'ಸ್ಪ್ಲೆಂಡರ್ ಪ್ಲಸ್'ಗಿಂತ ಉತ್ತಮವಾಗಿರುವ ಬೈಕ್‌ಗಳಿವು.. ಹಳ್ಳಿಗರು ತೆಗೆದುಕೊಳ್ಳಬಹುದು, ಬೆಲೆಯೂ ಕಮ್ಮಿ!

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಪ್ರಮುಖ ಮೋಟಾರ್‌ಸೈಕಲ್ ಆಗಿದೆ. ಇದು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯಲಿದ್ದು, 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹೀಗಾಗಿ ಗ್ರಾಮೀಣ ಭಾಗದ ಜನರು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ನಿತ್ಯ ಜಮೀನಿಗೆ ಹೋಗಲು.. ಮೇವು ತರಲು ಈ ಬೈಕ್‌ನ್ನು ಬಳಕೆ ಮಾಡುತ್ತಾರೆ. ಅದರ ಹೊರತಾಗಿಯೂ ಹಳ್ಳಿಯಲ್ಲಿ ವಾಸಿಸುವವರೂ 'ಸ್ಪ್ಲೆಂಡರ್ ಪ್ಲಸ್'ಗೆ ಬದಲಾಗಿ ಬಜಾಜ್ ಪ್ಲಾಟಿನಾ 100 (Bajaj Platina 100), ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe) ಹಾಗೂ ಬಜಾಜ್ ಪಲ್ಸರ್ 125 (Bajaj Pulsar 125) ಮೋಟಾರ್‌ಸೈಕಲ್‌ಗಳನ್ನು ಖರೀದಿ ಮಾಡಬಹುದು. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

'ಬಜಾಜ್ ಪ್ಲಾಟಿನಾ 100' ಗ್ರಾಮೀಣ ಜನರ ಅಂಬಾರಿ..

ಇದು ರೂ.69,000 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 102 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್‌ನ್ನು ಹೊಂದಿದೆ. 7.7 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 8.3 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

Best 3 Bikes For Village Buyers Other Than Hero Splendor Plus Detais

ಈ ಬೈಕ್ 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು 17-ಇಂಚಿನ ಅಲಾಯ್ ವೀಲ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಮತ್ತು ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಸ್ಪ್ಲೆಂಡರ್ ಅಲ್ಲ.. ಹೀರೋ ಹೆಚ್ಎಫ್ ಡಿಲಕ್ಸ್' ಮನಸೋಲದವರೇ ಇಲ್ಲ..

ಇದು ರೂ.62,000 ರಿಂದ ರೂ.70,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 97.2 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 8.02 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

Best 3 Bikes For Village Buyers Other Than Hero Splendor Plus Detais

ಈ ನೂತನ ಬೈಕ್ 70 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಬ್ಲ್ಯಾಕ್ ವಿತ್ ಪರ್ಪಲ್, ಬ್ಲ್ಯಾಕ್ ವಿತ್ ರೆಡ್, ಟೆಕ್ನೋ ಬ್ಲ್ಯೂ ಮತ್ತು ಹೆವಿ ಗ್ರೇ ವಿತ್ ಗ್ರೀನ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್ ಮತ್ತು ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

'ಬಜಾಜ್ ಪಲ್ಸರ್ 125' ಹಳ್ಳಿಗರ ನೆಚ್ಚಿನ ಐರಾವತ..

ಇದು ಆರಂಭಿಕ ಶ್ರೇಣಿ (ಎಂಟ್ರಿ ಲೆವೆಲ್) ಪ್ರೀಮಿಯಂ ಬೈಕ್ ಆಗಿದ್ದು, ರೂ.86,000 ರಿಂದ ರೂ.95,000 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 124.4 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 11.8 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 10.8 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 51 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Best 3 Bikes For Village Buyers Other Than Hero Splendor Plus Detais

ಈ ಮೋಟಾರ್‌ಸೈಕಲ್ ಫುಲ್ ಡಿಜಿಟಲ್ ಕನ್ಸೋಲ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. ಇದು 142 ಕೆಜಿ ತೂಕವಿದ್ದು, 11.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.

Best 3 Bikes For Village Buyers Other Than Hero Splendor Plus Detais

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, June 1, 2025, 22:35 [IST]
English summary
Best 3 bikes for village buyers other than hero splendor plus detais
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+