Ather: 1.15 ಲಕ್ಷ.. 160 Km ರೇಂಜ್, ಜನಪ್ರಿಯ ಎಥರ್ ರಿಜ್ಟಾಗೆ 3 ಬದಲಿ ಇ-ಸ್ಕೂಟರ್‌ಗಳಿವು.. ಬೆಲೆ ಎಷ್ಟು, ವಿಶೇಷತೆಗಳೇನು?

ಎಥರ್ ರಿಜ್ಟಾ (Ather Rizta) ಜನಪ್ರಿಯ ಇ-ಸ್ಕೂಟರ್ ಆಗಿದೆ. ಇದು ರೂ.1.15 ಲಕ್ಷದಿಂದ ರೂ.1.32 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಸಿಯಾಚಿನ್ ವೈಟ್, ಡೆಕ್ಕನ್ ಗ್ರೇ, ಕಾರ್ಡಮೊಮ್ ಗ್ರೀನ್, ಟೆರಾಕೋಟಾ ರೆಡ್ ಮತ್ತು ಪ್ಯಾಂಗೊಂಗ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 150 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,285 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಬರೋಬ್ಬರಿ 125 ಕೆಜಿ ತೂಕವಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್, 2.9 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 3.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 123 ರಿಂದ 160 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 7-ಇಂಚಿನ ಎಲ್‌ಸಿಡಿ ಸ್ಕ್ರೀನ್ ಮತ್ತು ಮಲ್ಟಿ ಪರ್ಪಸ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

Best 3 Alternative Electric Scooters For Ather Rizta TVS Orbiter Bajaj Chetak And Hero Vida VX2

ನೀವು ಇದೇ 'ಎಥರ್ ರಿಜ್ಟಾ'ಗೆ ಪರ್ಯಾಯವಾಗಿ ಈ 3 ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಟಿವಿಎಸ್ ಆರ್ಬಿಟರ್, ಬಜಾಜ್ ಚೇತಕ್ ಹಾಗೂ ಹೀರೋ ವಿಡಾ ವಿಎಕ್ಸ್2ಗಳನ್ನು ಖರೀದಿ ಮಾಡಬಹುದು. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಟಿವಿಎಸ್ ಆರ್ಬಿಟರ್ (TVS Orbiter):

ಹೊಸ 'ಆರ್ಬಿಟರ್' ಇ-ಸ್ಕೂಟರ್‌ನ್ನು 'ಎಥರ್ ರಿಜ್ಟಾ'ಗೆ ಬದಲಾಗಿಯೂ ಕೊಂಡುಕೊಳ್ಳಬಹುದು. ರೂ.99,900 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ನಿಯಾನ್ ಸನ್‌ಬರ್ಸ್ಟ್, ಸ್ಟ್ರಾಟೋಸ್ ಬ್ಲೂ, ಲೂನಾರ್ ಗ್ರೇ, ಮಾರ್ಷಿಯನ್ ಕಾಪರ್, ಕಾಸ್ಮಿಕ್ ಟೈಟಾನಿಯಂ ಮತ್ತು ಸ್ಟೆಲ್ಲಾರ್ ಸಿಲ್ವರ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 169 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,330 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.

Best 3 Alternative Electric Scooters For Ather Rizta TVS Orbiter Bajaj Chetak And Hero Vida VX2

ಈ ಎಲೆಕ್ಟ್ರಿಕ್ ಸ್ಕೂಟರ್ 3.1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 158 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಹಿಲ್ ಹೋಲ್ಡ್ ಫಂಕ್ಷನ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್‌ ಮತ್ತು ಯುಎಸ್‌ಬಿ ಚಾರ್ಜಿಂಗ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳಿವೆ.

ಬಜಾಜ್ ಚೇತಕ್ (Bajaj Chetak):

ಇದು 'ಎಥರ್ ರಿಜ್ಟಾ'ಗೆ ಪರ್ಯಾಯ ಆಯ್ಕೆಯಾಗಿದೆ. ಹಲವು ರೂಪಾಂತರಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ರೂ.1.02 ಲಕ್ಷದಿಂದ ರೂ.1.22 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಸೈಬರ್ ವೈಟ್, ಬ್ರೂಕ್ಲಿನ್ ಬ್ಲಾಕ್ ಮತ್ತು ಇಂಡಿಗೊ ಮೆಟಾಲಿಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 168 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,355 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

Best 3 Alternative Electric Scooters For Ather Rizta TVS Orbiter Bajaj Chetak And Hero Vida VX2

ನೂತನ 'ಚೇತಕ್' ಇ-ಸ್ಕೂಟರ್ 3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 127 ರಿಂದ 153 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕಂಟ್ರೋಲ್ ಹಾಗೂ ಮ್ಯೂಸಿಕ್ ಕಂಟ್ರೋಲ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಹೀರೋ ವಿಡಾ ವಿಎಕ್ಸ್2 (Hero Vida VX2):

ಈ ಸ್ಕೂಟರ್‌ನ್ನು 'ಎಥರ್ ರಿಜ್ಟಾ'ಗೆ ಬದಲಾಗಿಯೂ ಮನೆಗೆ ತರಬಹುದು. ರೂ.99,490 ದಿಂದ ರೂ.1.21 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ವಿಎಕ್ಸ್2 ಗೋ ಮತ್ತು ವಿಎಕ್ಸ್2 ಪ್ಲಸ್ ಎಂಬ ರೂಪಾಂತರಗಳನ್ನು ಪಡೆದಿದೆ. ಪರ್ಲ್ ಬ್ಲ್ಯಾಕ್, ನೆಕ್ಸಸ್ ಬ್ಲೂ, ಪರ್ಲ್ ರೆಡ್, ಮ್ಯಾಟ್ ವೈಟ್, ಮ್ಯಾಟ್ ಲೈಮ್ ಹಾಗೂ ಮೆಟಾಲಿಕ್ ಗ್ರೇ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,301 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

Best 3 Alternative Electric Scooters For Ather Rizta TVS Orbiter Bajaj Chetak And Hero Vida VX2

ಹೊಸ 'ವಿಡಾ ವಿಎಕ್ಸ್2' ಇ-ಸ್ಕೂಟರ್, 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 92 ರಿಂದ 142 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕ್ಲೌಡ್ ಕನೆಕ್ಟಿವಿಟಿ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

More from DriveSpark

Article Published On: Monday, December 15, 2025, 15:56 [IST]
English summary
Best 3 alternative electric scooters for ather rizta tvs orbiter bajaj chetak and hero vida vx2
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+