್ಪಾರ್ಕಲ್ ಬ್ಲ್ಯಾಕ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.

ಹೊಸ 'ಪಲ್ಸರ್' 149.5 ಸಿಸಿ ಏರ್-ಕೋಲ್ಡ್, 4-ಸ್ಟ್ರೋಕ್, ಪೆಟ್ರೋಲ್ ಎಂಜಿನ್ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 47.5 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಮೊಬೈಲ್ ಕನೆಕ್ಟಿವಿಟಿ, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್ ಹಾಗೂ ಎಂಜಿನ್ ಕಿಲ್ ಸ್ವಿಚ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

Best 3 alternative bikes for New Yamaha XSR 155 Ronin Pulsar 150 And Hunter 350

ರಾಯಲ್ ಎನ್‌ಫೀಲ್ಡ್ ಹಂಟರ್ 350 (Royal Enfield Hunter 350):

ಇದನ್ನು ಕೂಡ 'ಯಮಹಾ ಎಕ್ಸ್ಎಸ್ಆರ್ 155'ಗೆ ಪರ್ಯಾಯವಾಗಿ ತೆಗೆದುಕೊಳ್ಳಬಹುದು. ರೂ.1.38 ಲಕ್ಷದಿಂದ ರೂ.1.67 ಲಕ್ಷ ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಅತ್ಯುತ್ತಮವಾದ ವಿನ್ಯಾಸವನ್ನು ತನ್ನದಾಗಿಸಿಕೊಂಡಿದೆ. ಫ್ಯಾಕ್ಟರಿ ಬ್ಲ್ಯಾಕ್, ರಿಯೋ ವೈಟ್, ಡ್ಯಾಪರ್ ಗ್ರೇ, ಟೋಕಿಯೋ ಬ್ಲಾಕ್ ಹಾಗೂ ರೆಬೆಲ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Best 3 alternative bikes for New Yamaha XSR 155 Ronin Pulsar 150 And Hunter 350

ನೂತನ 'ಹಂಟರ್' 349 ಸಿಸಿ ಪೆಟ್ರೋಲ್ ಎಂಜಿನ್‌ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 36 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಟೈಪ್-ಸಿ ಯುಎಸ್‌ಬಿ ಫಾಸ್ಟ್ ಚಾರ್ಜರ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

Article Published On: Friday, November 14, 2025, 15:31 [IST]
English summary
Best 3 alternative bikes for new yamaha xsr 155 ronin pulsar 150 and hunter 350
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+