ಜನಪ್ರಿಯ 'ಹೋಂಡಾ ಆಕ್ಟಿವಾ ಇ'ಗೆ ಬದಲಿ ಆಯ್ಕೆಯಾಗಬಲ್ಲ 3 ಸ್ಕೂಟರ್‌ಗಳಿವು.. ಟಾಪ್ ರೇಂಜ್, ಬಜೆಟ್ ಬೆಲೆ!
ಹೋಂಡಾ ಆಕ್ಟಿವಾ ಇ (Honda Activa e) ಪ್ರಖ್ಯಾತ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು 2 ವಿಧದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗುತ್ತದೆ. ಇದರ ಸ್ಟ್ಯಾಂಡರ್ಡ್ ಮಾಡೆಲ್ ರೂ.1.17 ಲಕ್ಷ ಮತ್ತು ರೋಡ್‌ಸಿಂಕ್ ಮಾಡೆಲ್ ರೂ.1.52 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಈ ಸ್ಕೂಟರ್ 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಎರಡು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 102 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ನೂತನ 'ಆಕ್ಟಿವಾ ಇ'ಗೆ ಪರ್ಯಾಯವಾಗಿ ಗ್ರಾಹಕರು ಈ 3 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿ ಮಾಡಬಹುದು. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಯೋಣ.
ಬಜಾಜ್ ಚೇತಕ್ 3501 (Bajaj Chetak 3501): ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1,27 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 153 ಕಿಲೋಮೀಟರ್ ಓಡುತ್ತದೆ. 73 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

ಈ ಬಜಾಜ್ ಚೇತಕ್ 3501 ಇ-ಸ್ಕೂಟರ್ ಪಿಸ್ತಾ ಗ್ರೀನ್, ಹ್ಯಾಝೆಲ್‌ನಟ್, ಇಂಡಿಗೊ ಮೆಟಾಲಿಕ್, ಬ್ರೂಕ್ಲಿನ್ ಬ್ಲ್ಯಾಕ್ ಹಾಗೂ ಮ್ಯಾಟ್ ಸ್ಕಾರ್ಲೆಟ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಡಿಸ್ಕ್ & ಹಿಂಭಾಗ (ರೇರ್) ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಟಿವಿಎಸ್ ಐಕ್ಯೂಬ್ (TVS iQube): ಇದು ಕೂಡ ಜನಪ್ರಿಯ ಸ್ಕೂಟರ್ ಆಗಿದೆ. ಇದರ 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಹೊಂದಿರುವ ಮಾಡೆಲ್, ರೂ.1.07 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 75 ಕಿಲೋಮೀಟರ್ ರೇಂಜ್ ಕ್ರಮಿಸುತ್ತದೆ. 75 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

ನೂತನ ಟಿವಿಎಸ್ ಐಕ್ಯೂಬ್ 2.2 ಕೆಡಬ್ಲ್ಯೂಹೆಚ್ ಮಾಡೆಲ್ ವಾಲ್ನಟ್ ಬ್ರೌನ್ ಹಾಗೂ ಪರ್ಲ್ ವೈಟ್ ಎಂಬ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಈ ಸ್ಕೂಟರ್ 110 ಕೆಜಿ ತೂಕವಿದ್ದು, 5-ಇಂಚಿನ ಟಿಎಫ್‌ಟಿ ಸ್ಕ್ರೀನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ವೆಹಿಕಲ್ ಕ್ರ್ಯಾಶ್ ಮತ್ತು ಟೌ ಅಲರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಹೆಚ್ಚಿನ ಲಗೇಜ್ ಸಾಗಿಸಲು 30 ಲೀ. ಸಾಮರ್ಥ್ಯದ ಸೀಟ್ ಸ್ಪೇಸ್‌ನ್ನು ಒಳಗೊಂಡಿದೆ.

ಎಥರ್ ರಿಜ್ಟಾ (Ather Rizta): ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1.12 ಲಕ್ಷದಿಂದ ರೂ.1.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಇದು 2.9 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 123 ರಿಂದ 160 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಈ ಎಲೆಕ್ಟ್ರಿಕ್ ಸ್ಕೂಟರ್ 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಸಿಯಾಚಿನ್ ವೈಟ್ ಮೊನೊ, ಡೆಕ್ಕನ್ ಗ್ರೇ ಮೊನೊ, ಪ್ಯಾಂಗೊಂಗ್ ಬ್ಲೂ ಡ್ಯುಯೊ, ಕಾರ್ಡಮೊಮ್ ಗ್ರೀನ್ ಡ್ಯುಯೊ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ. 7-ಇಂಚಿನ ಎಲ್‌ಸಿಡಿ ಸ್ಕ್ರೀನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications